
ಛತ್ತೀಸ್‌ಗಢ, ಮಾ. 05: ಛತ್ತೀಸ್‌ಗಢ ಸರ್ಕಾರ ಸೋಮವಾರ (ಮಾ. 03) 2025-26ರ ಹಣಕಾಸು ವರ್ಷಕ್ಕೆ 1.65 ಲಕ್ಷ ಕೋಟಿ ರೂ.ಗಳ ಬಜೆಟ್ (Budget) ಮಂಡಿಸಿದೆ. ಈ ರಾಜ್ಯ ಬಜೆಟ್ ತುಂಬಾ ವಿಶೇಷವಾಗಿದ್ದು, ಗಣಕೀಕೃತ ಬಜೆಟ್ ಬದಲಿಗೆ ವಿತ್ತ ಸಚಿವರು ಕೈಯಿಂದ ಬರೆಯಲ್ಪಟ್ಟ ಬಜೆಟ್ ಮಂಡಿಸಿದ್ದಾರೆ. ಒಂದು ಕಾಲದಲ್ಲಿ ರಾಯ್‌ಪುರದಲ್ಲಿ ಕಲೆಕ್ಟರ್ ಆಗಿದ್ದ ಪ್ರಸ್ತುತ ಛತ್ತೀಸ್‌ಗಢದ ಹಣಕಾಸು ಸಚಿವರಾಗಿರುವ ಒ.ಪಿ ಚೌಧರಿ (O.P. Chaudhary) ಈ ಡಿಜಿಟಲ್ ಯುಗದಲ್ಲೂ ಕಂಪ್ಯೂಟರ್ ಟೈಪಿಂಗ್ ಬದಲಿಗೆ ಸ್ವತಃ ತಾನೇ ಬಜೆಟ್ ಪ್ರತಿಯನ್ನು ಕೈಯಲ್ಲೇ ಬರೆದು ಮಂಡಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಬಜೆಟ್ ಪ್ರತಿ ಸುಮಾರು 100 ಪುಟಗಳಾಗಿದ್ದು, ಈ ಬಜೆಟ್ ಪ್ರತಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಛತ್ತೀಸ್‌ಗಢ ವಿಧಾನಸಭೆಯಲ್ಲಿ ಹಣಕಾಸು ಸಚಿವ ಒ.ಪಿ. ಚೌಧರಿ ಕೈಬರಹದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ರಾಜ್ಯದಲ್ಲಿ ಕಂಪ್ಯೂಟರ್ ಟೈಪ್ ಮಾಡಿದ ಬಜೆಟ್ ಬದಲಿಗೆ, ಹಣಕಾಸು ಸಚಿವರು ಸ್ವತಃ ಕೈಬರಹದ ಬಜೆಟ್ ಅನ್ನು ಸದನದಲ್ಲಿ ಮಂಡಿಸಿದ್ದು ಇದೇ ಮೊದಲ ಬಾರಿ. ಈ ಬಜೆಟ್ 100 ಪುಟಗಳಾಗಿದ್ದು, ಇದನ್ನು ಸಂಪೂರ್ಣವಾಗಿ ಕೈಯಿಂದ ಬರೆಯಲಾಗಿದೆ. ಹಣಕಾಸು ಸಚಿವ ಒ.ಪಿ. ಚೌಧರಿ ಇದನ್ನು ಸಂಪ್ರದಾಯಗಳಿಗೆ ಮರಳುವ ಮತ್ತು ಸ್ವಂತಿಕೆಯನ್ನು ಉತ್ತೇಜಿಸುವತ್ತ ಒಂದು ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಛತ್ತೀಸ್‌ಗಢ ವಿಧಾನಸಭೆಯಲ್ಲಿ ಇಲ್ಲಿಯವರೆಗೆ ಕಂಪ್ಯೂಟರ್-ಟೈಪ್ ಮಾಡಿದ ಬಜೆಟ್‌ಗಳನ್ನು ಮಾತ್ರ ಮಂಡಿಸಲಾಗುತ್ತಿತ್ತು, ಆದರೆ ಈ ಬಾರಿ ಬಜೆಟ್ ಅನ್ನು ಸಾಂಪ್ರದಾಯಿಕ ಮತ್ತು ವಿಶಿಷ್ಟ ಶೈಲಿಯಲ್ಲಿ ಸಿದ್ಧಪಡಿಸಲಾಗಿದೆ. ಸ್ವತಃ ವಿತ್ತ ಸಚಿವರೇ ಈ 100 ಪುಟಗಳ ಬಜೆಟ್ ಪ್ರತಿಯನ್ನು ಬರೆದು ಸದನದಲ್ಲಿ ಮಂಡನೆ ಮಾಡಿದ್ದಾರೆ.
ಛತ್ತೀಸ್‌ಗಢ ಹಣಕಾಸು ಸಚಿವ ಒ.ಪಿ ಚೌಧರಿ ಕೈ ಬರಹದ ಬಜೆಟ್ ಪ್ರತಿ ಫೋಟೋವನ್ನು ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು “ಛತ್ತೀಚ್‌ಗಢದ ಐತಿಹಾಸಿಕ ಉಪಕ್ರಮ; ಇಂದು ರಾಜ್ಯದ ಮೊದಲ ಕೈಬರಹದ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. 100 ಪುಟಗಳ ಈ ಬಜೆಟ್ ಸಂಪ್ರದಾಯ ಮತ್ತು ಸ್ವಂತಿಕೆಯ ಹೊಸ ಉದಾಹರಣೆಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಕುದ್ರೋಳಿ ಗಣೇಶ್; ವಿಡಿಯೋ ವೈರಲ್
ಮಾರ್ಚ್ 03 ರಂದು ಶೇರ್ ಮಾಡಲಾದ ಈ ಫೋಟೊ 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಂತೂ ಅದ್ಯಯನಶೀಲ ಮತ್ತು ಚಿಂತನಶೀಲತೆಯ ಸಂಕೇತವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಐತಿಹಾಸಿಕ ಕ್ಷಣವಿದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ವಿಶಿಷ್ಟವಾಗಿ ಕೈ ಬರಹದ ಬಜೆಟ್ ಮಂಡಿಸಿದ ವಿತ್ತ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ