ವಿಮಾನದಲ್ಲಿ ಪತ್ನಿಯನ್ನು ಎಕನಾಮಿಕ್ ಕ್ಲಾಸ್ (Economic Class) ನಲ್ಲಿ ಬಿಟ್ಟು ಪತಿಯೊಬ್ಬ ಬ್ಯಸಿನೆಸ್ ಕ್ಲಾಸ್(Business class) ನಲ್ಲಿ ಕುಳಿತು ಪ್ರಯಾಣಿಸಲು ನಿರ್ಧಿರಿಸಿದ್ದನು. ಇದಕ್ಕೆ ಕಾರಣ ವಿಮಾನ (Flight) ಸಿಬ್ಬಂದಿ ಬ್ಯಸಿನೆಸ್ ಕ್ಲಾಸ್ನಲ್ಲಿ ಒಂದೇ ಸೀಟನ್ನು ನೀಡಿದ ಕಾರಣ ಪತ್ನಿಯನ್ನು ಎಕನಾಮಿಕ್ ಕ್ಲಾಸ್ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದು, ಈ ಕುರಿತು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದನು. ಇದರಿಂದ ಕೋಪಗೊಂಡ ನೆಟ್ಟಿಗರು ವ್ಯಕ್ತಿಯನ್ನು ತರಾಟಗೆ ತೆಗೆದುಕೊಂಡಿದ್ದಾರೆ. ದಂಪತಿ ರಜಾ ದಿನಗಳನ್ನು ಕಳೆಯಲು ಜಪಾನ್ನಿಂದ ಯುಎಸ್ಗೆ ತೆರಳುತ್ತಿದ್ದು 12 ಗಂಟೆಗಳ ಪ್ರಯಾಣವಾಗಿತ್ತು. ಈ ವೇಳೆ ಪತ್ನಿ ಪತಿ ಜೊತೆ ಕೂರಲು ಬಯಸಿದ್ದರು ಆದರೆ ವಿಮಾನ ಸಿಬ್ಬಂದಿ ಸೀಟನ್ನು ಕೊಡದ ಕಾರಣ ಬೇರೆ ಬೇರೆಯಾಗಿ ಪ್ರಯಾಣಿಸಲು ನಿರ್ಧರಿಸಿದ್ದರು. ಈ ಬಗ್ಗೆ ವ್ಯಕ್ತಿ ತಮ್ಮ ನಿರ್ಧಾರವನ್ನು ರಡ್ಡಿಟ್ನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಕುರಿತು ಆತ ನಾವು ರಜಾ ದಿನಗಳನ್ನು ಕಳೆಯಲು ಯುಎಸ್ಗೆ ಹೊರಡಬೇಕು ಎಂದುಕೊಂಡು ಟಿಕೆಟ್ ಬುಕ್ ಮಾಡಿದ್ದೆವು. ಎರಡೂ ಟಿಕೆಟ್ಗಳೂ ಕೂಡ ಬ್ಯುಸಿನೆಸ್ ಕ್ಲಾಸ್ಗೆ ಬುಕ್ ಆಗಿದೆ ಎಂದುಕೊಂಡಿದ್ದೆವು ಆದರೆ ಬೇರೆ ಬೇರೆಯಾಗಿತ್ತು. ಸಿಬ್ಬಂದಿ ಬಳೆ ಕೇಳಿದಾಗ ನಿಷ್ಟುರವಾಗಿ ಸೀಟನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಕುರಿತು ನಾನು ನನ್ನ ಹೆಂಡತಿಗೆ ತಿಳಿಸಿದಾಗ ತೀವ್ರ ಅಸಮಧಾನಗೊಂಡಳು.ಆದರೂ ಆಕೆಗೆ ಮನವರಿಕೆ ಮಾಡಿಸಿ ಎಕನಾಮಿಕ್ ಕ್ಲಾಸ್ನಲ್ಲಿ ಪ್ರಯಾಣ ಮಾಡುವಂತೆ ಒಪ್ಪಿಸದ್ದೇನೆ ಎಂದಿದ್ದಾರೆ.
ಈ ವಿಚಾರ ಕೇಳಿ ನೆಟ್ಟಿಗರು ಪತಿಯ ವಿರುದ್ಧ ಕಿಡಿಕಾರಿದ್ದು ಸ್ವಾರ್ಥಿ ಪತಿ ಎಂದು ದೂಷಿಸಿದ್ದಾರೆ. ಇನ್ನೂ ಕೆಲವರು ಎರಡೂ ಸೀಟನ್ನು ಅಪ್ಗ್ರೇಡ್ ಮಾಡಬೇಕಿತ್ತು, ಇಲ್ಲವಾದರೆ ನೀವೂ ಎಕನಾಮಿಕ್ ಕ್ಲಾಸ್ನಲ್ಲಿಯೇ ಪ್ರಯಾಣಿಸಬೇಕಿತ್ತು ಅದನ್ನು ಬಿಟ್ಟು 12 ತಾಸು ಪತ್ನಿಯನ್ನು ಇನ್ನೆಲ್ಲೋ ಕೂರಿಸಿ ಪ್ರಯಾಣ ಮಾಡಲು ನಿರ್ಧರಿಸಿದ್ದೀರಿ ಎಂದರೆ ಇದು ಸರಿಯಲ್ಲ ಎಂದಿದ್ದಾರೆ ರೆಡ್ಡಿಟ್ನಲ್ಲಿ ಹಂಚಿಕೊಂಡ ಬಳಿಕ ಕಾಮೆಂಟ್ಗಳನ್ನು ನೋಡಿ ಪತಿ ಕೊನೆಗೆ ಸೀಟ್ಅನ್ನು ಅಪ್ಗ್ರೇಡ್ ಮಾಡಿಸಿ ಪ್ರಯಾಣ ಮುಂದುವರೆಸಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ:
Published On - 3:43 pm, Fri, 11 February 22