AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಡ್ಲಿ ತಿನ್ನೋ ಕಾಂಪಿಟೇಶನ್;‌ ಸ್ಪರ್ಧೆಯಲ್ಲಿ ಗೆಲ್ಲಲು ಒಮ್ಮೆಗೆ ಮೂರು ಇಡ್ಲಿ ನುಂಗಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಯಾವುದೇ ಆಹಾರವನ್ನು ನಿಧಾನಕ್ಕೆ ಅಗಿದು ತಿನ್ನಬೇಕು ಅನ್ನೋದನ್ನು ಆಗಾಗ್ಗೆ ಹೇಳುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಓಣಂ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಡ್ಲಿ ತಿನ್ನೋ ಕಾಂಪಿಟೇಷನ್‌ನಲ್ಲಿ ನಾನೇ ಗೆಲ್ಬೇಕು ಎಂದು ಒಮ್ಮೆಗೆ ಮೂರು ಇಡ್ಲಿಯನ್ನು ಗಬಗಬನೇ ನುಂಗಲು ಹೋಗಿದ್ದು, ಆ ಸಂದರ್ಭದಲ್ಲಿ ಇಡ್ಲಿ ಗಂಟಲಲ್ಲಿ ಸಿಲುಕಿ ಆ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Viral: ಇಡ್ಲಿ ತಿನ್ನೋ ಕಾಂಪಿಟೇಶನ್;‌ ಸ್ಪರ್ಧೆಯಲ್ಲಿ ಗೆಲ್ಲಲು ಒಮ್ಮೆಗೆ ಮೂರು ಇಡ್ಲಿ ನುಂಗಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ
ಮೃತ ಸುರೇಶ್‌(49)
ಮಾಲಾಶ್ರೀ ಅಂಚನ್​
| Edited By: |

Updated on: Sep 15, 2024 | 1:12 PM

Share

ಆಹಾರವನ್ನು ತಿನ್ನುವಾಗ ನಿಧಾನವಾಗಿ ಜಗಿದು ತಿನ್ನಬೇಕು ಎಂದು ಹೇಳುತ್ತಾರೆ. ಹೀಗಿದ್ರೂ ಕೂಡಾ ನಮ್ಮಲ್ಲಿ ಅನೇಕರು ಈ ಕ್ರಮವನ್ನು ಪಾಲಿಸದೇ ಅರ್ಜೆಂಟ್‌ ಅಲ್ಲಿ ಆಹಾರವನ್ನು ಸರಿಯಾಗಿ ಜಗಿಯದೇ ಗಬಗಬನೇ ತಿನ್ನುತ್ತಾರೆ. ಇದು ನಮ್ಮಲ್ಲಿ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತು. ಆದ್ರೆ ಇಲ್ಲೊಬ್ಬ ವ್ಯಕ್ತಿ ಗಬಗಬನೇ ತಿನ್ನಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೌದು ಓಣಂ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಇಡ್ಲಿ ತಿನ್ನುವ ಕಾಂಪಿಟೇಶನ್‌ನಲ್ಲಿ ನಾನೇ ಗೆಲ್ಬೇಕು ಎಂದು ಒಮ್ಮೆಗೆ ಮೂರು ಇಡ್ಲಿಯನ್ನು ಗಬಗಬನೆ ನುಂಗಲು ಹೋಗಿದ್ದು, ಆ ಸಂದರ್ಭದಲ್ಲಿ ಇಡ್ಲಿ ಗಂಟಲಲ್ಲಿ ಸಿಲುಕಿ ಆ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಈ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದ್ದು, ಸೆಪ್ಟೆಂಬರ್‌ 14 ಶನಿವಾರದಂದು ಇಲ್ಲಿನ ವಳಯಾರ್‌ನಲ್ಲಿ ಓಣಂ ಹಬ್ಬದ ಪ್ರಯುಕ್ತ ಸ್ಥಳೀಯ ಸಂಘಟನೆಯೊಂದು ಇಡ್ಲಿ ತಿನ್ನುವಂತಹ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಗಬಗಬನೇ ಇಡ್ಲಿಯನ್ನು ತಿನ್ನಲು ಹೋಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅಯ್ಯಯ್ಯೋ… ತಾಜ್‌ ಮಹಲ್‌ ಆವರಣದಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ವಿಡಿಯೋ ವೈರಲ್‌

ಅರ್ಜೆಂಟ್‌ ಅಲ್ಲಿ ತಿನ್ನುವಾಗ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಇದರಿಂದ ಆ ವ್ಯಕ್ತಿ ಉಸಿರಾಡಲು ಪರದಾಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರಾದೃಷ್ಟವಶಾತ್‌ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಪಾಲಕ್ಕಾಡ್‌ನ ಅಲಮರಮ್‌ ನಿವಾಸಿ ಸುರೇಶ್‌ (49) ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಪೊಲೀಸರು ಇದನ್ನು ಅಸಹಜ ಸಾವೆಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ