AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ

ಈಗಿನ ಕಾಲದಲ್ಲಿ ಎಷ್ಟು ದುಡಿದ್ರೂ ಕಡಿಮೆಯೇ. ತಿಂಗಳ ಕೊನೆಯಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದೀಗ ಬೆಂಗಳೂರಿನ ಐಟಿ ಉದ್ಯೋಗಿಯ ಒಂದು ವರ್ಷ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಉದ್ಯೋಗಿಯೂ ವಾರ್ಷಿಕ 45 ಲಕ್ಷ ರೂ ಸಂಬಳವಿದ್ರೂ ತಿಂಗಳ ಕೊನೆಯಲ್ಲಿ ದಿವಾಳಿ ಎಂದಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್‌ ಆಗಿದ್ದು, ಜೀವನ ನಿರ್ವಹಣೆಯ ಕುರಿತು ಚರ್ಚೆಗೆ ನಾಂದಿ ಹಾಡಿದೆ.

Viral: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jun 30, 2026 | 6:35 PM

Share

ಬೆಂಗಳೂರು, ಜೂನ್ 30: ಯುವಕ ಯುವತಿಯರು ಗುಣಮಟ್ಟದ ಜೀವನ, ಹೆಚ್ಚು ಸಂಬಳ ಸಿಗುವ ಕೆಲಸಕ್ಕಾಗಿ ಓದು ಮುಗಿಯುತ್ತಿದ್ದಂತೆ ಹಳ್ಳಿ ಬಿಟ್ಟು ನಗರಕ್ಕೆ ಬರ್ತಾರೆ. ಆದರೆ ತಿಂಗಳ ಸಂಬಳದಲ್ಲಿ ನಗರದಲ್ಲಿ ಜೀವನ ನಡೆಸೋದು ಹೇಳಿದ್ದಷ್ಟು ಸುಲಭವಲ್ಲ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ದುಡ್ಡು ಇದ್ರು, ತಿಂಗಳ ಕೊನೆಯಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದೀಗ ಬೆಂಗಳೂರಿನ (Bengaluru) ಟೆಕ್ಕಿಯ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್‌ ವೈರಲ್ ಆಗಲು ಕಾರಣವಾಗಿದ್ದೇ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಬಿಡಿ ಒಂದೇ ಒಂದು ರೂಪಾಯಿಯೂ ಇರಲ್ಲ ಎಂದು ಹೇಳಿರುವುದು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಬೆಂಗಳೂರು ಮೂಲದ ಸಾಫ್ಟ್‌ವೇರ್ ಸಲಹೆಗಾರರೊಂದಿಗಿನ ಮಾತನಾಡಿದ ಒಂದು ವರ್ಷ ಹಳೆಯ ಸಂದರ್ಶನದ ತುಣುಕನ್ನು ಮತ್ತೆ ಎಕ್ಸ್ (viprabuddhi) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮ್ಯೂಚುವಲ್ ಫಂಡ್ ಸಲಹೆಗಾರರಾದ ಅಂಶುಮಾನ್ ಶರ್ಮಾರವರ ಜತೆಗೆ ಸೂರ್ಯಯವರು ವೆಚ್ಚಗಳು ಮತ್ತು ಜೀವನಶೈಲಿಯ ಹಣದುಬ್ಬರದ ಬಗ್ಗೆ ಮಾತನಾಡುತ್ತಾ ಹೂಡಿಕೆಗಳನ್ನು ಗರಿಷ್ಠಗೊಳಿಸುವ ಬಗ್ಗೆ ಸಲಹೆ ಪಡೆದಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ

ಈ ಸಂದರ್ಶನದ ಕ್ಲಿಪಿಂಗ್ ನಲ್ಲಿ ಐಟಿ ಉದ್ಯೋಗಿ ಸೂರ್ಯರವರು, ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದು, ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ಪ್ಯಾಕೇಜ್ 45 ಲಕ್ಷ ರೂಪಾಯಿಗಳು. ಎಲ್ಲಾ ತೆರಿಗೆಗಳು ಕಡಿತಗೊಂಡ ಬಳಿಕ ಕೈಗೆ ಸುಮಾರು 2.45 ಲಕ್ಷ ರೂ ಎಂದು ಹೇಳಿದ್ದಾರೆ. ಆದರೆ, ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಮೊತ್ತದ ಆದಾಯವಾಗಿ ಕಾಣಿಸುವುದು ಸಹಜ. ಆದರೆ ಲಕ್ಷ ಸಂಪಾದನೆ ಇದ್ರೂ ನನಗೆ ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ. ತಿಂಗಳ ಕೊನೆ ಹತ್ತಿರ ಬರುತ್ತಿದ್ದಂತೆ ಕೈಯಲ್ಲಿದ್ದ ಅಷ್ಟು ಹಣ ಎಲ್ಲಿಗೆ ಹೋಗುತ್ತದೆ ಎಂದು ತಿಳಿಯುವುದಿಲ್ಲ. ಮದುವೆಯಾಗಿ ತಂದೆಯಾದ ಬಳಿಕವಂತೂ ಆರ್ಥಿಕ ಪರಿಸ್ಥಿತಿ ಮತ್ತು ಜವಾಬ್ದಾರಿಗಳು ಡಬಲ್‌ ಆಯ್ತು ಎಂದಿದ್ದಾರೆ.

ತಮ್ಮ ಮಾಸಿಕ ಖರ್ಚುಗಳ ಬಹಿರಂಗಪಡಿಸಿದ್ದು, ತಮ್ಮ ಆದಾಯದ ಹೆಚ್ಚು ಹಣವು ಇಎಂಐ ಪಾವತಿಸುವುದರಲ್ಲೇ ಮುಗಿದುಹೋಗುತ್ತದೆ. ಮನೆ ಸಾಲದ ಇಎಂಐ 63,000 ರೂ,  ಮೂರುವರೆ ವರ್ಷದ ಮಗನ ಶಾಲಾ ಶುಲ್ಕ ತಿಂಗಳಿಗೆ 11,000 ರೂ, ಆಹಾರ ಹಾಗೂ ದಿನಸಿ ಸಾಮಗ್ರಿಗಳಿಗೆ 12,000 ರೂ ಖರ್ಚು ಆಗುತ್ತದೆ. ಇತರ ಅನಿವಾರ್ಯ ವೆಚ್ಚಗಳು 20,000 ರೂ, ಶಾಪಿಂಗ್, ಪ್ರವಾಸ ಹಾಗೂ ರೆಸ್ಟೋರೆಂಟ್ ಊಟ 32,000 ರೂ ಎಂದಿದ್ದಾರೆ.

ಇದನ್ನೂ ಓದಿ: ಮೇ ತಿಂಗಳ ಖರ್ಚು ವೆಚ್ಚ ರಿವೀಲ್ ಮಾಡಿದ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್

ಈ ಪೋಸ್ಟ್ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳಲಾಗಿದೆ. ಒಬ್ಬ ಬಳಕೆದಾರ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಉಳಿತಾಯ ಮಾಡೋದು ಸುಲಭ ಎಂದಿದ್ದಾರೆ. ಇನ್ನೊಬ್ಬರು, ಸಂಬಳ ಹೆಚ್ಚಾದಂತೆಲ್ಲಾ ಮನುಷ್ಯನ ಖರ್ಚುಗಳು ಹೆಚ್ಚಾಗುತ್ತದೆ. ಹೀಗಾಗಿ ಸಂಬಳ ಎಷ್ಟಿದ್ದರೂ ಸಾಲಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಖರ್ಚು ವೆಚ್ಚಗಳನ್ನು ಸರಿಯಾಗಿ ತೂಗಿಸಿಕೊಂಡು ಬಜೆಟ್ ರೂಪಿಸಿಕೊಂಡರೆ ಉಳಿತಾಯ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ