Video: ಸಾಧುವಿನ ವೇಷ ತೊಟ್ಟು ಬಸವನೊಂದಿಗೆ ಭಿಕ್ಷಾಟನೆ ಮಾಡ್ತಿದ್ದಾಗ ಸಿಕ್ಕಿ ಬಿದ್ದ ಮುಸ್ಲಿಂ ವ್ಯಕ್ತಿ
ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಶ್ರಾವಣ ಮೊದಲ ಸೋಮವಾರದಂದು ಹಿಂದೂ ಸಾಧುವಿನ ವೇಷ ಧರಿಸಿ ಕೋಲೆ ಬಸವನೊಂದಿಗೆ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಇನ್ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಕೈ ಮುಗಿದು ಕ್ಷಮೆ ಕೇಳಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಗೆಜ್ಜೆ ಮಣಿ, ಬಣ್ಣದ ಬಟ್ಟೆಗಳಿಂದ ಅಲಂಕೃತನಾದ ಕೋಲೆ ಬಸವ ಮನೆ ಮನೆಗೆ ಬಂದು ಮನೆ ಮಂದಿಯನ್ನು ಹರಸುವ ಸಂಪ್ರದಾಯ ನಮ್ಮಲ್ಲಿದೆ. ಬಸವ ಮನೆಗೆ ಬಂದರೆ ಶುಭ ಲಕ್ಷಣ, ಮನೆಯವರಿಗೆ ಒಳ್ಳೆಯದಾಗುತ್ತೆ ಎಂಬ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ಮನೆ ಮನೆಗೆ ಬರುವ ಕೋಲೆ ಬಸವನಿಗೆ ಮನೆ ಮಂದಿ ಅಕ್ಕಿ, ಬೆಲ್ಲವನ್ನು ನೀಡಿ ನಮಸ್ಕರಿಸಿ ಹಣ ಕೊಟ್ಟು ಕಳುಹಿಸುತ್ತಾರೆ. ಇದೇ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಸಾಧುವಿನ ವೇಷ ತೊಟ್ಟು ಶ್ರಾವಣ ಮಾಸದ ಮೊದಲ ಸೋಮವಾರದಂದು ಕೋಲೆ ಬಸವನೊಂದಿಗೆ ಭಿಕ್ಷಾಟನೆ ಮಾಡ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಇನ್ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಕೈ ಮುಗಿದು ಕ್ಷಮೆ ಕೇಳಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಜುಲೈ 24 ಅಂದ್ರೆ ಶ್ರಾವಣ ಮಾಸದ ಮೊದಲ ಸೋಮವಾರದಂದು ಮೊಹಮ್ಮದ್ ನೌಶಾದ್ ಎಂಬಾತ ಹಿಂದೂ ಸಾಧುವಿನ ವೇಷ ತೊಟ್ಟು, ಕೋಲೆ ಬಸವನೊಂದಿಗೆ ಮೀರತ್ ನಗರದ ಗಲ್ಲಿಗಳಲ್ಲಿ ಭಿಕ್ಷಾಟನೆ ಮಾಡ್ತಿದ್ದಾಗ ಜನರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಹೀಗೆ ಸಿಕ್ಕಿ ಬಿದ್ದ ಬಳಿಕ ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡುವುದಿಲ್ಲ, ದಯವಿಟ್ಟು ಕ್ಷಮಿಸಿಬಿಡಿ ಎಂದು ಕೈ ಮುಗಿದು ಕ್ಷಮೆ ಕೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ ( ಎಕ್ಸ್ ಖಾತೆ)
#Meerut : Mohammad Naushad was caught roaming around with a Nandi Maharaj on the first day of Sawan month , he was asking for alms disguised as Hindu Sadhu.
When he was confronted and searched , he started demanding forgiveness.
This is exactly why “Name is important”… pic.twitter.com/la4SiLB5W3
— Amitabh Chaudhary (@MithilaWaala) July 24, 2024
ಈ ಕುರಿತ ಪೋಸ್ಟ್ ಒಂದನ್ನು ಅಮಿತಾಭ್ ಚೌಧರಿ (MithilaWaala) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸಾಧುವಿನ ವೇಷ ಧರಿಸಿ ಕೋಲೆ ಬಸವನೊಂದಿಗೆ ಭಿಕ್ಷೆ ಬೇಡ್ತಿದ್ದಾಗ ಜನರ ಕೈಗೆ ಸಿಕ್ಕಿ ಬಿದ್ದ ಮುಸ್ಲಿಂ ವ್ಯಕ್ತಿ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದು ಅಳುತ್ತಾ ಕ್ಷಮೆ ಕೇಳುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬಯಲು ಶೌಚಕ್ಕೆ ಹೋದವನ ಮೇಲೆ ದೈತ್ಯ ಹೆಬ್ಬಾವು ಅಟ್ಯಾಕ್, ಎದೆ ಝಲ್ ಎನಿಸುವ ದೃಶ್ಯ ವೈರಲ್
ಜುಲೈ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಆತನಿಗೆ ವೇಷ ಧರಿಸಿ ಭಿಕ್ಷೆ ಬೇಡುವ ಅವಶ್ಯಕತೆ ಇತ್ತೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ