
ಕೆಲವರಿಗೆ ವಿದೇಶ (foreign) ಅಂದ್ರೆ ವ್ಯಾಮೋಹ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಸಾವಿರಾರು ಕನಸು ಹೊತ್ತು ವಿದೇಶಕ್ಕೆ ಹಾರುತ್ತಾರೆ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಆದರೆ ಅಮೆರಿಕದಲ್ಲಿ ನೆಲೆಸಿರುವ ದಂಪತಿ, ವಿದೇಶಿ ಜೀವನ ಅಷ್ಟು ಸುಲಭವಲ್ಲ ಎಂದಿದ್ದಾರೆ. ಇಲ್ಲಿಗೆ ಬರುವ ಯುವಜನತೆಗೆ ಇಂದು ಭಾರತದಲ್ಲಿ ಬೇಕಾದಷ್ಟು ಪ್ರತಿಷ್ಠಿತ ಕಂಪನಿಗಳಿವೆ, ಅಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದ್ದಾರೆ. ಈ ದಂಪತಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಕನೆಕ್ಟ್ (darshaanaconnects) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಅಮೆರಿಕದಲ್ಲಿ ನೆಲೆಸಿರುವ ದಂಪತಿ, ವಿದೇಶಕ್ಕೆ ಕೆಲಸಕ್ಕೆಂದು ಬರುವವರಿಗೆ ಸಲಹೆ ನೀಡಿದ್ದಾರೆ. ನಾವು ಇಲ್ಲಿಗೆ ಬಂದಿದ್ದೇವೆ.ಆದರೆ ಆ ಸಮಯದಲ್ಲಿ ಭಾರತದಲ್ಲಿ ಉತ್ತಮ ಉದ್ಯೋಗವನ್ನು ಪಡೆಯುವುದು ತುಂಬಾ ಕಷ್ಟವಾಗಿತ್ತು. ಉತ್ತಮ ಜೀವನ ಲೀಡ್ ಮಾಡೋದು ಕಷ್ಟಕರವಾಗಿತ್ತು. ಆದರೆ ಇಂದು ಭಾರತ ಅಭಿವೃದ್ಧಿ ಹೊಂದಿದೆ, ಅಲ್ಲಿ ಸಾಕಷ್ಟು ಎಂಎನ್‌ಸಿ ಕಂಪನಿಗಳಿವೆ. ಹೀಗಾಗಿ ಅಲ್ಲಿ ಉದ್ಯೋಗ ಪಡೋದು ಕಷ್ಟವಾಗಲ್ಲ ಎಂದಿದ್ದಾರೆ.
ಮನೆ, ಫ್ಯಾಮಿಲಿ ಹಾಗೂ ಸ್ನೇಹಿತರನ್ನು ಬಿಟ್ಟು ವಿದೇಶದಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಳಿದ್ದಷ್ಟು ಸುಲಭವಲ್ಲ. ಇಲ್ಲಿ ಅದೆಷ್ಟೋ ವರ್ಷಗಳು ಕಳೆದ್ರೂ ನಮ್ಮ ಊರು, ನಮ್ಮವರು ಎನ್ನುವ ಭಾವ ಬರಲ್ಲ. ಆದರೆ ಪರ ದೇಶ ಅಥವಾ ಊರಿನಲ್ಲಿ ಉದ್ಯೋಗ ಹಾಗೂ ಹಣವು ಒಂದು ಭಾಗವಷ್ಟೇ. ಆದರೆ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಗಳು ಬೇಕು ಎಂದು ಹೇಳಿದ್ದಾರೆ.
ಭಾರತೀಯರಿಗೆ ಗ್ರೀನ್ ಕಾರ್ಡ್ ಅಷ್ಟು ಸುಲಭವಾಗಿ ಸಿಗಲ್ಲ, ತುಂಬಾನೇ ಕಾಯಬೇಕು. ಆದರೆ ಚೀನಾದ ವಿದ್ಯಾರ್ಥಿಗಳು ಆಗಲ್ಲ, ವಿದೇಶಕ್ಕೆ ಬಂದು ಶಿಕ್ಷಣ ಪಡೆದು ಅವರ ದೇಶಕ್ಕೆ ಹೋಗಿ ಕೆಲಸ ಮಾಡ್ತಾರೆ. ವಿದೇಶದಲ್ಲಿ ಓದಿ ನಮ್ಮ ದೇಶದಲ್ಲೇ ದುಡಿದು ತಿನ್ನುವ ಎನ್ನುವ ಮನಸ್ಥಿತಿ ಭಾರತೀಯರಿಗೆ ಇರುವುದು ಕಡಿಮೆಯೇ ಎಂದು ವಿವರಿಸಿದ್ದಾರೆ. ವಿದೇಶಕ್ಕೆ ಹೋಗಿ ಬದುಕು ಕಟ್ಟಿಕೊಂಡ ಮೇಲೆ ಮತ್ತೆ ತಾಯ್ನಾಡಿಗೆ ಮರಳುವುದು ಸುಲಭವಲ್ಲ. ಈಗ ನಾವು ವಿದೇಶದಲ್ಲೇ ನೆಲೆಸಿದ್ದೇವೆ. ನಾನು ಪ್ರಸ್ತುತ ಭಾರತದಲ್ಲಿದ್ದರೆ ಖಂಡಿತ ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವ ನಿರ್ಧಾರ ಮಾಡುತ್ತಿರಲಿಲ್ಲ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಸ್ನೇಹಿತೆ ತಂದು ಕೊಟ್ಟ ಡ್ರೈ ಫ್ರೂಟ್ಸ್ ಲಡ್ಡು ಸವಿದ ರಷ್ಯನ್ ಯುವತಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತನ್ನು ಒಪ್ಪುತ್ತೇನೆ.. ಆದರೆ ಸೆಟ್ಲ್ ಅನ್ನೋ ಪದಕ್ಕೆ ವಿದೇಶವನ್ನು ಆಯ್ಕೆ ಮಾಡುವವರೇ ಹೆಚ್ಚು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಲ್ಪ ಸಂಬಳವಾದ್ರೂ ಕುಟುಂಬದೊಂದಿಗೆ ಉಳಿಯುವ ಖುಷಿಯೇ ಬೇರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಲ್ಲೇ ಹೋದ್ರು ಮತ್ತೆ ತಮ್ಮ ಹುಟ್ಟೂರಿಗೆ ಮರಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ