Viral: ಸ್ವರ್ಗದಿಂದ ಧರೆಗಿಳಿದು ಬಂದ ಮೃಗದಂತಿದೆ ಅಲ್ವಾ; ಕ್ಯಾಮೆರಾದಲ್ಲಿ ಸೆರೆಯಾದ ಅತ್ಯಪರೂಪದ ಶ್ವೇತ ವರ್ಣದ ಜಿಂಕೆ
ಈ ಭೂಮಿಯ ಮೇಲೆ ಹಲವಾರು ಬಗೆಯ ಜೀವಿಗಳಿವೆ. ಅವುಗಳಲ್ಲಿ ಕೆಲವೊಂದು ಜೀವಿಗಳು ತಮ್ಮ ನೋಟ ಹಾಗೂ ಸೌಂದರ್ಯದಿಂದಲೇ ನಮ್ಮನ್ನು ಬೆರಗುಗೊಳಿಸುತ್ತವೆ. ಅದೇ ರೀತಿ ಇಲ್ಲೊಂದು ಸಖತ್ ಕ್ಯೂಟ್ ಆಗಿರುವ ಶ್ವೇತ ವರ್ಣದ ಜಿಂಕೆಯೊಂದು ಕಾಣಿಸಿಕೊಂಡಿದೆ. ಹೌದು ಹಿಮ ಭರಿತ ಕಾಡಿನಲ್ಲಿ ಬಿಳಿ ಬಣ್ಣದ ಅತಿ ಅಪರೂಪದ ಜಿಂಕೆಯೊಂದು ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಈ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಜಿಂಕೆಯ ಸೌಂದರ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಭೂಮಿಯ ಮೇಲೆ ವೈವಿದ್ಯಮಯ ಜೀವಿಗಳು ವಾಸಿಸುತ್ತವೆ. ಅವುಗಳಲ್ಲಿ ಕೆಲವೊಂದು ಅತ್ಯಪರೂಪದ ಜೀವಿಗಳು ಅಪರೂಪಕ್ಕೆ ಕಾಣಿಸಿಕೊಳ್ಳುವ ಮೂಲಕ ನಮ್ಮನ್ನು ಬೆರಗುಗೊಳಿಸುತ್ತವೆ. ಹೀಗೆ ಚಿತ್ರವಿಚಿತ್ರವಾದ ಹಾಗೂ ಮುದ್ದುಮುದ್ದಾಗಿರುವ ಜೀವಿಗಳು ಕಾಣಿಸಿಕೊಳ್ಳುವ ಘಟನೆಗಳ ಸುದ್ದಿಗಳು ವಿರಳವಾಗಿ ಕೇಳಿ ಬರುತ್ತಿರುತ್ತವೆ. ಅದೇ ರೀತಿ ಇತ್ತೀಚಿಗೆ ಇಲ್ಲೊಂದು ಸಖತ್ ಕ್ಯೂಟ್ ಆಗಿರುವ ಶ್ವೇತ ವರ್ಣದ ಜಿಂಕೆಯೊಂದು ಕಾಣಿಸಿಕೊಂಡಿದೆ. ಹೌದು ಹಿಮ ಭರಿತ ಕಾಡಿನಲ್ಲಿ ಬಿಳಿ ಬಣ್ಣದ ಅತಿ ಅಪರೂಪದ ಜಿಂಕೆಯೊಂದು ಕಾಣಿಸಿಕೊಂಡಿದ್ದು, ಮಹಿಳೆಯೊಬ್ಬರು ತಮ್ಮ ಕ್ಯಾಮೆರಾದಲ್ಲಿ ಈ ಸುಂದರ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಜಿಂಕೆಯ ಸೌಂದರ್ಯಕ್ಕೆ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
ಹಿಮಾವೃತ ಪ್ರದೇಶದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಆಲ್ಬಿನೋ ಜಿಂಕೆ ಕಾಣಿಸಿಕೊಂಡಿದೆ. ಕಾಡಿನ ಸಮೀಪದಲ್ಲುರುವ ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಮಹಿಳೆಯೊಬ್ಬರ ಕಣ್ಣಿಗೆ ಸುಂದರವಾದ ಆಲ್ಬಿನೋ ಜಿಂಕೆ ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಆಕೆ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಹಿಂದೆ ಕಬಿನಿಯಲ್ಲಿಯೂ ಬಿಳಿ ಬಣ್ಣದ ಜಿಂಕೆಯೊಂದು ಕಾಣಿಸಿಕೊಂಡಿತ್ತು. ಅಲ್ಬಿನೋ ಜಿಂಕೆಗಳು ಅತ್ಯಂತ ಅಪರೂಪದ ಮೃಗಗಳಾಗಿವೆ. ಪ್ರತಿ ಒಂದು ಲಕ್ಷ ಜಿಂಕೆಗಳ ಜನನದಲ್ಲಿ ಒಂದು ಮಾತ್ರ ಈ ಬಿಳಿ ಬಣ್ಣದ ಜಿಂಕೆ ಜನಿಸುತ್ತವೆ. ರಕ್ತದಲ್ಲಿನ ಮೆಲನಿನ್ ಎಂಬ ಅಂಶದ ಕೊರತೆಯಿಂದಾಗಿ ಕೆಲವೊಂದು ಜಿಂಕೆಗಳು ಹೀಗೆ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಹೀಗಿದ್ದರೂ ಇವುಗಳು ನೋಡಲು ಬಹಳ ಸುಂದರವಾಗಿರುತ್ತವೆ. ಇದೀಗ ಮತ್ತೊಮ್ಮೆ ಶ್ವೇತ ವರ್ಣದ ಜಿಂಕೆ ಕಾಣಿಸಿಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ ( ಕೃಪೆ: AccuWeather)
A rare majestic white deer among the winter snow 🦌🌨️ Albino deers occur an average of 1 out of 30,000 births. pic.twitter.com/tix5doSivX
— AccuWeather (@accuweather) February 1, 2025
AccuWeather ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಹಿಮದ ರಾಶಿಯ ಮಧ್ಯೆ ಗುಲಾಬಿ ಬಣ್ಣದ ಕಂಗಳ ಹಾಗೂ ಶ್ವೇತ ವರ್ಣದಿಂದ ಕೂಡಿದ ಆಲ್ಬಿನೋ ಜಿಂಕೆ ನಿಂತಿರುವ ಸುಂದರ ದೃಶ್ಯವನ್ನು ಕಾಣಬಹುದು. ಮಹಿಳೆಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಕಣ್ಣಿಗೆ ಈ ಅದ್ಭುತ ಪ್ರಾಣಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಡೋರ್ ಕ್ಲೋಸ್ ಆಗ್ತಿದೆ ಎನ್ನುವಷ್ಟರಲ್ಲಿ ರೈಲು ಏರಲು ಮುಂದಾದ ಮಹಿಳೆ; ಮುಂದೇನಾಯ್ತು ನೋಡಿ…
ಫೆಬ್ರವರಿ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ನೋಡಿದ ಅತ್ಯಂತ ಸುಂದರ ಪ್ರಾಣಿಗಳಲ್ಲಿ ಇದು ಒಂದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼ ವಾವ್ಹ್.. ಇದಂತೂ ತುಂಬಾ ಸುಂದರವಾದ ಪ್ರಾಣಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪರಿಪೂರ್ಣ ಸೌಂದರ್ಯಕ್ಕೆ ಉದಾಹರಣೆಯಂತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ