Video: ದುಬೈನಿಂದ ಭಾರತಕ್ಕೆ ಮರಳಿದ ಕೇರಳದ ಮಹಿಳೆ; ಕಾರಣ ಇದೇ ನೋಡಿ

ವಿದೇಶದಲ್ಲಿ ಕೆಲಸ ಸಿಕ್ಕರೆ ಸಾಕು, ಲೈಫ್ ಸೆಟ್ಲ್ ಆದಂತೆ ಎನ್ನುವವರ ನಡುವೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ಮರಳುವ ನಿರ್ಧಾರ ಮಾಡುತ್ತಿದ್ದಾರೆ. ಕೇರಳದ ಮಹಿಳೆಯೊಬ್ಬರು ದುಬೈನಿಂದ ಭಾರತಕ್ಕೆ ಮರಳುವ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದುಬೈನಿಂದ ಭಾರತಕ್ಕೆ ಮರಳಿದ ಕೇರಳದ ಮಹಿಳೆ; ಕಾರಣ ಇದೇ ನೋಡಿ
ವೈರಲ್ ವಿಡಿಯೋ
Image Credit source: Instagram

Updated on: Feb 12, 2026 | 11:30 AM

ಉತ್ತಮ ಗುಣಮಟ್ಟದ ಜೀವನ, ಅಧಿಕ ಸಂಬಳ ಸಿಗುವ ಕೆಲಸವೇ ಬೇಕೆಂದು ಕೆಲವರು ತಮ್ಮ ತಾಯ್ನಾಡು ಬಿಟ್ಟು ಅಮೆರಿಕ, ಕೆನಾಡ, ಜಪಾನ್‌ ಇತ್ಯಾದಿ ಅಭಿವೃದ್ಧಿಶೀಲ ದೇಶಗಳಿಗೆ ಹೋಗ್ತಾರೆ. ಕೆಲವರು ತಮ್ಮ ತಾಯ್ನಾಡಿಗೆ ಬರುವುದೇ ಅಪರೂಪ. ಆದರೆ ಕೇರಳದ (Kerala) ಮಹಿಳೆಯೊಬ್ಬರು ದುಬೈನಿಂದ ಭಾರತಕ್ಕೆ ಮರಳಿದ್ದು, ತಮ್ಮ ನಿರ್ಧಾರದ ಹಿಂದಿನ ಹತ್ತು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದಲ್ಲದೇ, ಹೆಚ್ಚುತ್ತಿರುವ ವೆಚ್ಚಗಳು, ಶಾಲಾ ಶಿಕ್ಷಣ ಮತ್ತು ಸಾಲಮುಕ್ತ ಜೀವನವು ಭಾರತಕ್ಕೆ ಮರಳುವ ನಿರ್ಧಾರವನ್ನು ಹೇಗೆ ಪ್ರೇರೇಪಿಸಿತು ಎನ್ನುವುದನ್ನು ಅನಿವಾಸಿ ಭಾರತೀಯ ಮಹಿಳೆ (NRI woman) ತಿಳಿಸಿದ್ದಾರೆ.

ಇತ್ತೀಚೆಗೆ ದುಬೈನಿಂದ ಕೇರಳಕ್ಕೆ ತಮ್ಮ ಕುಟುಂಬದೊಂದಿಗೆ ಹಿಂತಿರುಗಿದ ಲೀನಾ ಸುಬಿನ್ (@unfilteredvoiceswithinme) ಹೆಸರಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ. ಇದು ಹಠಾತ್ ನಿರ್ಧಾರವಾಗಿರಲಿಲ್ಲ. ಇದು ಸಮಯ ಹಾಗೂ ಮಾನಸಿಕ ಶಾಂತಿಯ ಬಗ್ಗೆ ಯೋಚಿಸಿ ತೆಗೆದುಕೊಂಡ ನಿರ್ಧಾರ. ಯುಎಇಯಲ್ಲಿ ಮನೆ ಬಾಡಿಗೆ ನವೀಕರಣದೊಂದಿಗೆ ವೀಸಾ ನವೀಕರಣವು ಹೊಂದಿಕೆಯಾದಾಗ ಮಹತ್ವದ ತಿರುವು ಪಡೆದುಕೊಂಡಿತು. ಈ ವಿರಾಮವು ನಾವು ಎಲ್ಲವನ್ನೂ ಶಾಂತವಾಗಿ, ಪ್ರಾಯೋಗಿಕವಾಗಿ ಮತ್ತು ಪ್ರಾಮಾಣಿಕವಾಗಿ ನೋಡುವಂತೆ ಮಾಡಿತು ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಶಿಕ್ಷಣವು ಮತ್ತೊಂದು ಪ್ರಮುಖ ಅಂಶವಾಗಿತ್ತು. ಕೇರಳದಲ್ಲಿ ತಮ್ಮ ಮನೆಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಇಂಟರ್ನ್ಯಾಷನಲ್ ಶಾಲೆಯನ್ನು ಕಂಡುಕೊಂಡೆ. 10 ನಿಮಿಷಗಳ ಸುಲಭ ಪ್ರಯಾಣ ಹಾಗೂ ತರಗತಿಗಳು ಬೆಳಿಗ್ಗೆ 8:30 ಕ್ಕೆ ಪ್ರಾರಂಭವಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನನ್ನ ಮಗು ಈ ಹಿಂದೆ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟು ದುಬೈನಲ್ಲಿ ಪ್ರತಿದಿನ ಸುಮಾರು 90 ನಿಮಿಷ ಪ್ರಯಾಣಿಸಬೇಕಾಗಿತ್ತು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.

ನನ್ನ ಕುಟುಂಬವು 2021 ರಲ್ಲಿ ಕೇರಳದಲ್ಲಿ ತಮ್ಮ ವಿಲ್ಲಾ ನಿರ್ಮಾಣವನ್ನು ಪೂರ್ಣಗೊಳಿಸಿತು. ಆದರೆ ಸ್ವತಂತ್ರ ಮನೆಯಲ್ಲಿ ವಾಸಿಸುವುದು ವಿದೇಶದಲ್ಲಿ ಕಾಣೆಯಾಗಿದೆ ಎಂದು ನಾನು ಅರಿತು ಕೊಂಡೆ. ಅದಲ್ಲದೇ, ನಾನು ಇಂದು ಸಾಲ ಕಟ್ಟಬೇಕಾಗಿಲ್ಲ, ಇಎಂಐ ಇಲ್ಲ. ಈ ಸಮಯದಲ್ಲಿ ಮಾನಸಿಕ ಸ್ವಾತಂತ್ರ್ಯವು ಹೆಚ್ಚು ಮುಖ್ಯವಾಗಿದೆ ಎಂದು ಅರ್ಥವಾಯ್ತು. ವಯಸ್ಸಾದ ಹೆತ್ತವರೊಂದಿಗೆ ಇರುವುದು ಮತ್ತೊಂದು ಪ್ರಮುಖ ಅಂಶವಾಗಿತ್ತು. ನನ್ನ ಹೆತ್ತವರು 70 ಮತ್ತು 80 ವಯಸ್ಸಿನವರಾಗಿರುವುದರಿಂದ ಅವರ, ಸಾಮೀಪ್ಯವು “ಜವಾಬ್ದಾರಿಗಿಂತ ಹೆಚ್ಚಾಗಿ ಸವಲತ್ತಿನಂತೆ ಭಾಸವಾಗುತ್ತದೆ ಎಂದಿದ್ದಾರೆ.

8 ವರ್ಷಗಳ ಹಿಂದೆ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಿದೆ. ಇದು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿತು. ನಾನು ಇಲ್ಲಿ ದೇಶಗಳನ್ನು ಹೋಲಿಸುತ್ತಿಲ್ಲ. ಬದಲಾಗಿ ಸುಸ್ಥಿರತೆಯ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲವೊಮ್ಮೆ, ಜೀವನವು ಎಲ್ಲಿ ಉತ್ತಮವಾಗಿ ಕಾಣುತ್ತದೆ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಆದರೆ ಅದು ನಿಜವಾಗಿಯೂ ಎಲ್ಲಿ ಸುಸ್ಥಿರವಾಗಿರುತ್ತದೆ ಎಂಬುದು ಮುಖ್ಯ ಎಂದು ವಿವರಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: ಫ್ರಾನ್ಸ್‌ಗಿಂತ ಭಾರತ ಉತ್ತಮ; ವಿದೇಶಿ ಮಹಿಳೆ ನೀಡಿದ ಕಾರಣ ನೋಡಿ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯ್ನಾಡಿನಲ್ಲಿ ಜೀವನ ನಡೆಸುವ ಖುಷಿ ಬೇರೆಲ್ಲೂ ಸಿಗಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪೋಷಕರು ನನ್ನ ಮೊದಲ ಆದ್ಯತೆ ಎನ್ನುವ ಮಾತು ಮನಸ್ಸಿಗೆ ಹತ್ತಿರವಾಯ್ತು ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ