
Passport : ಈಗಲೂ ಅನೇಕರ ಜೇಬಿನಲ್ಲಿ, ಬ್ಯಾಗಿನಲ್ಲಿ, ಅನೇಕರು ಸಣ್ಣ ಡೈರಿಯನ್ನು ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಮೊಬೈಲ್ ನಂಬರ್, ಲೆಕ್ಕ ವ್ಯವಹಾರ ಇತ್ಯಾದಿ ವಿಷಯಗಳನ್ನು ನಮೂದಿಸಿರುತ್ತಾರೆ. ಆದರೆ ಪಾಸ್ಪೋರ್ಟ್ನಲ್ಲಿ ಹೀಗೆಲ್ಲ ಬರೆದುದನ್ನು ಈತನಕ ನೋಡಿದ್ದೀರೇ? ಇಲ್ಲವಾದರೆ ಈ ವಿಡಿಯೋ ನೋಡಿ. ಮಲಯಾಳದ ವ್ಯಕ್ತಿಯೊಬ್ಬರು ಪಾಸ್ಪೋರ್ಟ್ ನವೀರಕರಣಕ್ಕೆಂದು ಪಾಸ್ಪೋರ್ಟ್ ಆಫೀಸಿಗೆ ಹೋದಾಗ ಅಲ್ಲಿಯ ಅಧಿಕಾರಿ (Officer) ಪಾಸ್ಪೋರ್ಟ್ ತಪಾಸಣೆ ನಡೆಸಿದ್ದಾರೆ. ಅದರ ಅವಸ್ಥೆ ನೋಡಿ ದಿಗ್ಭ್ರಾಂತರಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳ ಮೂಲಕ ಮನರಂಜನೆ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : Viral Video: 8 ವರ್ಷದ ಈ ಬಾಲಕ ತನ್ನ ಹುಟ್ಟುಹಬ್ಬದ ದಿನ ಅತ್ತಿದ್ದೇಕೆ?
ಎರಡು ದಿನಗಳ ಹಿಂದೆ X ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 4,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 900 ಜನರು ರೀಪೋಸ್ಟ್ ಮಾಡಿದ್ದಾರೆ. ಸುಮಾರು 270 ಜನರು ಪ್ರತಿಕ್ರಿಯಿಸಿದ್ದಾರೆ.
ಈ ಪಾಸ್ಪೋರ್ಟ್ನೊಂದಿಗೆ ಪ್ರಯಾಣ ಮಾಡುವಾಗ ಅಧಿಕಾರಿ ಅದನ್ನು ಸ್ಟ್ಯಾಂಪ್ ಮಾಡಬೇಕಾದರೆ ಅವನಿಗೆ ಹೇಗನ್ನಿಸಬಹುದು ಎನ್ನುವುದು ಊಹಿಸಿ ಎಂದಿದ್ದಾರೆ ಒಬ್ಬರು. ಅವರು ಬಹುಶಃ ಪಾಸ್ಪೋರ್ಟ್ ಅನ್ನು ಈತನಕ ಪ್ರಯಾಣಕ್ಕೆ ಬಳಸಿಯೇ ಇಲ್ಲ ಎನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಖಾಲೀ ಪುಟಗಳನ್ನುಯಾಕೆ ಬಿಡಬೇಕು ಎಂದು ಯೋಚಿಸಿರುವಂತಿದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಕೋಕ್ ಸ್ಟುಡಿಯೋದ ‘ಖಲಾಸಿ’ ಬೆಡಗಿಯ ಬೆಲ್ಲಿ ಡ್ಯಾನ್ಸ್; ವಾಹ್ ಎಂದ ನೆಟ್ಟಿಗರು
ಮೊದಲನೇ ಸಲ ಇಂಥದನ್ನು ನೋಡುತ್ತಿದ್ದೇನೆ ಈ ಕಾಲದಲ್ಲಿ ಹೀಗೆ ಬದುಕುವವರೂ ಇದ್ದಾರೆಯೇ? ಎಂದು ಅಚ್ಚರಿಯಾಗುತ್ತಿದೆ ಎಂದಿದ್ದಾರೆ ಒಬ್ಬರು. ಹೀಗೆಲ್ಲ ಮಾಡುವವರು ನಮ್ಮ ದೇಶದವರೇ ಎಂದಿದ್ದಾರೆ ಇನ್ನೊಬ್ಬರು. ತಿಳಿವಳಿಕೆ ಇಲ್ಲದ ಜನ ಹೀಗೆ ಮಾಡಿದ್ದಾರೆ, ತಪ್ಪೇನಿದೆ? ಅಧಿಕಾರಿ ತಿಳಿಹೇಳಿರುತ್ತಾರೆ ಬಿಡಿ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:19 pm, Sat, 4 November 23