Video: ಮ್ಯೂಸಿಕಲ್ ಹಾರ್ನ್ ಸೌಂಡ್‌ಗೆ ಸಖತ್ ಡ್ಯಾನ್ಸ್ಮಾಡಿದ ಪುಟಾಣಿಗಳು
ವಾಹನಗಳಲ್ಲಿ ತರಹೇವಾರಿ ಹಾರ್ನ್‌ಗಳಿರುತ್ತವೆ. ಅದರಲ್ಲೂ ಈ ದೈತ್ಯ ಟ್ರಕ್, ಲಾರಿಗಳಲ್ಲಿ ಸ್ವಲ್ಪ ವಿಭಿನ್ನವಾದ ಹಾರ್ನ್‌ಗಳಿರುತ್ತವೆ. ಈ ಹಾರ್ನ್ ಸದ್ದುಗಳು ಹೆಚ್ಚಿನವರಿಗೆ ತುಂಬಾನೇ ಇಷ್ಟ. ಈ ರೀತಿಯ ಮ್ಯೂಸಿಕಲ್ ಹಾರ್ನ್ ಸದ್ದು ಕೇಳಿ ಕೆಲವರು ತಲೆ ಅಲ್ಲಾಡಿಸುತ್ತಾ ಕೂರುತ್ತಾರೆ. ಆದ್ರೆ ಇಲ್ಲಿಬ್ಬರು ಮಕ್ಕಳು ಟ್ರಕ್ ಒಂದರ ಹಾರ್ನ್ ಸದ್ದಿಗೆ ರೋಡ್ ಸೈಡ್ ನಿಂತು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಮುದ್ದು ಮಕ್ಕಳು ಏನು ಮಾಡಿದ್ರೂ ಅದು ಚೆಂದ. ಈ ಮಕ್ಕಳು ತುಂಟಾಟ ಮಾಡುತ್ತಾ, ಎಂಜಾಯ್ ಮಾಡ್ತಾ ಪ್ರತಿಯೊಂದು ಕ್ಷಣವನ್ನು ಖುಷಿಯಿಂದ ಕಳೆಯುತ್ತಾರೆ. ಅದರಲ್ಲೂ ಈ ಮಕ್ಕಳ ಕಿವಿಗೆ ಹಾಡಿನ ಸದ್ದು ಕೇಳಿಸಿದರೆ ನಿಂತಲ್ಲೇ ಕುಣಿಯಲು ಶುರು ಹಚ್ಚಿ ಬಿಡುತ್ತಾರೆ. ಪುಟ್ಟ ಮಕ್ಕಳ ಇಂತಹ ಮುದ್ದು ಮುದ್ದು ಡಾನ್ಸ್ ವಿಡಿಯೋಗಳು ಸೋಷಿಯಲ್ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಮಕ್ಕಳು ಹಾಡು, ಇನ್ನಿತರೆ ಮ್ಯೂಸಿಕ್‌ಗಳಿಗೆ ಹೆಜ್ಜೆ ಹಾಕಿದ್ರೆ, ಇಲ್ಲೆರಡು ತುಂಟ ಮಕ್ಕಳು ರೋಡ್ ಸೈಡ್ ನಿಂತು ಗಾಡಿಗಳ ಹಾರ್ನ್ ಸೌಂಡ್‌ಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಇಂಡೋನೇಷ್ಯಾದ ಮಕ್ಕಳಿಬ್ಬರು ರಸ್ತೆ ಬದಿಯಲ್ಲಿ ನಿಂತು ವಾಹನವೊಂದರ ಹಾರ್ನ್ ಸೌಂಡ್‌ಗೆ ಡಾನ್ಸ್ ಮಾಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಹೌದು ಟ್ರಕ್ ಒಂದರ ಮ್ಯೂಸಿಕಲ್ ಹಾರ್ನ್ ಸದ್ದು ಕೇಳಿ, ಈ ಪುಟಾಣಿಗಳು ತುಂಬಾನೇ ಕ್ಯೂಟ್ ಆಗಿ ಡಾನ್ಸ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು thehappynewspaper ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಹಾರ್ನ್ ಸದ್ದಿಗೆ ಮಕ್ಕಳಿಬ್ಬರು ಡಾನ್ಸ್ ಮಾಡುವ ದೃಶ್ಯವನ್ನು ಕಾಣಬಹುದು. ರಸ್ತೆ ಬದಿಯಲ್ಲಿ ನಿಂತಿದ್ದ ಈ ಮಕ್ಕಳು ಟ್ರಕ್ ಒಂದರ ಮ್ಯೂಸಿಕಲ್ ಹಾರ್ನ್ ಕೇಳಿ, ನಿಂತಲ್ಲೇ ಭರ್ಜರಿ ಸ್ಟೆಪ್ಸ್ ಹಾಕುತ್ತಾ, ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲಿ ನಿಂತು ಜಳಕ ಮಾಡಿದ ಯುವಕ; ವಿಡಿಯೋ ವೈರಲ್
ಜುಲೈ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದಕೊಂಡಿದೆ. ʼಇಂತಹ ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಾವ್ಹ್ ಈ ದೃಶ್ಯ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹಾಡು ಯಾವುದಾದರೇನು ನಮಗೆ ಡಾನ್ಸ್ ಮುಖ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ