AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಪ್ಪ-ಅಮ್ಮ ಇರುವ ಫ್ಯಾಮಿಲಿ ವಾಟ್ಸಾಪ್ ಗ್ರೂಪ್​​​ನಲ್ಲಿ ಬೀಯರ್ ಫೋಟೊ ಹಂಚಿಕೊಂಡು ಪಜೀತಿಗೆ ಸಿಲುಕಿಕೊಂಡ ಯುವಕ

ಯುವಕನೊಬ್ಬ ಆಕಸ್ಮಾತಾಗಿ ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್​​​ಗೆ ಬಿಯರ್ ಬಾಟಲಿಯ ಫೋಟೊ ಕಳುಹಿಸಿ ಪಜೀತಿಗೆ ಸಿಳುಕಿದ್ದಾನೆ. ಈ ಘಟನೆಯ ಕುರಿತ ವಾಟ್ಸ್ಆಪ್ ಸ್ಕ್ರೀನ್ ಶಾಟ್​​ನ್ನು ಆತನ ಸಹೋದರಿ ಸಾನಿಯಾ ಧವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಅಪ್ಪ-ಅಮ್ಮ ಇರುವ ಫ್ಯಾಮಿಲಿ ವಾಟ್ಸಾಪ್ ಗ್ರೂಪ್​​​ನಲ್ಲಿ ಬೀಯರ್ ಫೋಟೊ ಹಂಚಿಕೊಂಡು ಪಜೀತಿಗೆ ಸಿಲುಕಿಕೊಂಡ ಯುವಕ
ವೈರಲ್​ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on: Jun 03, 2023 | 5:13 PM

Share

ತನ್ನ ಮಗ ಯಾವುದೇ ರೀತಿಯ ಕೆಟ್ಟ ಚಟದ ಗೀಳಿಗೆ ಬಲಿಯಾಗಬಾರದು ಎಂದು ಪೋಷಕರು ಯಾವಾಗಲು ಬಯಸುತ್ತಾರೆ. ಮಕ್ಕಳು ಕುಡಿತ, ಸಿಗರೆಟ್ ಸೇದುವುದು ಇತ್ಯಾದಿ ಚಟಗಳಿಗೆ ಕೈ ಹಾಕದಂತೆ ಪೋಷಕರು ನೋಡಿಕೊಳ್ಳುತ್ತಿರುತ್ತಾರೆ. ಆದರೆ ಅಪ್ಪಿತಪ್ಪಿ ಏನಾದರೂ ಮಗ ಕುಡಿದಿದ್ದಾನೆ ಎಂದು ತಂದೆತಾಯಿಗೆ ಗೊತ್ತಾದರೆ, ಮನೆಯಲ್ಲಿ ಮಹಾಭಾರತವೇ ನಡೆದುಬಿಡುತ್ತದೆ. ಹಾಗೂ ಇನ್ನು ಮುಂದೆ ಕುಡಿಯದಂತೆ ಬೈಯುತ್ತಾ ಬುದ್ಧಿವಾದ ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಅಕಸ್ಮಾತಾಗಿ ತನ್ನ ಕುಟುಂಬದ ವಾಟ್ಸ್ಆಪ್ ಗ್ರೂಪ್​​​ನಲ್ಲಿ ಬೀಯರ್ ಬಾಟಲಿ ಫೋಟೊವನ್ನು ಶೇರ್ ಮಾಡಿ ಆತ ಪೋಷಕರ ಕೋಪಕ್ಕೆ ಗುರಿಯಾಗಿದ್ದಾನೆ.

ವಾಟ್ಸ್ಆಪ್ ಗ್ರೂಪ್​​​ನಲ್ಲಿ ತಂದೆ ತಾಯಿ ಹಾಗೂ ಮಗನ ನಡುವೆ ನಡೆದ ಸಂಭಾಷಣೆಯ ಸ್ಕ್ರೀನ್ಶಾಟ್​​​ನ್ನು ಆ ಯುವಕನ ಸಹೋದರಿ ಸಾನಿಯಾ ಧವನ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಶುಕ್ರವಾರ ಐಪಿಎಲ್​​​ನಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯದ ಉತ್ಸಾಹದಲ್ಲಿ, ಯುವಕ ಕುಟುಂಬದ ವಾಟ್ಸ್ಆಪ್ ಗ್ರೂಪಿಗೆ ಕೈಯಲ್ಲಿ ಬಿಯರ್ ಬಾಟಲ್ ಹಿಡಿದ ಫೋಟೋವನ್ನು ಕಳುಹಿಸಿದನು. ಜೊತೆಗೆ ‘ಮುಂಬೈ ಗೆಲುವಿಗಾಗಿ…. ಹೋಗೋಣ’ ಎಂದು ಬರೆದುಕೊಂಡಿದ್ದಾನೆ.

ಮಕ್ಕಳ ಕೈಯಲ್ಲಿ ಸಾರಾಯಿ ಬಾಟಲಿಗಳನ್ನು ಕಂಡರೆ ಸಹಜವಾಗಿ ಪೋಷಕರು ಕೋಪಗೊಳ್ಳುತ್ತಾರೆ ಅಲ್ಲವೆ ಅದೇ ರೀತಿ ಈತನ ಪೋಷಕರು ಕೂಡಾ ಮಗ ಬೀಯರ್ ಬಾಟಲಿಯ ಫೋಟೋವನ್ನು ಹಂಚಿಕೊಂಡಿದ್ದಕ್ಕೆ ಕೋಪಗೊಂಡು ತಕ್ಷಣ ವಾಟ್ಸ್ಆಪ್ ಗ್ರೂಪಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಆತನ ತಂದೆ ‘ಏನಿದು’ ಎಂದು ಪ್ರಶ್ನಿಸಿದ್ದಾರೆ. ತಾಯಿ ‘ನೀನು ಬಿಯರ್ ಕುಡಿದಿದ್ದೀಯಾ’ ಎಂದು ಕೇಳಿದ್ದಾರೆ. ಮತ್ತೊಂದೆಡೆ ಸಾನಿಯಾ ತನ್ನ ಸಹೋದರನಿಗೆ ಮೆಸೇಜ್ ಮಾಡಿ ಗ್ರೂಪ್​​​ಗೆ ಕಳುಹಿಸಿದ ಬೀಯರ್ ಫೋಟೋವನ್ನು ತಕ್ಷಣ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಅವರ ಪೋಷಕರು ಆ ಫೋಟೊವನ್ನು ಆಗಲೇ ನೋಡಿ ಬಿಟ್ಟಿದ್ದರು.

ಇದನ್ನೂ ಓದಿ; Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ&;.ವೈರಲ್​​​ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ

ಈ ಪೋಸ್ಟ್ ಟ್ವಿಟರ್​​​ನಲ್ಲಿ ವೈರಲ್ ಆಗಿದ್ದು, 1.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 20.8 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್​​​ಗಳೂ ಈ ವೀಡಿಯೋಗೆ ಹರಿದು ಬಂದಿದೆ. ಒಬ್ಬ ಬಳಕೆದಾರರು ‘ಆ ಯುವಕ ಇನ್ನೂ ಬದುಕಿದ್ದಾನಾ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ಕೂಡಾ ಇದೇ ರೀತಿ ಒಮ್ಮೆ ಕಾಲೇಜು ವಾಟ್ಸಾಪ್ ಗ್ರೂಪಿನಲ್ಲಿ ನನ್ನ ಸ್ನೇಹಿತ ಸಿಗರೇಟ್ ಸೇದುವ ಫೋಟೊವನ್ನು ಹಂಚಿಕೊಂಡು ಪಜೀತಿಗೆ ಸಿಲುಕಿದ್ದೆ’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ