Viral: ಡೋರ್ ಕ್ಲೋಸ್ ಆಗ್ತಿದೆ ಎನ್ನುವಷ್ಟರಲ್ಲಿ ರೈಲು ಏರಲು ಮುಂದಾದ ಮಹಿಳೆ; ಮುಂದೇನಾಯ್ತು ನೋಡಿ…
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋ ದೃಶ್ಯಾವಳಿಗಳು ನಮ್ಮನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ಮಧ್ಯ ವಯಸ್ಸಿನ ಮಹಿಳೆಯೊಬ್ಬರು ವಾಕಿಂಗ್ ಸ್ಟಿಕ್ ಹಿಡಿದು ಡೋರ್ ಕ್ಲೋಸ್ ಆಗ್ತಿದೆ ಎನ್ನುವಷ್ಟರಲ್ಲಿ ರೈಲು ಏರಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ವಾಕಿಂಗ್ ಸ್ಟಿಕ್ ಡೋರ್ ಮಧ್ಯೆ ಸಿಲುಕಿದ್ದು, ನಂತರ ಇಬ್ಬರು ಪುರುಷರ ಸಹಾಯದಿಂದ ಮಹಿಳೆ ಹೇಗೋ ಟ್ರೈನ್ ಏರಿದ್ದಾರೆ. ಡೋರ್ ಕ್ಲೋಸ್ ಆಗುವಾಗ ರೈಲು ಏರಲು ಮುಂದಾದ ಈ ಮಹಿಳೆಯ ವಿರುದ್ಧ ಇದೀಗ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಕೆಲವರಿಗೆ ತಾಳ್ಮೆ ಅನ್ನೋದೆ ಇರೋದಿಲ್ಲ, ಪ್ರತಿಯೊಂದು ವಿಷಯದಲ್ಲೂ ಅರ್ಜೆಂಟ್ ಮಾಡುತ್ತಿರುತ್ತಾರೆ. ಹೀಗೆ ಹರಿಬರಿಯಲ್ಲಿ ಕೆಲಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ರು ಮಹಿಳೆ ಅರ್ಜೆಂಟ್ ಆಗಿ ಟ್ರೈನ್ ಏರಲು ಹೋಗಿ ಪಜೀತಿಗೆ ಸಿಲುಕಿದ್ದಾರೆ. ಹೌದು ಮಧ್ಯ ವಯಸ್ಸಿನ ಮಹಿಳೆಯೊಬ್ಬರು ವಾಕಿಂಗ್ ಸ್ಟಿಕ್ ಹಿಡಿದು ಡೋರ್ ಕ್ಲೋಸ್ ಆಗ್ತಿದೆ ಎನ್ನುವಷ್ಟರಲ್ಲಿ ರೈಲು ಏರಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ವಾಕಿಂಗ್ ಸ್ಟಿಕ್ ಡೋರ್ ಮಧ್ಯೆ ಸಿಲುಕಿದ್ದು, ನಂತರ ಇಬ್ಬರು ಪುರುಷರ ಸಹಾಯದಿಂದ ಮಹಿಳೆ ಹೇಗೋ ಟ್ರೈನ್ ಏರಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮಹಿಳೆಯ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಈ ಘಟನೆ ಸಿಂಗಾಪುರದಲ್ಲಿ ನಡೆದಿದ್ದು, ಸಲ್ವಾರ್ ತೊಟ್ಟಂತಹ ಮಹಿಳೆಯೊಬ್ಬರು ವಾಕಿಂಗ್ ಸ್ಟಿಕ್ ಹಿಡಿದು, ಡೋರ್ ಕ್ಲೋಸ್ ಆಗುವಾಗ ಟ್ರೈನ್ ಏರಲು ಮುಂದಾಗಿದ್ದಾರೆ. ಹೀಗೆ ರೈಲು ಏರಲು ಹೋಗುವಾಗ ವಾಕಿಂಗ್ ಸ್ಟಿಕ್ ಡೋರ್ ಮಧ್ಯೆ ಸಿಲುಕಿದ್ದು, ಕೊನೆಗೆ ಇಬ್ಬರು ಪುರುಷರ ಸಹಾಯದಿಂದ ಹೇಗೋ ಮಹಿಳೆ ರೈಲು ಬೋಗಿಯೊಳಗೆ ಹೋಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Let me in! byu/fried_pudding inSMRTRabak
ಈ ಕುರಿತ ವಿಡಿಯೋವನ್ನು r/SMRTRabak ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನನ್ನನ್ನು ಒಳಗೆ ಬಿಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಡೋರ್ ಕ್ಲೋಸ್ ಆಗುವ ಹೊತ್ತಿಗೆ ಹರಿಬರಿಯಲ್ಲಿ ರೈಲು ಬೋಗಿಯೊಳಗೆ ಹೋಗಲು ಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ರೈಲು ಹತ್ತಲು ಯತ್ನಿಸಿದಾಗ ಡೋರ್ ಮಧ್ಯೆ ವಾಕಿಂಗ್ ಸ್ಟಿಕ್ ಸಿಕ್ಕಿ ಹಾಕಿಕೊಂಡಿದ್ದು, ವ್ಯಕ್ತಿಯೊಬ್ಬರು ತಕ್ಷಣ ಡೋರ್ ತೆರೆಯುವ ಮೂಲಕ ಮಹಿಳೆ ಟ್ರೈನ್ ಒಳಗೆ ಹೋಗಲಿ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಮುಟ್ಟಾದಾಗ ರೂಮಿನಲ್ಲೇ ಇರ್ಬೇಕು, ಸ್ನಾನ ಮಾಡಬಾರದು ಎಂದಿದ್ದಕ್ಕೆ ವಿಚ್ಛೇದನ ಕೊಟ್ಟ ಮಹಿಳೆ
ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮುಂದಿನ ಟ್ರೈನ್‌ನಲ್ಲಿ ಹೋಗಬಹುದಿತ್ತು, ಇಷ್ಟು ಅರ್ಜೆಂಟ್ ಮಾಡುವ ಅವಶ್ಯಕತೆ ಏನಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡುವಾಗ ಕೋಪ ಬರುತ್ತಿದ್ದೆ, ಸ್ವಲ್ಪ ಹೊತ್ತು ಕಾದಿದ್ದರೆ, ಆಕೆಗೆ ಮುಂದಿನ ಟ್ರೈನ್‌ನಲ್ಲಿಯೇ ಹೋಗಬಹುದಿತ್ತು ಅಲ್ವಾʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರಿಗೆ ದಂಡ ವಿಧಿಸಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ