Dubai: ದುಬೈನ ಅತ್ಯಂತ ದುಬಾರಿ ಮನೆ ರೂ. 1,675 ಕೋಟಿಗೆ ಮಾರಾಟಕ್ಕಿದೆ. ಇಷ್ಟೊಂದು ಭಾರೀ ಬೆಲೆ ನಿಗದಿಯಾಗಿದೆ ಎಂದ ಮೇಲೆ ಈ ಮನೆಯು ಏನೆಲ್ಲ ವೈಶಿಷ್ಟ್ಯಗಳಿಂದ ಕೂಡಿರಬಹುದು ಎಂಬ ಕುತೂಹಲ ಸಹಜ ಅಲ್ಲವೆ? ಮಾರ್ಬಲ್ ಪ್ಯಾಲೇಸ್ (Marble Palace) ಎಂದು ಕರೆಯುವ ಈ ಮನೆಗೆ ಇಟ್ಯಾಲಿಯನ್ ಕಲ್ಲುಗಳು ಮತ್ತು ಸುಮಾರು 7,00,000 ಚಿನ್ನದ ರೇಕುಗಳನ್ನು ಬಳಸಿ ಅಲಂಕರಿಸಲಾಗಿದೆ. 5 ಬೆಡ್ರೂಮ್, 19 ಬಾತ್ರೂಮ್, 15 ಕಾರ್ ಗ್ಯಾರೇಜ್, ಒಳಾಂಗಣ ಮತ್ತು ಹೊರಾಂಗಣದಲ್ಲಿ ಈಜುಕೊಳ, 70,00,000 ಲೀಟರ್ ಸಾಮರ್ಥ್ಯವುಳ್ಳ ಹವಳದ ಬಂಡೆಗಳಿಂದ ಕೂಡಿದ ಅಕ್ವೇರಿಯಂ, ಎಲೆಕ್ಟ್ರಿಕ್ ಸಬ್ಸ್ಟೇಷನ್ಗಳನ್ನು ಇದು ಒಳಗೊಂಡಿದೆ.
ಇದನ್ನೂ ಓದಿ : Viral: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?
ಈ ಮಾರ್ಬಲ್ ಪ್ಯಾಲೇಸ್ ನಿರ್ಮಾಣಗೊಳ್ಳಲು ಸುಮಾರು 12 ವರ್ಷಗಳನ್ನು ತೆಗೆದುಕೊಂಡಿದೆ. 2018 ರಿಂದ ಇದು ಪೂರ್ಣಗೊಂಡು ಮಾರಾಟಕ್ಕೆ ಮುಕ್ತವಾಗಿದೆ. ಇದರ ಮಾಲೀಕರು ಲೋಕಲ್ ಪ್ರಾಪರ್ಟಿ ಡೆವಲಪರ್ ಆಗಿದ್ದು, ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಿಲ್ಲ. ಲುಕ್ಷಾಬಿಟಟ್ಸೋರ್ಬೈನ ದಲ್ಲಾಳಿಯ ಕುನಾಲ್ ಸಿಂಗ್, ‘ಇದು ಪ್ರತಿಯೊಬ್ಬರಿಗೂ ಇಷ್ಟವಾಗುವ ರೀತಿ ಮತ್ತು ಶೈಲಿಯಲ್ಲಿ ಕಟ್ಟಿದಂಥ ಮನೆಯಲ್ಲ. ಇದನ್ನು ಖರೀದಿಸಲು ಬಯಸುವವರು ಪ್ರೀತಿಸುತ್ತಾರೆ ಅಥವಾ ದ್ವೇಷಿಸುತ್ತಾರೆ ಎನ್ನುವುದರ ಬಗ್ಗೆ ನಮಗೆ ಅರಿವಿದೆ. ಇಡೀ ಜಗತ್ತಿನಲ್ಲಿ ಐದರಿಂದ ಹತ್ತು ಮಂದಿ ಮಾತ್ರ ಇದನ್ನು ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದಾನೆ.
ಇದನ್ನೂ ಓದಿ : Viral Video: ಆಸ್ಟ್ರೇಲಿಯಾದ ಮನೆಯೊಂದರಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ
ಎಮಿರೇಟ್ಸ್ ಹಿಲ್ಸ್ ಸುಮಾರು 20 ವರ್ಷಗಳ ಹಿಂದೆ ವಿನ್ಯಾಸಗೊಳಿಸಲಾದ ಗೇಟೆಡ್ ಸಮುದಾಯವಾಗಿದೆ. ಇದನ್ನು ದುಬೈನ ಬೆವರ್ಲಿ ಹಿಲ್ಸ್ ಎಂದೂ ಕರೆಯಲಾಗುತ್ತದೆ. ಇದು ಗಾಲ್ಫ್ ಕೋರ್ಸ್ಗೆ ಅಂಟಿಕೊಂಡಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ