Viral Video | ಕೊಲ್ಕತ್ತ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಏರ್ ವಿಸ್ತಾರ ವಿಮಾನದ ಕಿಟಕಿಯಲ್ಲಿ ಜೇನುಗೂಡು
ವಿಮಾನ ನಿಲ್ದಾಣದಲ್ಲಿ ನಿಂತಿರುವ ಏರ್ ವಿಸ್ತಾರ ವಿಮಾನದ ಕಿಟಿಕಿಯಲ್ಲಿ ಜೇನು ಗೂಡು ಕಟ್ಟಿದೆ. ವಿಮಾನದ ಕಿಟಿಕಿಯಲ್ಲಿದ್ದ ಜೇನುಗೂಡನ್ನು ವಿಮಾನ ನಿಲ್ದಾಣದ ಸಿಬ್ಬಂದಿ ನೀರು ಹಾಯಿಸಿ ತೆರವುಗೊಳಿಸಿದ್ದಾರೆ.
ಕೊಲ್ಕತ್ತ: ಇಲ್ಲಿನ ಸುಭಾಷ್‌ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಏರ್ ವಿಸ್ತಾರ ವಿಮಾನದ ಕಿಟಿಕಿಯಲ್ಲಿ ಜೇನು ಗೂಡು ಕಟ್ಟಿದೆ. ವಿಮಾನದ ಕಿಟಿಕಿಯಲ್ಲಿದ್ದ ಜೇನುಗೂಡನ್ನು ವಿಮಾನ ನಿಲ್ದಾಣದ ಸಿಬ್ಬಂದಿ ನೀರು ಹಾಯಿಸಿ ತೆರವುಗೊಳಿಸಿದ್ದಾರೆ.
ವಿಮಾನದ ಕಿಟಕಿ ಸಮೀಪ ಜೇನುಗೂಡು ಕಟ್ಟಿರುವ ವಿಡಿಯೊವನ್ನು ತರುಣ್ ಶುಕ್ಲಾ ಎಂಬವರು ಟ್ವೀಟ್ ಮಾಡಿದ್ದಾರೆ. ಒಳಗೆ ಹನಿ ಪ್ಯಾನ್‌ಕೇಕ್ ಇದೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ವಿಡಿಯೊವನ್ನು ಈಗಾಗಲೇ 24 ಸಾವಿರ ಮಂದಿ ವೀಕ್ಷಿಸಿದ್ದಾರೆ.
Looks like honey pancakes inside ?
Kolkata yesterday. @airvistara ? pic.twitter.com/Pu7ydGt8bY
— Tarun Shukla (@shukla_tarun) November 30, 2020
ಈ ವಿಡಿಯೊಗೆ ಪ್ರತಿಕ್ರಿಯಿಸಿದ ಟ್ವೀಟಿಗರೊಬ್ಬರು ಕೊಲ್ಕತ್ತಾದ ಜನರಿಗೆ ಸಿಹಿ ಇಷ್ಟ ಎಂದಿದ್ದಾರೆ. ವಿಮಾನ ಎಷ್ಟು ಕಾಲದಿಂದ ಅಲ್ಲಿ ನಿಲ್ಲಿಸಿತ್ತು ಎಂದು ಮತ್ತೊಬ್ಬ ಟೀಟಿಗ ಪ್ರಶ್ನಿಸಿದ್ದಾರೆ.
2019ರಲ್ಲಿ ಕೊಲ್ಕತ್ತಾದಿಂದ ಅಗರ್ತಲಾಕ್ಕೆ ಹೊರಟ ಏರ್ ಇಂಡಿಯಾ ವಿಮಾನ ರನ್ ವೇಯತ್ತ ಹೋಗುವಾಗ ಕಾಕ್ಪಿಟ್ನಿಂದ ಜೇನುನೊಣಗಳು ಹೊರಬರುತ್ತಿರುವುದು ಪ್ರಯಾಣಿಕರ ಗಮನಕ್ಕೆ ಬಂದಿತ್ತು. ಜೇನುನೊಣಗಳನ್ನು ಅಲ್ಲಿಂದ ಓಡಿಸಿದ ನಂತರ ಸುಮಾರು 2.30 ಗಂಟೆ ವಿಳಂಬವಾಗಿ ವಿಮಾನ ಸಂಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Published On - 6:18 pm, Tue, 1 December 20