Viral Video: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ ಬಸ್ ಡ್ರೈವರ್

ಎಲ್ಲಾ ಸಮಸ್ಯೆಗಳಿಗೂ ಸಾವು ಒಂದೇ ಪರಿಹಾರವೇ?  ಸಮಸ್ಯೆಗಳನ್ನು ಕೂತು ಬಗೆಹರಿಸುವ ಬದಲು, ಈ ಎಲ್ಲಾ ಸಮಸ್ಯೆಗಳಿಗೂ ಸಾವು ಒಂದೇ ಪರಿಹಾರವೆಂದು ಆತುರದ ನಿರ್ಧಾರವನ್ನು ತೆಗೆದುಕೊಂಡು ಅಮೂಲ್ಯ ಜೀವ, ಜೀವನವನ್ನು ಹಾಳು ಮಾಡಿಕೊಂಡವರು  ಹಲವರಿದ್ದಾರೆ. ಅದೇ ರೀತಿ ಈ ಜೀವನವೇ ಸಾಕು ಎಂದು ಇಲ್ಲೊಂದು ಮಹಿಳೆ ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಇದನ್ನು ಕಂಡ ಬಸ್ ಡ್ರೈವರ್ ಒಬ್ಬರು ತನ್ನ ಚಾಣಾಕ್ಷತಣದಿಂದ ತಾಯಿ-ಮಗುವಿನ ಅಮೂಲ್ಯ ಜೀವವನ್ನು ರಕ್ಷಿಸುವ ಮೂಲಕ ರಿಯಲ್ ಹೀರೋ ಆಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೇ ವೈರಲ್ ಆಗುತ್ತಿದೆ.

Viral Video: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ ಬಸ್ ಡ್ರೈವರ್
ವೈರಲ್​ ವಿಡಿಯೋ ಇಲ್ಲಿದೆ
Edited By:

Updated on: Dec 18, 2023 | 6:47 PM

ಜೀವನದಲ್ಲಿ ಒಂದು ಸಣ್ಣ ಏರುಪೇರು ಸಂಭವಿಸಿದರೂ, ತಾಳ್ಮೆಯಿಂದ ಯೋಚಿಸಿ ಪರಿಹಾರವನ್ನು ಕಂಡುಕೊಳ್ಳುವ ಬದಲು,  ಸಾವು ಒಂದೇ ಪರಿಹಾರವೆಂದು ಆತುರದ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಅಮೂಲ್ಯ ಜೀವ, ಜೀವನವನ್ನು ಹಾಳು ಮಾಡಿಕೊಂಡವರು ಹಲವರಿದ್ದಾರೆ. ಅಲ್ಲದೆ ಇಂತಹ   ಘಟನೆಗಳ ಸುದ್ದಿಗಳನ್ನು ನಾವು ನಾವು ಪ್ರತಿನಿತ್ಯ ಕೇಳುತ್ತಿರುತ್ತೇವೆ.  ಇಲ್ಲೊಂದು ಅದೇ ರೀತಿಯ ಘಟನೆ ನಡೆದಿದ್ದು,  ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ  ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.  ತಾಯಿ ಮಗು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಂಡ ಬಸ್ ಡ್ರೈವರ್  ಅವರಿಬ್ಬರನ್ನು ಸಾವಿನ ದವಡೆಯಿಂದ ರಕ್ಷಿಸುವ ಮೂಲಕ  ರಿಯಲ್  ಹೀರೋ ಆಗಿದ್ದಾರೆ.  ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

@ThebestFigen ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಮಗುವಿನ ಜೊತೆ  ಮೇಲ್ಸೆತುವೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುವ ದೃಶ್ಯವನ್ನು ಕಾಣಬಹುದು. ನಂತರ ಇದ್ದಕ್ಕಿದ್ದಂತೆ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಬ್ರಿಡ್ಜ್ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.  ತಾಯಿ ಮಗು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಬಸ್ ಡ್ರೈವರ್ ಒಬ್ಬರು, ತನ್ನ ಸೀಟ್ ಬೆಲ್ಟನ್ನು ಕಿತ್ತೊಗೆದು ಓಡಿ ಹೋಗಿ, ತಾಯಿ-ಮಗುವನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಮೂಲಕ  ಎರಡು ಅಮೂಲ್ಯ ಜೀವಗಳನ್ನು ರಕ್ಷಿಸಿದ್ದಾರೆ, ನಂತರ ಬಸ್ಸಿನಲ್ಲಿದ್ದ ಇತರರ ಸಹಾಯದೊಂದಿಗೆ ಆ ತಾಯಿ ಮಗುವನ್ನು ಬಸ್ ಒಳಗೆ ಕರೆತಂದು ಕೂರಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹಿಂಗೂ ಲವ್  ಬ್ರೇಕಪ್ ಆಗುತ್ತಾ? ಬಾಯ್​​​ಫ್ರೆಂಡ್ ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಬ್ರೇಕಪ್  

ವೈರಲ್​​ ವಿಡಿಯೋ ಇಲ್ಲಿದೆ:

ಡಿಸೆಂಬರ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಪಡದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಸಮಯಕ್ಕೆ ಸರಿಯಾಗಿ ದೇವರು ಬಸ್ ಚಾಲಕನನ್ನು ಕಳುಹಿಸಿ 2 ಅಮೂಲ್ಯ ಜೀವಗಳನ್ನು ರಕ್ಷಿಸಿದ್ದಾನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಸ್ ಚಾಲಕನಿಗೆ ನನ್ನದೊಂದು ಸಲಾಂʼ ಎಂದು ಕಮೆಂಟ್ ಮಾಡಿದ್ದಾರೆ.  ಇನ್ನೂ ಅನೇಕರು ಬಸ್  ಚಾಲಕನ ಧೈರ್ಯಕ್ಕೆ ಮತ್ತು  ಹಾಗೂ ಮಾನವೀಯ ಗುಣಕ್ಕೆ  ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 6:46 pm, Mon, 18 December 23

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us