
ಈ ಇಂಟರ್ನೆಟ್ ಯುಗದಲ್ಲಿ ಮೊಬೈಲ್ ಫೋನ್ (Mobile Phone) ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಹೆಚ್ಚಿನವರು ಈ ಸ್ಮಾರ್ಟ್ ಫೋನ್‌ಗಳಿಗೆ ದಾಸರಾಗಿ ಬಿಟ್ಟಿದ್ದಾರೆ. ಹೀಗೆ ಮೊಬೈಲ್ (Mobile) ನಲ್ಲಿ ಮುಳುಗಿ ಮೈ ಮರೆತು ಆದಂತಹ ಒಂದಷ್ಟು ಎಡವಟ್ಟು, ನಿರ್ಲಕ್ಷ್ಯದ ಘಟನೆಗಳ ಕೇಳಿರುತ್ತೀರಿ ಅಲ್ವಾ. ಅಂತಹದ್ದೇ ಎಡವಟ್ಟೊಂದು ಇದೀಗ ನಡೆದಿದ್ದು, ಓರ್ವ ತಾಯಿ (Mother) ಫೋನಿನಲ್ಲಿ ಮಾತನಾಡುತ್ತಾ ಮೈ ಮರೆತು ತನ್ನ ಮಗುವನ್ನು (Baby) ಪಾರ್ಕ್‌ನಲ್ಲಿಯೇ ಬಿಟ್ಟು ಹೋಗಿದ್ದಾಳೆ. ನಂತರ ಯಾರೋ ಬಂದು ಮಗುವನ್ನು ಆಕೆಯ ಕೈಗೊಪ್ಪಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ವೈರಲ್ ದೃಶ್ಯವನ್ನು ಕಂಡು ಇದು ಸ್ಕ್ರಿಪ್ಟೆಡ್ ವಿಡಿಯೋ ಸ್ವಾಮಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ತಾಯಿಯೊಬ್ಬಳು ಫೋನಿನಲ್ಲಿ ಮಾತನಾಡುತ್ತಾ ಮಗುವನ್ನು ಪಾರ್ಕ್‌ನಲ್ಲಿಯೇ ಮರೆತು ಬಿಟ್ಟು ಹೋದಂತಹ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾಯಿ ಫೋನಿನಲ್ಲಿ ಮಾತಾಡ್ತಾ ಮಗುವನ್ನು ಬಿಟ್ಟು ಸೀದಾ ಹೋಗಿದ್ದು, ನಂತರ ಓರ್ವ ಪುರುಷ ಮಗುವನ್ನು ತಂದು ತಾಯಿಯ ಕೈಗೆ ಒಪ್ಪಿಸಿದ್ದಾರೆ. ಹಲವು ಜನ ದೃಶ್ಯವನ್ನು ಕಂಡು ಏನಪ್ಪಾ ತಾಯಿಗೆ ಒಂಚೂರು ಜವಬ್ದಾರಿ ಬೇಡ್ವಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಇದು ನಿಜ ಘಟನೆಯಲ್ಲ ಬದಲಿಗೆ ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಮತ್ತು ಸೀರಿಯಲ್ ಶೂಟಿಂಗ್ ದೃಶ್ಯವಾಗಿದೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
Mother apparently “forgot” her child in the park: pic.twitter.com/eyg7pgQi6z
— Ghar Ke Kalesh (@gharkekalesh) March 10, 2025
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ತಾಯಿ ತನ್ನ ಮಗುವನ್ನು ಪಾರ್ಕ್‌ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಪಾರ್ಕ್‌ನಲ್ಲಿಯೇ ಬಿಟ್ಟು ಮೊಬೈಲ್‌ನಲ್ಲಿ ಮಾತನಾಡುತ್ತಾ ಸೀದಾ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಅವರ ಹಿಂದೆಯೇ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಓಡೋಡಿ ಬಂದ ವ್ಯಕ್ತಿಯೊಬ್ಬರು ಮಗುವನ್ನು ತಾಯಿಯ ಕೈಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಮೂಢ ನಂಬಿಕೆಯ ಪರಮಾವಧಿ; ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ
ಮಾರ್ಚ್ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಗಂತೂ ಇಡೀ ಜಗತ್ತೇ ಫೋನಿಗೆ ದಾಸರಾಗಿ ಬಿಟ್ಟಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಲ್ಲಿ ಅಷ್ಟೊಂದು ಜನ ನೆರೆದಿದ್ದಾರೆ, ಬಹುಶಃ ಇದು ಶೂಟಿಂಗ್ ದೃಶ್ಯ ಇರ್ಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್ ವಿಡಿಯೋದಂತೆ ಕಾಣುತ್ತದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ