AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅನಾರೋಗ್ಯ ರಜೆ ಕೇಳಿದ್ದಕ್ಕೆ ಯುವತಿಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್

ಕಾರ್ಪೊರೇಟ್‌ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪಾಡು ದೇವರಿಗೆ ಪ್ರೀತಿ. ಮುರೊತ್ತು ಕೆಲಸ, ರೆಸ್ಟ್ ಅನ್ನೋದೇ ಇರಲ್ಲ. ಹುಷಾರಿಲ್ಲ ಅಂದ್ರು ರಜೆ ಸಿಗಲ್ಲ. ಇದೀಗ ಜ್ವರ ಬಂದ ಹಿನ್ನಲೆಯಲ್ಲಿ ರಜೆ ಕೇಳಿದ ಜೆನ್‌ ಝೀ ಉದ್ಯೋಗಿಗೆ ಮ್ಯಾನೇಜರ್‌ ನೀಡಿದ ಪ್ರತಿಕ್ರಿಯೆ ಶಾಕ್ ತಂದಿದೆ. ಹಿಂದೆ ಮುಂದೆ ನೋಡದೆ ಮ್ಯಾನೇಜರ್ ಗೆ ಖಡಕ್ ರಿಪ್ಲೈ ಕೊಟ್ಟಿದ್ದಾಳೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಅನಾರೋಗ್ಯ ರಜೆ ಕೇಳಿದ್ದಕ್ಕೆ ಯುವತಿಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on:Jul 03, 2026 | 2:11 PM

Share

ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ (corporate company) ಕೆಲಸ ಮಾಡುವವರಿಗೆ ರಜೆ ಸಿಗೋದೇ ಇಲ್ಲ. ರಜೆ ಕೇಳಿದ್ರೆ ಸಾಕು ಆಕಾಶ ಭೂಮಿ ಒಂದು ಮಾಡ್ತಾರೆ. ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ. ಅನೇಕ ಉದ್ಯೋಗಿಗಳು ಈ ರೀತಿ ಹೇಳೋದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಉದ್ಯೋಗಿಗೆ ಜ್ವರ ಬಂದ ಕಾರಣ ಮ್ಯಾನೇಜರ್ ಬಳಿ ರಜೆ ಕೇಳಿದ್ದಾಳೆ. ಆದರೆ ಮ್ಯಾನೇಜರ್ ಈ ಯುವತಿ ಬಳಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ್ದಾರೆ. ಮ್ಯಾನೇಜರ್ ಹೀಗೆನ್ನುತ್ತಿದ್ದಂತೆ ಉದ್ಯೋಗಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾಳೆ. ಈ ಸಂಭಾಷಣೆಯ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ನೆಟ್ಟಿಗರು ಈ ಯುವತಿಯ ಧೈರ್ಯಕ್ಕೆ ಮೆಚ್ಚಿಕೊಂಡಿದ್ದಾರೆ.

ವಾಟ್‌ ಎವರ್‌ ವಿಶಾಲ್‌ (@Whatevervishal) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ನಲ್ಲಿ ಜೆನ್‌ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ವಾಟ್ಸ್ಪ್‌ ಸಂಭಾಷಣೆಯ ಸ್ಕ್ರೀನ್‌ಶಾಟ್ ನೋಡಬಹುದು. ಇದರಲ್ಲಿ ಯುವತಿ ತನಗೆ ಜ್ವರ ಬಂದಿದ್ದು ಕೆಲಸಕ್ಕೆ ಬರಲು ಆಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್ ಆಫೀಸಿಗೆ ಬಾ, ಇಬ್ಬರೂ ಸೇರಿ ಡಾಕ್ಟರ್ ಹತ್ರ ಹೋಗಿ ಮೆಡಿಸಿನ್‌ ತಕೊಂಡು ಬರೋಣ ಎಂದು ಹೇಳಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಮ್ಯಾನೇಜರ್ ಪ್ರತಿಕ್ರಿಯೆಗೆ ರಿಪ್ಲೈ ಮಾಡಿದ ಯುವತಿ, ಜ್ವರ ಅಷ್ಟೊಂದಿಲ್ಲ , ಪ್ಯಾರಸಿಟಮಾಲ್ ತಗೊಂಡಿದ್ದೀನಿ, ರೆಸ್ಟ್ ಮಾಡಿದರೆ ಕಡಿಮೆಯಾಗುತ್ತದೆ ಎಂದಿದ್ದಾಳೆ. ಯಾರೇ ಆದ್ರೂ ಈ ಅನಾರೋಗ್ಯ ರಜೆ ತೆಗೆದುಕೊಂಡರೆ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಲು ಡೈರೆಕ್ಟರ್ ಹೇಳಿದ್ದಾರೆ ಎಂದ ಮ್ಯಾನೇಜರ್‌ಗೆ ಖಡಕ್ ಉತ್ತರ ನೀಡಿದ್ದಾಳೆ. ನಾನೇನು ಸ್ಕೂಲ್ ಸ್ಟೂಡೆಂಟ್‌ ಅಲ್ಲ. ಈಗಾಗಲೇ ನನ್ನ ರಜೆ ಬಾಕಿ ಇದೆ. ಅದನ್ನೇ ನಾನು ತೆಗೆದುಕೊಳ್ಳುತ್ತೇನೆ. ಡೈರೆಕ್ಟರ್ ದೊಡ್ಡ ಡಾಕ್ಟರ್ ಆಗಿದ್ದರೆ, ನನ್ನ ಹೆಸರಿಗೆ ಅವರೇ ಒಂದು ಪ್ರಿಸ್ಕ್ರಿಪ್ಷನ್ ಬರೆದುಕೊಡಲಿ. ನನ್ನತ್ರ ಡಾಕ್ಟರ್ ಚೀಟಿ ಇಲ್ಲ, ಪೋಷಕರ ಸಹಿ ಇರುವ ರಜಾ ಅರ್ಜಿ ಕೂಡ ಇಲ್ಲ. ನಾನೀಗ ರೆಸ್ಟ್ ಮಾಡುತ್ತೇನೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಸ್ಯಾಲರಿ ಹೈಕ್ ಕಡಿಮೆಯಾದದ್ದಕ್ಕೆ ಜಾಬ್ ರಿಸೈನ್ ಮಾಡಿದ ಬೆಂಗಳೂರಿನ ಯುವಕ

ಈ ಪೋಸ್ಟ್ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ರಜೆ ಎಂದಾಗ ಮ್ಯಾನೇಜರ್ ಗಳ ವರ್ತನೆ ಅತಿರೇಕಕ್ಕೆ ತಲುಪಿ ಬಿಡುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಅನಾರೋಗ್ಯ ಎಂದಾಗ ರಜೆ ಕೊಡಲ್ಲ ಹೇಳೋದು ಸರಿಯಲ್ಲ. ಈ ರೀತಿಯ ಅವಮಾನೀಯ ವರ್ತನೆ ಬದಲಾಗಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಯುವತಿ ಸರಿಯಾಗಿ ಹೇಳಿದ್ದಾಳೆ. ಈ ರೀತಿ ಮಾಡಿದ್ರೆ ಮಾತ್ರ ನಾವು ಬದುಕೋಕೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Fri, 3 July 26

Follow Us
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?