ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಕೃತಜ್ಞತೆ ಸಲ್ಲಿಸಿದ ತಾಯಿ ಶ್ವಾನ; ಹೃದಯಸ್ಪರ್ಶಿ ದೃಶ್ಯ ವೈರಲ್‌

ಮನುಷ್ಯನಿಗೆ ಹೋಲಿಸಿದರೆ ಒಳ್ಳೆಯ ಗುಣ, ಮುಗ್ಧತೆ, ಬುದ್ಧಿವಂತಿಗೆ, ಮಾನವೀಯತೆ, ಸೂಕ್ಷ್ಮತೆ, ಸಹಾಯ ಮನೋಭಾವ ಇವೆಲ್ಲವೂ ತುಸು ಹೆಚ್ಚೇ ಪ್ರಾಣಿಗಳಲ್ಲಿದೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ಸಾಕಷ್ಟು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಹಸಿವಿನಲ್ಲಿದ್ದ ತನ್ನ ಕಂದಮ್ಮಗಳಿಗೆ ಆಹಾರ ನೀಡಿದ ಮಹಿಳೆಗೆ ತಾಯಿ ಶ್ವಾನವೊಂದು ಕೃತಜ್ಞತೆಯನ್ನು ಸಲ್ಲಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸಿದೆ.

ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಕೃತಜ್ಞತೆ ಸಲ್ಲಿಸಿದ ತಾಯಿ ಶ್ವಾನ; ಹೃದಯಸ್ಪರ್ಶಿ ದೃಶ್ಯ ವೈರಲ್‌
ವೈರಲ್ ವಿಡಿಯೋ
Edited By:

Updated on: Mar 03, 2025 | 2:54 PM

ತಾಯಿ ಪ್ರೀತಿ ಎನ್ನುವುದೇ ಹಾಗೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ತನ್ನ ಮಕ್ಕಳಿಗಾಗಿ ಎಂತಹ ತ್ಯಾಗವನ್ನು ಬೇಕಾದರೂ ಮಾಡುತ್ತಾಳೆ. ಮನುಷ್ಯರಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳು ಕೂಡಾ ತನ್ನ ಕಂದಮ್ಮಗಳನ್ನು ಅಷ್ಟೇ ಪ್ರೀತಿಸುತ್ತವೆ, ಮುದ್ದು ಮಾಡುತ್ತವೆ. ತಾಯಿ ಮಮತೆಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಹಸಿವಿನಿಂದ ನರಳುತ್ತಿದ್ದ ತನ್ನ ಕಂದಮ್ಮಗಳಿಗೆ ಆಹಾರ ನೀಡಿ ಹೊಟ್ಟೆ ತುಂಬಿಸಿದ ಮಹಿಳೆಗೆ ತಾಯಿ ಶ್ವಾನವೊಂದು ಮನದಾಳದಿಂದ ಕೃತಜ್ಞತೆಯನ್ನು ಸಲ್ಲಿಸಿದೆ. ತಾಯಿ ಪ್ರೀತಿ ಹಾಗೂ ಶ್ವಾನದ ಕೃತಜ್ಞತಾ ಮನೋಭಾವವನ್ನು ಕಂಡು ನೋಡುಗರು ಭಾವುಕರಾಗಿದ್ದಾರೆ.

ತಮ್ಮ ಮರಿಗಳಿಗೆ ಆಹಾರ ತಂದು ಹಾಕಿದಂತಹ ಮಹಿಳೆಗೆ ತಾಯಿ ಶ್ವಾನವೊಂದು ತನ್ನದೇ ರೀತಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿದೆ. AMAZINGNATURE ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ತನ್ನ ಮರಿಗಳಿಗೆ ಆಹಾರ ನೀಡಿದ ಮಹಿಳೆಗೆ ಕೃತಜ್ಞತೆ ತೋರಿದ ತಾಯಿ ಶ್ವಾನ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಇದನ್ನೂ ಓದಿ
ಬೆಂಗಳೂರಿನ ಅಧಿಕೃತ ಭಾಷೆ ಯಾವುದು? ಈ ಉತ್ತರ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
Viral News: 24 ಸಾಕ್ಸ್​ಗಳು ಸೇರಿ ಅನೇಕ ವಸ್ತುಗಳನ್ನು ನುಂಗಿದ ನಾಯಿ
ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!
ಹಣ ನೀಡಲು ನಿರಾಕರಣೆ; ನಡುರಸ್ತೆಯಲ್ಲಿ ವ್ಯಕ್ತಿಗೆ ಥಳಿಸಿದ ಮಂಗಳಮುಖಿಯರ ತಂಡ

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ನಾಯಿ ಮರಿಗಳಿಗೆ ಆಹಾರ ನೀಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಬಾಲ ಅಲ್ಲಾಡಿಸುತ್ತಾ ನಿಂತಿದ್ದ ತಾಯಿ ಶ್ವಾನ ಮಹಿಳೆಯ ಬಳಿ ಹೋಗಿ ಕಂದಮ್ಮಗಳಿಗೆ ಆಹಾರ ನೀಡಿ ಹೊಟ್ಟೆ ತುಂಬಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದೆ.

ಇದನ್ನೂ ಓದಿ: ನನ್ನನ್ನು ಹುಡುಕುವ ಪ್ರಯತ್ನ ಬೇಡ; ಔಷಧಿ ತರಲು ಹೋಗ್ತೇನೆಂದು ಬಾಯ್‌ಫ್ರೆಂಡ್‌ ಜೊತೆ ಓಡಿ ಹೋದ ಮೂರು ಮಕ್ಕಳ ತಾಯಿ

ಮಾರ್ಚ್‌ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಾಯಿಯ ಪ್ರೀತಿ ಮತ್ತು ಕೃತಜ್ಞತೆ ಪರಿಶುದ್ಧವಾದದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮನುಷ್ಯರಿಗಿಂತ ಪ್ರಾಣಿಗಳೇ ಕರುಣಾಮಯಿ ಹೃದಯವನ್ನು ಹೊಂದಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತಹಾ ಒಳ್ಳೆಯ ಗುಣʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹೃದಯಸ್ಪರ್ಶಿ ದೃಶ್ಯವನ್ನು ಕಂಡು ಭಾವುಕರಾಗಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ