
ಈಗಿನ ಕಾಲದಲ್ಲಿ ಸಾರ್ವಜನಿಕ ಸ್ಥಳ (public place) ಗಳಲ್ಲಿ ಕೆಲವರಿಗೆ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಹೀಗಾಗಿ ಕ್ಷುಲ್ಲಕ ಕಾರಣಕ್ಕಾಗಿ ಕೆಲವರು ಎಲ್ಲೆಂದರಲ್ಲಿ ಜಗಳ ಕ್ಕೆ ಇಳಿರುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜಗಳಕ್ಕೆ ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ರತ್ನಸಂಗರ್ ಫ್ಯಾಮಿಲಿ ರೆಸ್ಟೋರೆಂಟ್ (ratnasangar family restaurant) ನಲ್ಲಿ ವ್ಯಕ್ತಿಗಳಿಬ್ಬರೂ ಮನಸ್ಸೋ ಇಚ್ಛೆ ಬಂದಂತೆ ಕಿತ್ತಾಡಿಕೊಂಡಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದ ಪ್ರಾರಂಭದಲ್ಲಿ ರೆಸ್ಟೋರೆಂಟ್ ನಲ್ಲಿ ಇಬ್ಬರೂ ವ್ಯಕ್ತಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಅಲ್ಲೇ ಇದ್ದ ಜನರು ಈ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಆದರೆ ಈ ವ್ಯಕ್ತಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಮಾತ್ರ ನಿಂತಿಲ್ಲ.
Kalesh inside ratnasangar family restaurant pic.twitter.com/yXjpCKXNqR
— Ghar Ke Kalesh (@gharkekalesh) May 13, 2025
ಈ ವಿಡಿಯೋವೊಂದು ಎರಡು ಲಕ್ಷ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ವ್ಯಕ್ತಿಗಳು ಪರಸ್ಪರ ಯಾಕಾಗಿ ಕಿತ್ತಾಡಿಕೊಂಡಿದ್ದಾರೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡಿದ್ದು ಈ ಜಗಳ ಹಿಂದಿನ ಕಾರಣವೇನು ಎನ್ನುವುದನ್ನು ಪ್ರಶ್ನಿಸಿದ್ದಾರೆ. ಬಳಕೆದಾರರೊಬ್ಬರು, ‘ಈ ವ್ಯಕ್ತಿಗಳ ನಡುವಿನ ಜಗಳದ ಹಿಂದಿನ ಕಾರಣವೇನು’ ಎಂದು ಕೇಳಿದ್ದಾರೆ.
ಇದನ್ನೂ ಓದಿ : ಸಂಗೀತ ಕಾರ್ಯಕ್ರಮದಲ್ಲಿ ಅವಾಂತರ ಸೃಷ್ಟಿಸಿದ ಗೂಳಿ, ಎದ್ನೋ ಬಿದ್ನೋ ಎಂದು ಓಡಿದ ಜನ
ಇನ್ನೊಬ್ಬರು, ‘ಕ್ಯಾಮೆರಾ ಮ್ಯಾನ್ ಊಟ ಮಾಡುವುದರಲ್ಲಿಯೇ ಬ್ಯುಸಿಯಿರಬೇಕು, ಈ ವೇಳೆಯಲ್ಲಿ ಈ ಜಗಳ ಶುರುವಾಗಿರಬೇಕು’ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ಫ್ಯಾಮಿಲಿ ರೆಸ್ಟೋರೆಂಟ್ ಗಳಲ್ಲಿ ಈ ರೀತಿ ಜಗಳಗಳು ನಡೆಯಬಾರದು. ಆದರೆ ಈಗಿನ ದಿನಗಳಲ್ಲಿ ಪಬ್ ಹಾಗೂ ಕ್ಲಬ್ ಹೊರತುಪಡಿಸಿ ಫ್ಯಾಮಿಲಿ ರೆಸ್ಟೋರೆಂಟ್ ಗಳು ಸುರಕ್ಷಿತವಾಗಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ