Viral: ಅಲ್ಕೋಹಾಲ್ ಕುಡಿಯೋ ಮುನ್ನ ಜನ ಒಂದು ತೊಟ್ಟು ಎಣ್ಣೆನಾ ನೆಲದ ಮೇಲೆ ಚಿಮುಕಿಸುವುದೇಕೆ?
ಎಣ್ಣೆ ಅಂದ್ರೆ ಪ್ರಾಣ ಬಿಡಿವವರು ಪ್ರಪಂಚದಾದ್ಯಂತ ಹಲವಾರು ಜನ ಇದ್ದಾರೆ. ಸಾಮಾನ್ಯವಾಗಿ ವಿದೇಶಗಳಲ್ಲಿ ಮದ್ಯ ಪ್ರಿಯರು ಗ್ಲಾಸ್‌ಗಳನ್ನು ಹಿಡಿದು ಚಿಯರ್ಸ್ ಮಾಡುವ ಮೂಲಕ ಎಣ್ಣೆ ಹೊಡೆದ್ರೆ, ಭಾರತದಲ್ಲಿ ಹೆಚ್ಚಿನವರು ಕುಡಿಯೋ ಮುನ್ನ ಒಂದೆರಡು ಹನಿ ಎಣ್ಣೆನಾ ನೆಲದ ಮೇಲೆ ಚಿಮುಕಿಸುತ್ತಾರೆ. ಈ ದೃಶ್ಯವನ್ನು ಬಹುಶಃ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಅಷ್ಟಕ್ಕೂ ಕುಡುಕರು ಹೀಗೆ ಮಾಡೋದ್ಯಾಕೆ ಗೊತ್ತಾ? ಈ ಪದ್ಧತಿಯ ಹಿಂದೆಯೂ ಕಾರಣವಿದೆಯಂತೆ, ಅದು ಏನೆಂಬುದನ್ನು ನೋಡೋಣ ಬನ್ನಿ.

ಮದ್ಯ ಪ್ರಿಯರಿಗೆ ಎಣ್ಣೆ (alcohol) ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಪರವಾಗಿಲ್ಲ ಎಣ್ಣೆ ಮಾತ್ರ ಬೇಕೇ ಬೇಕು ಅಂತಾರೆ. ಅದರಲ್ಲೂ ಕೆಲ ಕುಡುಕರು (drunards) ಒಂದು ತೊಟ್ಟು ಎಣ್ಣೆಯನ್ನು ಕೂಡಾ ವೇಸ್ಟ್ ಮಾಡೋಲ್ಲ ಅಂತಾರೆ. ಹೀಗಿದ್ರೂ ಕೂಡಾ ಹೆಚ್ಚಿನ ಕುಡುಕರು ಎಣ್ಣೆ ಹೊಡೆಯೋಕು ಮುನ್ನ ಗ್ಲಾಸ್‌ನಿಂದ ಒಂದೆರಡು ಹನಿ ಮದ್ಯವನ್ನು ತೆಗೆದು ಅದನ್ನು ನೆಲಕ್ಕೆ ಚಿಮುಕಿಸುತ್ತಾರೆ. ಈ ದೃಶ್ಯವನ್ನು ಬಹುಶಃ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಅಷ್ಟಕ್ಕೂ ಕುಡುಕರು ಒಂದೆರಡು ಹನಿ ಮದ್ಯವನ್ನು ನೆಲದ ಮೇಲೆ ಚಿಮುಕಿಸೋದ್ಯಾಕೆ ಎಂಬ ಯೋಚನೆ ನಿಮಗೂ ಬಂದಿದ್ಯಾ? ಇವರುಗಳು ಪಾಲಿಸುವ ಪದ್ಧತಿಯ (ritual) ಹಿಂದೆಯೂ ಕಾರಣವಿದೆಯಂತೆ, ಅದು ಏನೆಂಬುದನ್ನು ನೋಡೋಣ ಬನ್ನಿ.
ಜನ ಒಂದೆರಡು ಹನಿ ಮದ್ಯವನ್ನು ನೆಲೆದ ಮೇಲೆ ಏಕೆ ಸುರಿಯುತ್ತಾರೆ?
ಸಾಮಾನ್ಯವಾಗಿ ವಿದೇಶಗಳಲ್ಲಿ ಜನ ಮದ್ಯ ಸೇವಿಸುವ ಮುನ್ನ ಗ್ಲಾಸ್‌ಗಳನ್ನು ಹಿಡಿದು ಚಿಯರ್ಸ್ ಮಾಡಿ ನಂತರ ಎಣ್ಣೆ ಹೊಡೆಯುತ್ತಾರೆ. ಅದೇ ರೀತಿ ಭಾರತ ಸೇರಿದಂತೆ ಕೆಲವೊಂದಿಷ್ಟು ಕಡೆ ಕುಡುಕರು ಮೊದಲಿಗೆ ಒಂದೆರಡು ಹನಿ ಎಣ್ಣೆಯನ್ನು ನೆಲಕ್ಕೆ ಚಿಮುಕಿಸಿ ಬಳಿಕ ಎಣ್ಣೆ ಹೊಡೆಯುತ್ತಾರೆ. ಹೆಚ್ಚಿನವರು ಇದನ್ನು ತಮ್ಮ ಪೂರ್ವಜರಿಗೆ ಅಥವಾ ಸತ್ತವರ ಆತ್ಮಗಳಿಗೆ ಗೌರವಿಸುವ ಸಲುವಾಗಿ ಮಾಡುತ್ತಾರೆ. ಇದು ನಿಧನರಾದ ಪ್ರೀತಿಪಾತ್ರರನ್ನು ಒಳಗೊಂಡಂತೆ ನಮ್ಮೊಂದಿಗೆ ದೈಹಿಕವಾಗಿ ಇಲ್ಲದವರ ಜೊತೆ ಮದ್ಯವನ್ನು ಹಂಚಿಕೊಳ್ಳುವುದನ್ನು ಸಂಕೇತಿಸುತ್ತದೆ. ಅಷ್ಟೇ ಅಲ್ಲದೆ ಮದ್ಯವನ್ನು ಚಿಮುಕಿಸುವುದು ಋಣಾತ್ಮಕ ಶಕ್ತಿಗಳು ಅಥವಾ ದುಷ್ಟ ಶಕ್ತಿಯನ್ನು ನಿವಾರಿಸುತ್ತದೆ ಎಂದು ಭಾವಿಸಲಾಗಿದೆ.
ಜ್ಯೋತಿಷ್ಯದ ಕಾರಣವೂ ಅಡಗಿದೆ:
ಅನುರಾಗ್ ರಾಣಾ (anuragthakur0200) ಎಂಬವರು ಕುಡಿಯುವ ಮೊದಲು ಒಂದೆರಡು ಹನಿ ಮದ್ಯವನ್ನು ಚಿಮುಕಿಸುವುದರ ಹಿಂದೆ ಜ್ಯೋತಿಷ್ಯದ ಕಾರಣವೂ ಅಡಗಿದೆ ಎಂಬ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳುತ್ತಾರೆ, ಹಲವರಿಗೆ ಒಂದೆರಡು ಹನಿ ಮದ್ಯವನ್ನು ನೆಲಕ್ಕೆ ಚಿಮುಕಿಸುವ ಹಿಂದಿನ ಕಾರಣ ಏನು ಎಂಬುದೇ ಗೊತ್ತಿಲ್ಲ. ಅದೇನೆಂದರೆ ಹೀಗೆ ಮದ್ಯ ಚಿಮುಕಿಸುವುದರಿಂದ ಜೀವನದಲ್ಲಿ ಶನಿಯ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಚೆಸ್ ತಾರೆ ಡಿ. ಗುಕೇಶ್; ವಿಡಿಯೋ ವೈರಲ್
ಮದ್ಯ ಪ್ರಿಯರು ಹೆಚ್ಚಾಗಿ ಶನಿದೇವನನ್ನು ಮೆಚ್ಚಿಸಲು ಈ ತಂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಮದ್ಯಪಾನ ಮಾಡುವ ಮೊದಲು ಎಣ್ಣೆ ಚಿಮುಕಿಸುವ ಪದ್ದತಿಯನ್ನು ಪಾಲಿಸುವುದರಿಂದ ನಿಮ್ಮ ಅದೃಷ್ಟ ಕೂಡಾ ಬದಲಾಗಬಹುದು ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಉಂಗುರದ ಬೆರಳನ್ನು ಗ್ಲಾಸ್‌ನಲ್ಲಿರುವ ಎಣ್ಣೆಯೊಳಗೆ ಹಾಕಿ ಅದನ್ನು ನೆಲಕ್ಕೆ ಚಿಮುಕಿಸುವುದರಿಂದ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತಿರುವ ಶನಿಯ ಪ್ರಭಾವವನ್ನು ಶಾಂತವಾಗಿ ನೀವು ಧನಾತ್ಮಕ ಫಲಿತಾಂಶವನ್ನು ಪಡೆಯಬಹುದು. ಇದಕ್ಕಾಗಿಯೇ ಹೆಚ್ಚಿನವರು ಕುಡಿಯೋ ಮುನ್ನು ಎಣ್ಣೆಯನ್ನು ನೆಲಕ್ಕೆ ಚಿಮುಕಿಸುತ್ತಾರೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ