Viral Video: ಭೀಕರ ರಸ್ತೆ ಅಪಘಾತ, ಕಾರಿನೊಳಗೆ ಇಬ್ಬರು ಪುರುಷರೊಂದಿಗೆ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆ

ಕಾರಿನೊಳಗೆ ಮಹಿಳೆ ಎರಡು ಪುರುಷರ ಜೊತೆ ಏಕಕಾಲದಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಉತ್ತರ ಪ್ರದೇಶದ ಜಜ್ಮೌ ಪೊಲೀಸ್ ಠಾಣೆ ವ್ಯಾಪ್ತಿಯ ಜೆಕೆ ಚೌರಾಹಾ ಬಳಿ ಈ ಘಟನೆ ನಡೆದಿದೆ.

Viral Video: ಭೀಕರ ರಸ್ತೆ ಅಪಘಾತ, ಕಾರಿನೊಳಗೆ ಇಬ್ಬರು ಪುರುಷರೊಂದಿಗೆ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆ

Updated on: Jul 31, 2024 | 1:51 PM

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಆಘಾತಕಾರಿ ಘಟನೆ ನಡೆದಿದೆ. ಅಪಘಾತಕ್ಕೀಡಾದವರನ್ನು ಪರೀಕ್ಷಿಸಲು ಮತ್ತು ಸಹಾಯ ಮಾಡಲು ಸ್ಥಳೀಯರು ಕಾರಿನ ಕಡೆಗೆ ಓಡಿಹೋಗಿದ್ದು, ಈ  ವೇಳೆ ಕಾರಿನೊಳಗಿದ್ದವರ ಸ್ಥಿತಿ ಕಂಡು ಶಾಕ್​​ ಆಗಿದ್ದಾರೆ.

ಮಹಿಳೆಯೊಬ್ಬಳು ಇಬ್ಬರು ಪುರುಷರೊಂದಿಗೆ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಾ ಕಾರು ಚಲಾಯಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು, ಈ ವೇಳೆ ಬೆತ್ತಲೆಯಾಗಿ ಮದ್ಯದ ಅಮಲಿನಲ್ಲಿದ್ದ ಮೂವರನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.

ಶನಿವಾರ (ಜುಲೈ 27) ರಾತ್ರಿ ಜಜ್ಮೌ ಪೊಲೀಸ್ ಠಾಣೆ ವ್ಯಾಪ್ತಿಯ ಜೆಕೆ ಚೌರಾಹಾ ಬಳಿ ಈ ಘಟನೆ ನಡೆದಿದೆ. ಕಾರಿನೊಳಗೆ ಮಹಿಳೆ ಎರಡೂ ಪುರುಷರ ಜೊತೆ ಏಕಕಾಲದಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು ಎನ್ನಲಾಗಿದೆ. ಕಾರಿನೊಳಗೆ ಮದ್ಯದ ಬಾಟಲಿಗಳು ಮತ್ತು ಇತರ ಆಕ್ಷೇಪಾರ್ಹ ವಸ್ತುಗಳನ್ನು ಸಹ ಪತ್ತೆಯಾಗಿದೆ. ಅಪಘಾತದಲ್ಲಿ ಮಹಿಳೆಗೆ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಫ್ರೀ ಬಸ್ ಎಫೆಕ್ಟ್, ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಹಲ್ಲುಜ್ಜುತ್ತಾ ಪ್ರಯಾಣಿಸಿದ ಮಹಿಳೆ

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರಿಬ್ಬರನ್ನೂ ಹಾಗೂ ಮಹಿಳೆಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಕೂಡ ಜಖಂಗೊಂಡಿದೆ. ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಅಪಘಾತದ ನಂತರ ಸ್ಥಳೀಯರು ಕಾರಿನ ಬಳಿ ನಿಂತಿರುವುದನ್ನು ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us