Viral Video: ಹೆಣ್ಣಿಗೆ ಸೀರೆ ಯಾಕೆ ಅಂದ ಗೊತ್ತಾ? ಈ ವಿಡಿಯೋ ನೋಡಿ

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ನೃತ್ಯದ ವಿಡಿಯೋ ವೈರೆಲ್ ಆಗಿದೆ. ಅದರಲ್ಲಿ ಏನಿದೆ ಅಂತೀರಾ? ಹಾಗಾದರೆ ಈ ರೀಲ್ಸ್ ಒಮ್ಮೆ ನೋಡಿ ನೀವು ಖಂಡಿತ ಇಷ್ಟ ಪಡುತ್ತೀರಾ? ಆರು ಜನ ಹೆಂಗಳೆಯರು ಸೀರೆ ಉಟ್ಟು "ಸೀರೆ ಯಾಕೆ ಅಂದ" ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು, ಇದಕ್ಕೆ "ಎಷ್ಟೊಂದು ನವಿಲುಗಳು ಎಂಬ ಶೀರ್ಷಿಕೆ ನೀಡಿದ್ದಾರೆ". ಇವರ ನೃತ್ಯ ಎಲ್ಲರ ಮನಸೂರೆಗೊಳ್ಳುವಂತಿದ್ದು ಅವರು ಹಾಕಿದ ಸ್ಟೆಪ್ ಕೂಡ ಹಾಡಿಗೆ ತಕ್ಕನಾಗಿದೆ.

Viral Video: ಹೆಣ್ಣಿಗೆ ಸೀರೆ ಯಾಕೆ ಅಂದ ಗೊತ್ತಾ? ಈ ವಿಡಿಯೋ ನೋಡಿ
ವೈರಲ್​​ ವಿಡಿಯೋ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2023 | 4:58 PM

ಪಾಶ್ಚಾತ್ಯ ಸಂಸ್ಕೃತಿಯನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಮಾತು ಸತ್ಯವಾದರೂ ನಮ್ಮ ಸೊಗಡನ್ನು ಮರೆಯದೆಯೇ ಪಾಲನೆ ಮಾಡುವವರು ಇದ್ದಾರೆ ಎಂಬುದು ಸುಳ್ಳಲ್ಲ. ಇದು ಹಲವು ಬಾರಿ ಸಾಬೀತಾಗಿದೆ ಕೂಡ. ನಮ್ಮ ಮಣ್ಣಿನ ಹೆಸರನ್ನು ಉಳಿಸದಿರುವವರು ಇರಬಹುದು. ಆದರೆ ಅದನ್ನು ಕಾಪಾಡಲು ಸಾವಿರ ಮಂದಿ ಇದ್ದಾರೆ ಎಂಬುದನ್ನು ನಂಬಲೇಬೇಕು. ಇದಕ್ಕೆ ಪೂರಕವೆಂಬಂತೆ ಒಂದು ನೃತ್ಯದ ವಿಡಿಯೋ ವೈರೆಲ್ ಆಗಿದೆ. ಅದರಲ್ಲಿ ಏನಿದೆ ಅಂತೀರಾ? ಹಾಗಾದರೆ ಈ ಮೀಮ್ಸ್ ಅನ್ನು ನೀವು ನೋಡಲೇ ಬೇಕು.

ಮೀಮ್ಸ್ ಸಬ್ಯಸ್ತ memes_sabhyasta ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ರೀಲ್ಸ್ ಹಂಚಿಕೊಳ್ಳಲಾಗಿದ್ದು ಸಿಕ್ಕಾ ಪಟ್ಟೆ ವೈರೆಲ್ ಆಗಿದೆ. ಏನಕ್ಕೆ ಅನ್ನುವ ಪ್ರಶ್ನೆ ಹುಟ್ಟುಕೊಂಡರೆ ಈ ರೀಲ್ಸ್ ಒಮ್ಮೆ ನೋಡಿ ನೀವು ಖಂಡಿತ uಇಷ್ಟ ಪಡುತ್ತೀರಾ? ಆರು ಜನ ಹೆಂಗಳೆಯರು ಸೀರೆ ಉಟ್ಟು “ಸೀರೆ ಯಾಕೆ ಅಂದ” ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು, ಇದಕ್ಕೆ “ಎಷ್ಟೊಂದು ನವಿಲುಗಳು ಎಂಬ ಶೀರ್ಷಿಕೆ ನೀಡಿದ್ದಾರೆ”. ಇವರ ನೃತ್ಯ ಎಲ್ಲರ ಮನಸೂರೆಗೊಳ್ಳುವಂತಿದ್ದು ಅವರು ಹಾಕಿದ ಸ್ಟೆಪ್ ಕೂಡ ಹಾಡಿಗೆ ತಕ್ಕನಾಗಿದೆ. ಇದೆಲ್ಲವೂ ಸೀರೆ ಪ್ರೀಯರಿಗೆ ಹಬ್ಬವಾಗಿದೆ. ಇನ್ನು ಸೀರೆ ಎಂದರೆ ದೂರ ಓಡುವ ಮತ್ತು ಸೀರೆ ಉಟ್ಟುಕೊಂಡರೆ ಏನು ಮಾಡಲು ಸಾಧ್ಯವಿಲ್ಲ ಎನ್ನುವ ಎಲ್ಲರಿಗೂ ಇದು ತಕ್ಕನಾದ ಸಂದೇಶ ರವಾನಿಸುವುದರಲ್ಲಿ ಸಂಶಯವಿಲ್ಲ. ಇದನ್ನು ಪೋಸ್ಟ್ ಮಾಡಿ ಒಂದು ದಿನಗಳಲ್ಲಿಯೇ ಅತೀ ಹೆಚ್ಚು ಶೇರ್ ಕಂಡಿದ್ದು ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಇದನ್ನೂ ಓದಿ: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ

ಇಲ್ಲಿದೆ ವೈರಲ್ ವಿಡಿಯೋ

ಈ ವಿಡಿಯೋಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಸೀರೆ ಉಟ್ಟು ಅಷ್ಟು ಚೆಂದವಾಗಿ ನೃತ್ಯ ಮಾಡಿದ್ದನ್ನು ನೋಡಿ ನಮ್ಮ ಸಂಸ್ಕ್ರತಿಯನ್ನು ಕೊಂಡಾಡಿದ್ದಾರೆ. ಮತ್ತೆ ಕೆಲವರು “ಬೆಂಕಿ ಸ್ಟೆಪ್ಸ್” ಎಂದಿದ್ದಾರೆ. ಇನ್ನೊಂದಿಷ್ಟು ಮಂದಿ “ಸೀರೆ ತೊಟ್ಟು ಇಷ್ಟು ಚೆಂದವಾಗಿ ಡಾನ್ಸ್ ಮಾಡಬಹುದಾ?” ಎಂದಿದ್ದಾರೆ. ಏನೇ ಇರಲಿ ಈ ನೃತ್ಯ ಮಾತ್ರ ಪಾಶ್ಚಾತ್ಯ ಸಂಸ್ಕೃತಿಗೆ ವಾಲಿಕೊಳ್ಳುತ್ತಿರುವವರು ನೋಡಲೇ ಬೇಕಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ