ಫ್ಯಾಮಿಲಿ ಜತೆಗೆ ದೆಹಲಿ ರೆಸ್ಟೋರೆಂಟ್‌ಗೆ ಹೋದ ಯುವತಿ ಬಿಲ್ ನೋಡಿ ಶಾಕ್

ಈಗಿನ ಕಾಲದಲ್ಲಿ ಊಟ ತಿಂಡಿ ಕೂಡ ದುಬಾರಿಯಾಗಿದೆ. ಇದೀಗ ಲಂಡನ್‌ನಿಂದ ಭಾರತಕ್ಕೆ ಬಂದ ಯುವತಿಯೊಬ್ಬಳು ವಿದೇಶಿ ಜೀವನಕ್ಕೂ ಇಲ್ಲಿಗೂ ಏನು ವ್ಯತ್ಯಾಸ ಇಲ್ಲ ಎಂದೆನಿಸಿದೆ. ದೆಹಲಿಯ ರೆಸ್ಟೋರೆಂಟ್ ನ ಬಿಲ್ ನೋಡಿ ಶಾಕ್ ಆಗಿದ್ದು, ಆಕೆ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಫ್ಯಾಮಿಲಿ ಜತೆಗೆ ದೆಹಲಿ ರೆಸ್ಟೋರೆಂಟ್‌ಗೆ ಹೋದ ಯುವತಿ ಬಿಲ್ ನೋಡಿ ಶಾಕ್
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 22, 2026 | 10:05 PM

ಸ್ನೇಹಿತರು, ಕುಟುಂಬದವರ ಜತೆಗೆ ಹೊರಗಡೆ ಹೋದಾಗ ರೆಸ್ಟೋರೆಂಟ್ ಗಳಿಗೆ (restaurant) ಊಟಕ್ಕೆಂದು ಹೋಗುವುದು ಸಹಜ. ಇದೀಗ ವಿದೇಶದಿಂದ ಬಂದ ಯುವತಿ ದೆಹಲಿಯ ರೆಸ್ಟೋರೆಂಟ್‌ ಗೆ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಊಟಕ್ಕೆಂದು ತೆರಳಿದ್ದಾಳೆ. ಇದೇ ವೇಳೆ ಬಿಲ್ ನೋಡಿ ಶಾಕ್ ಆಗಿದ್ದು ದೆಹಲಿ ಹಾಗೂ ಲಂಡನ್‌ನಲ್ಲಿರುವ ರೆಸ್ಟೋರೆಂಟ್ ಬಿಲ್‌ಗಳನ್ನು ಹೋಲಿಕೆ ಮಾಡಿದ್ದಾಳೆ. ಲಂಡನ್ ನಂತೆಯೇ ಇಲ್ಲಿನ ರೆಸ್ಟೋರೆಂಟ್ ಗಳು ತುಂಬಾನೇ ದುಬಾರಿ ಎಂದು ಹೇಳಿದ್ದಾಳೆ. ಆಕೆ ಮಾಡಿದ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿ ಹೋಟೆಲ್‌ಗೂ ಲಂಡನ್ ರೆಸ್ಟೋರೆಂಟ್ ಗೂ ಏನು ವ್ಯತ್ಯಾಸ ಇಲ್ಲ

Loading...

ಅನನ್ಯ ನಾರಂಗ್ (Ananya Naarang) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು, ಬ್ರಿಟಿಷ್ ರಾಜಧಾನಿ ಲಂಡನ್ ನಲ್ಲಿ ಖರ್ಚು ಮಾಡುತ್ತಿದ್ದಷ್ಟೇ ಹಣವನ್ನು ದೆಹಲಿಯಲ್ಲಿ ಊಟಕ್ಕಾಗಿ ಖರ್ಚು ಮಾಡಬೇಕಾಗಿದೆ ಎಂದಿದ್ದಾರೆ. ಲಂಡನ್‌ನಲ್ಲಿ ಎರಡು ಪಾನೀಯಗಳೊಂದಿಗೆ ಊಟಕ್ಕೆ ಸುಮಾರು 60 ಪೌಂಡ್‌ಗಳು (ಸುಮಾರು 7,000 ರೂ) ವೆಚ್ಚವಾಗುತ್ತಿತ್ತು. ದೆಹಲಿಯ ಯೋಗ್ಯ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ 4,000 ರಿಂದ 5,000 ರೂ ಕೈಯಲ್ಲಿ ಇಟ್ಟುಕೊಳ್ಳಬಹುದು. ಕಾಕ್‌ಟೇಲ್‌ಗಳು, ಮೇನ್ ಕೋರ್ಸ್‌ಗಳು ಹಾಗೂ ಸಿಹಿತಿಂಡಿಗಳ ಬೆಲೆಗಳು ಈಗ ಗಗನಕ್ಕೇರುತ್ತಿವೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ


ಒಂದು ಕಾಕ್‌ಟೈಲ್ 900 ರೂ, ಮೇನ್ ಕೋರ್ಸ್ ಬೆಲೆ 1,500 ರೂ ಹಾಗೂ ಸಿಹಿತಿಂಡಿ 600 ರೂ ಆಗಿದೆ. ಉತ್ತಮ ಸಂಬಳ ಹೊಂದಿದ್ರು ತಮ್ಮ ಮಾಸಿಕ ಬಜೆಟ್ ನಿರ್ವಹಿಸುವುದು ಕಷ್ಟ. ತಿಂಗಳ ಕೊನೆಯಲ್ಲಿ ಹಣವೇ ಇರಲ್ಲ ಎಂದು ಎಳ್ಳು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಇಬ್ಬರ ಊಟಕ್ಕೆ 4,800 ರೂ, ಬಿಲ್ ನೋಡಿ ಶಾಕ್ ಆದ ಯುವತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಾಮಾನ್ಯ ಲಂಡನ್ ರೆಸ್ಟೋರೆಂಟ್‌ಗಳನ್ನು ದೆಹಲಿಯ ಐಷಾರಾಮಿ ರೆಸ್ಟೋರೆಂಟ್‌ಗಳಿಗೆ ಹೋಲಿಸುತ್ತಿರಬಹುದು ಎಂದಿದ್ದಾರೆ. ಮತ್ತೊಬ್ಬರು, ಎಲ್ಲವೂ ದುಬಾರಿ, ಆದ್ರೆ ಹೊಟ್ಟೆಗೆ ತಿನ್ನದೇ ಇರೋಕೆ ಆಗುತ್ತಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಭಾರತದ ಮೆಟ್ರೋ ನಗರಗಳಲ್ಲಿ ಜೀವನಶೈಲಿ ಮತ್ತು ಮನರಂಜನಾ ವೆಚ್ಚವು ಹೆಚ್ಚಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us