AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಗಳೂರಿಗಾಗಿ 32 ಲಕ್ಷ ರೂ ವಾರ್ಷಿಕ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಐಐಟಿ ಪದವೀಧರೆ

ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದ ಅನೇಕರಿಗೆ ಈ ಊರಿನ ಸಹವಾಸವೇ ಬೇಡ ಎಂದೆನಿಸುತ್ತದೆ. ತಮ್ಮ ಊರಿಗೆ ಹೋಗಿ ಬಿಡುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಬೆಂಗಳೂರಿಗಾಗಿ ವಾರ್ಷಿಕ 32 ಲಕ್ಷ ರೂಪಾಯಿ ಸಂಬಳದ ಉದ್ಯೋಗದ ಆಫರ್ ತಿರಸ್ಕರಿಸಿದ್ದಾಳೆ. ಈ ಐಐಟಿ ಪದವೀಧರೆಯ ನಿರ್ಧಾರದ ಈ ಪೋಸ್ಟ್ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗಳೂರಿಗಾಗಿ  32 ಲಕ್ಷ ರೂ ವಾರ್ಷಿಕ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಐಐಟಿ ಪದವೀಧರೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 03, 2026 | 2:56 PM

Share

ಬೆಂಗಳೂರು, ಜುಲೈ 03: ಓದು ಮುಗಿಯುತ್ತಿದ್ದಂತೆ ಹೆಚ್ಚಿನವರು ಬೆಂಗಳೂರು (Bengaluru), ಚೆನ್ನೈ, ಮುಂಬೈ ಹೀಗೆ ದೊಡ್ಡ ದೊಡ್ಡ ನಗರಗಳಿಗೆ ತೆರಳುತ್ತಾರೆ. ಆದರೆ ಇದೀಗ ಯುವತಿಯೊಬ್ಬಳ ನಿರ್ಧಾರ ಎಲ್ಲರ ಗಮನ ಸೆಳೆದಿದೆ. ಐಐಟಿ ಪದವೀಧರೆ ಸ್ನೇಹಾ ಪ್ರಿಯಾ ಗುರುಗ್ರಾಮದ (Gurgaon) ಪ್ರತಿಷ್ಠಿತ ಕಂಪನಿಯೊಂದು ನೀಡಿದ್ದ ವಾರ್ಷಿಕ 32 ಲಕ್ಷ ರೂ ಸಂಬಳದ ಜಾಬ್ ಆಫರ್ ತ್ಯಜಿಸಿ ಬೆಂಗಳೂರಿನಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾಳೆ. ತನ್ನ ಈ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟಿದ್ದು ಇದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಸ್ನೇಹ ಪ್ರಿಯಾ (snehapriya9955) ಹೆಸರಿನ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಆಕಾಶದಲ್ಲಿ ಮೂಡಿದ ಸುಂದರ ಕಾಮನಬಿಲ್ಲಿನ ವಿಡಿಯೋ ಜತೆಗೆ ತನ್ನ ನಿರ್ಧಾರದ ಬಗ್ಗೆ ಹೇಳಿದ್ದಾಳೆ. ಈ ದಿನದಲ್ಲಿ ನಾನು ಗುರುಗ್ರಾಮದಲ್ಲಿರಬೇಕಿತ್ತು. ಅಲ್ಲೇ ನನ್ನ ವೃತ್ತಿಜೀವನದ ಹೊಸ ಅಧ್ಯಾಯ ಆರಂಭಿಸಬೇಕಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರನ್ನು ತೊರೆಯ ಬೇಕಿತ್ತು. ಆದರೆ ನಾನು ಸಿಲಿಕಾನ್‌ ಸಿಟಿಯಲ್ಲೇ ಉಳಿಯುವ ನಿರ್ಧಾರ ಮಾಡಿದೆ. ನನ್ನ ಈ ನಿರ್ಧಾರದ ಸಂದರ್ಭದಲ್ಲಿದ್ದ ಗೊಂದಲ ಹಾಗೂ ಅನುಮಾನಗಳಿಗೆ ಬೆಂಗಳೂರು ನಗರವು ಆಕಾಶದಲ್ಲಿ ಜಂಟಿ ಕಾಮನಬಿಲ್ಲುಗಳನ್ನು ಮೂಡಿಸುವ ಮೂಲಕ ವಿದಾಯ ಹೇಳಿತು ಎಂದು ಬರೆದುಕೊಂಡಿದ್ದಾಳೆ. ಅನೇಕ ಬಾರಿ ನಮ್ಮ ಅತ್ಯುತ್ತಮ ವೃತ್ತಿಪರ ನಿರ್ಧಾರ ಎಂದರೆ ಅತಿ ಹೆಚ್ಚು ಸಂಬಳದ ಆಫರ್ ಒಪ್ಪಿಕೊಳ್ಳುವ ಬದಲು ನಮ್ಮ ಮನಸ್ಸಿನ ನೆಮ್ಮದಿಗೆ ಬೆಲೆ ಕೊಡೋದು ಎಂದು ಕ್ಲಿಪ್ ಜತೆಗೆ ಉಲ್ಲೇಖಿಸಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸ್ಯಾಲರಿ ಹೈಕ್ ಕಡಿಮೆಯಾದದ್ದಕ್ಕೆ ಜಾಬ್ ರಿಸೈನ್ ಮಾಡಿದ ಬೆಂಗಳೂರಿನ ಯುವಕ

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಕಾಮನ ಬಿಲ್ಲನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಇನ್ನೊಬ್ಬರು, ಬೆಂಗಳೂರನ್ನು ತೊರೆದು ಹೋಗುವುದು ಅರಗಿಸಿಕೊಳ್ಳಲಾಗದ ಚಾಲೆಂಜ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಬ್ಬ ವ್ಯಕ್ತಿ ಬೆಂಗಳೂರರನ್ನು ತೊರೆದು ಹೋಗಲು ಬಯಸಿದ್ರು, ಬೆಂಗಳೂರು ಮಾತ್ರ ಆತನನ್ನು ಬಿಡಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ