Viral: ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌; ವಿಡಿಯೋ ವೈರಲ್‌

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ಹರಿದಾಡುತ್ತಿದ್ದು, ಮ್ಯಾಜಿಕ್‌ ಶೋ ಒಂದರಲ್ಲಿ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ ರಶ್ಮಿಕಾ ಮಂದಣ್ಣ ತಲೆಯನ್ನೇ ಬೋಳಿಸಿದ್ದಾರೆ. ಮ್ಯಾಜಿಕ್‌ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ನೋಡುಗರಂತೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral: ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌; ವಿಡಿಯೋ ವೈರಲ್‌
ವೈರಲ್​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2025 | 11:10 AM

ಜಾದು (Magic) ಎನ್ನುವುದು ಎಲ್ಲರ ಕಣ್ಸೆಳೆಯುವ ಒಂದು ಅದ್ಭುತ ಕಲೆ. ಇಂತಹ ಅದ್ಭುತ ಕಲೆಯ ಮೂಲಕವೇ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದವರು ಜಾದೂಗಾರ ಕುದ್ರೋಳಿ ಗಣೇಶ್‌ (Kudroli Ganesh). ತಮ್ಮ ವಿಶಿಷ್ಟ ಜಾದೂ ಕಲೆಯಿಂದಲೇ ಮನೆ ಮಾತಾಗಿರುವ ಇವರು ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ತಲೆಯನ್ನು ಬೋಳಿಸಿದ್ದಾರೆ. ಹೌದು ಮ್ಯಾಜಿಕ್‌ ಶೋ ಒಂದರಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಫೋಟೋದಲ್ಲಿನ ಕೂದಲನ್ನೇ ಮಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಮ್ಯಾಜಿಕ್‌ ಶೋನಲ್ಲಿ ನಡೆದ ಈ ಕಾಮಿಡಿಯನ್ನು ನೋಡಿ ನೋಡುಗರು ಈ ಮ್ಯಾಜಿಕ್‌ ಅಂತೂ ತುಂಬಾ ಮಜವಾಗಿದೆ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಕೆಲವೊಂದು ಮ್ಯಾಜಿಕ್‌ಗಳು ನಮ್ಮನ್ನು ನಿಬ್ಬೆರಗಾಗಿಸುವಂತೆ ಮಾಡಿದರೆ, ಕೆಲವೊಂದು ಜಾದೂಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ ಅವರು ರಶ್ಮಿಕಾ ಮಂದಣ್ಣ ತಲೆಗೂದಲನ್ನು ಮಾಯ ಮಾಡುವ ಜಾದೂ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಇದನ್ನೂ ಓದಿ
ಈಜುಕೊಳದಲ್ಲಿ ಪಲ್ಟಿ ಹೊಡೆದ 84 ರ ಹರೆಯದ ಅಜ್ಜಿ
ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು
ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ ಹೃದಯವಂತ
ಲೈಫ್​​ನ್ನು ಬ್ಯಾಚುರಲ್ ಇದ್ದಾಗಲೇ ಎಂಜಾಯ್ ಮಾಡಿ ಎಂದ ಪೊಲೀಸ್

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


udupimerijaanofficial__ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್‌ ತಮ್ಮ ಇಬ್ಬರು ಅಸಿಸ್ಟೆಂಟ್‌ಗಳೊಂದಿಗೆ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದ ಚಿತ್ರವನ್ನು ಹಿಡಿದಿರುವ ದೃಶ್ಯವನ್ನು ಕಾಣಬಹುದು. ತಕ್ಷಣ ಅವರು ಮ್ಯಾಜಿಕ್‌ ಟ್ರಿಕ್ ಮೂಲಕ ರಶ್ಮಿಕಾ ಮಂದಣ್ಣ ಕೂದಲು ಮಾಯಾ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಈ ಮಹಿಳೆಯ ಡ್ರೀಮ್ ಜಾಬ್ ಅಂತೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ಫನ್ನಿಯಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಮ್ಯಾಜಿಕ್‌ ಶೋ ಅಲ್ಲ, ಕಾಮಿಡಿ ಶೋʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:09 am, Wed, 5 March 25