
ಬೆಂಗಳೂರು, ಜುಲೈ 01: ಬೆಂಗಳೂರು (Bengaluru) ಅಂದ್ರೇನೆ ಅದೊಂದು ತರಹ ಮಾಯಲೋಕ. ಹೀಗಾಗಿ ಯುವಕ ಯುವತಿಯರು ಓದು ಮುಗಿಯುತ್ತಿದ್ದಂತೆ ಉತ್ತಮ ಅವಕಾಶಗಳು, ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ವಾತಂತ್ರ್ಯ ಹೀಗೆ ಸಾಕಷ್ಟು ಆಯ್ಕೆಗಳಿಂದ ಬೆಂಗಳೂರಿನತ್ತ ಬರುತ್ತಾರೆ. ಸಂಚಾರ ದಟ್ಟಣೆ, ಹೆಚ್ಚುತ್ತಿರುವ ಬಾಡಿಗೆಗಳು, ನೀರಿನ ಸಮಸ್ಯೆಗಳು ಸೇರಿದಂತೆ ಇನ್ನಿತ್ತರ ವಿಚಾರಗಳ ಬಗ್ಗೆ ಟೀಕೆಗಳಿದ್ದರೂ ಇಲ್ಲಿಗೆ ಬರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಟೆಕ್ಕಿಯೊಬ್ಬರು ಸವಾಲುಗಳ ನಡುವೆ ಬೆಂಗಳೂರನ್ನು ತೊರೆಯದೇ ಜನರು ಇಲ್ಲೇ ನೆಲೆಸಿರುವುದು ಏಕೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನ ಟೆಕ್ಕಿಯೊಬ್ಬರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
ಅಂಕಿತ್ (ankitsimplifies) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ಬೆಂಗಳೂರು ಜೀವನವನ್ನು ಬದಲಾಯಿಸುವ ಐಟಿ ವೃತ್ತಿಗಳನ್ನು ನಿರ್ಮಿಸುತ್ತದೆ ಎಂಬ ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಏನೋ ವಿಚಿತ್ರವಿದೆ. ಇಲ್ಲಿ ವಾಸಿಸುವ ಜನರು ನಿರಂತರವಾಗಿ ಟ್ರಾಫಿಕ್, ದುಬಾರಿ ಬಾಡಿಗೆ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ದೂರುತ್ತಾರೆ. ಆದರೆ ಅವರೆಲ್ಲರೂ ಈ ನಗರವನ್ನು ಎಂದಿಗೂ ಬಿಡುವುದಿಲ್ಲ. ಸತ್ಯಾಂಶವೆಂದರೆ ಅವರೆಲ್ಲರೂ ಬೆಂಗಳೂರನ್ನು ಪ್ರೀತಿಸುವುದಿಲ್ಲ. ಬೆಂಗಳೂರು ಅವರಿಗೆ ಸಹಾಯ ಮಾಡಿದ ಆವೃತ್ತಿಯನ್ನು ಇಷ್ಟಪಡುತ್ತಾರೆ. ಯಾರೋ ಒಬ್ಬರಿಗೆ, ಈ ನಗರವು ಹೆಚ್ಚಿನ ಸಂಬಳ ಕೆಲಸವನ್ನು ನೀಡಿತು. ಇನ್ನೊಬ್ಬರಿಗೆ ತಮ್ಮದೇ ಆದ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದ ಸ್ಥಳವಾಯಿತು ಎಂದಿದ್ದಾರೆ.
ಇನ್ಯಾರೋ ಈ ನಗರಕ್ಕೆ ಮೊದಲ ಬಾರಿಗೆ ಬಂದು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿದರು. ಮತ್ಯಾರೋ ಈ ನಗರಕ್ಕೆ ಬಂದು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ರೂಪಿಸುವ ಮಾರ್ಗದರ್ಶಕರನ್ನು ಕಂಡುಕೊಂಡರು. ಅದಕ್ಕಾಗಿಯೇ ಜನರು ಈ ನಿತ್ಯ ನಿರಂತರ ಹೋರಾಟವನ್ನು ಸಹಿಸಿಕೊಳ್ಳುತ್ತಾರೆ. ಈ ಬೆಂಗಳೂರು ಕೇವಲ ಒಂದು ನಗರವಲ್ಲ. ಇದು ಒಂದು ಮಹತ್ವದ ತಿರುವು ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ಬೆಂಗಳೂರಿನ ಬಗ್ಗೆ ಎಷ್ಟೇ ತೆಗಳಿದರೂ ಈ ಊರನ್ನು ಬಿಡಲು ಯಾರು ರೆಡಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಸಂಚಾರ ಮತ್ತು ಬಾಡಿಗೆ ನಿಜವಾದ ಸಮಸ್ಯೆಗಳು, ಇಲ್ಲಿ ವೃತ್ತಿಜೀವನದ ಬೆಳವಣಿಗೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಬ್ಬರು, ಈ ನಗರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆದರೆ ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Wed, 1 July 26