Internship: ಇರುವೆ ಭಾರ ಇರುವೆಗೆ, ಆನೆ ಭಾರ ಆನೆಗೆ ಎಂಬಂತೆ ಅವರವರ ಭಾರ ಅವರವರಿಗೆ. ಆದರೂ ಆ ಭಾರಗಳನ್ನು ಕಡಿಮೆ ಮಾಡಿಕೊಳ್ಳಲು ಕೆಲ ಉಪಾಯಗಳಿರುತ್ತವೆ, ಯೋಚಿಸಬೇಕಷ್ಟೇ. ಇದೀಗ ವೈರಲ್ ಆಗುತ್ತಿರುವ ಈ ಲಿಂಕ್ಡ್ಇನ್ ಪೋಸ್ಟ್ನ ಸಾರಾಂಶ ಗಮನಿಸಿ. ಅಮೆರಿಕದ ಯುವತಿ ಇಂಟರ್ನ್ಶಿಪ್ಗೆಂದು ಪ್ರತೀ ವಾರವೂ ನ್ಯೂಜೆರ್ಸಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾಳೆ. ಅಚ್ಚರಿಯಾಗುತ್ತಿದೆಯಾ? ಹೌದು, ಆಕೆ ಬಾಡಿಗೆಯ ಹಣವನ್ನು ಉಳಿಸಲು ಈ ಉಪಾಯ ಕಂಡುಕೊಂಡಿದ್ದಾಳೆ.
21 ವರ್ಷದ ಸೋಫಿಯಾ ಸೆಲೆಂಟಾನೋ ನ್ಯೂಜೆರ್ಸೆಯಲ್ಲಿರುವ ಒಗಿಲ್ವಿ ಹೆಲ್ತ್ ಎಂಬ ಕಂಪೆನಿಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾಳೆ. ದಕ್ಷಿಣ ಕೆರೋಲಿನಾದಿಂದ ನ್ಯೂಜೆರ್ಸಿಗೆ (New Jersy) ವಾರಕ್ಕೊಮ್ಮೆ ವಿಮಾನಿನಲ್ಲಿ ಪ್ರಯಾಣಿಸುತ್ತಾಳೆ. ಇದಕ್ಕೆ ಕಾರಣ ನ್ಯೂಜೆರ್ಸಿಯಲ್ಲಿ ಬಾಡಿಗೆ ಮನೆಗಳಿಗಿಂತ ವಿಮಾನ ಪ್ರಯಾಣದ ಟಿಕೆಟ್ ಅಗ್ಗ ಎಂಬ ಕಾರಣಕ್ಕೆ.
ಇದನ್ನೂ ಓದಿ : Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ
ಸೆಲೆಂಟಾನೋ ತನ್ನ ಪೋಷಕರೊಂದಿಗೆ ನ್ಯೂಜೆರ್ಸಿಯ ಬಾಡಿಗೆ ಮನೆ ಅಥವಾ ನ್ಯೂಯಾರ್ಕ್‌ನಲ್ಲಿ ಅಪಾರ್ಟ್ಮೆಂಟ್ನಲ್ಲಿ ವಾಸಿಸತೊಡಗಿದರೆ ಖರ್ಚು ಎಷ್ಟಾಗಬಹುದೆಂದು ಉಲ್ಲೇಖಿಸಿದ್ದಾಳೆ. Apartments.com ಮತ್ತು Renthop ನ ಮಾಹಿತಿಯ ಪ್ರಕಾರ, ಪಾರ್ಸಿಪ್ಪನಿಯ (Parsippany) ಸ್ಟುಡಿಯೋ ಅಪಾರ್ಟ್ಮೆಂಟ್ನ ಬಾಡಿಗೆ ತಿಂಗಳಿಗೆ ಸುಮಾರು 1,730 ಡಾಲರ್ ಆಗಿದ್ದರೆ, ನ್ಯೂಯಾರ್ಕ್‌ನಲ್ಲಿ ಇದು 3,500 ಡಾಲರ್. ಆಹಾರ, ಪೆಟ್ರೋಲ್ ಮತ್ತು ಇನ್ನಿತರೇ ಖರ್ಚುಗಳು ಇದರಲ್ಲಿ ಸೇರ್ಪಡೆಯಾಗಿಲ್ಲ.
ಇದನ್ನೂ ಓದಿ : Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್, ಝುಕರ್ಬರ್ಗ್?
“ನನ್ನ ಇಂಟರ್ನ್‌ಶಿಪ್‌ನ ಮೊದಲ ದಿನ ಹೇಗಿತ್ತೆಂದು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದೇನೆ. ನನ್ನ ಪ್ರಯಾಣದ ಅನುಭವ ಮತ್ತು ಖರ್ಚಿನ ವಿವರವನ್ನು ಆ ವಿಡಿಯೋದಲ್ಲಿ ವಿವರಿಸಿದ್ದೇನೆ. ಈ ವಿಧಾನ ನನಗಂತೂ ಆರ್ಥಿಕ ಪ್ರಯೋಜನವನ್ನೇ ಒದಗಿಸಿದೆ. ತಿಂಗಳ ಬಾಡಿಗೆ 3,400 ಡಾಲರ್ ಪಾವತಿಸುವ ಬದಲು ನ್ಯೂಜೆರ್ಸಿಗೆ 100 ಡಾಲರ್ ಕೊಟ್ಟು ರೌಂಟ್ ಟ್ರಿಪ್ ಬುಕ್ ಮಾಡುತ್ತೇನೆ.” ಎಂದಿದ್ದಾಳೆ.
ಇದನ್ನೂ ಓದಿ : Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ
ಈ ಪೋಸ್ಟ್ ಅನ್ನು ಈತನಕ ಸುಮಾರು 2,500 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಸರಿಯಾಗಿದೆ. ನಮಗೆ ಬೇಕಾದಂತೆ ಬದುಕುವ ಮತ್ತು ಅದಕ್ಕೆ ತಕ್ಕಂತೆ ಯೋಜಿಸುವ ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ನೀವೊಬ್ಬ ರಾಕ್ಸ್ಟಾರ್ ಸೆಲೆಂಟಾನೋ ಎಂದಿದ್ಧಾರೆ ಒಬ್ಬರು. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ನೀವು ಸ್ವತಂತ್ರರು ಹಾಗಾಗಿ ನಿಮ್ಮ ನಿರ್ಧಾರಗಳು ನಿಮ್ಮವೇ ಎಂದು ಮತ್ತೊಬ್ಬರು ಹೇಳಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:54 pm, Tue, 20 June 23