Video: ಹಾವು ಬೆಕ್ಕಿನ ರೋಚಕ ಕಾದಾಟ, ಈ ಬಿಗ್ ಫೈಟ್‌ನಲ್ಲಿ ಗೆದ್ದವರು ಯಾರು ನೋಡಿ
ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ದೃಶ್ಯ ವೈರಲ್ ಆಗಿದ್ದು, ಬೆಕ್ಕು ಹಾವೊಂದು ಮುಖಾಮುಖಿಯಾಗಿದೆ. ತನ್ನ ಮೇಲೆ ಅಟ್ಯಾಕ್ ಮಾಡಲು ಬಂದ ಬೆಕ್ಕನ್ನು ಹಾವೊಂದು ಹಿಮ್ಮೆಟ್ಟಿಸಿದೆ. ಈ ದೃಶ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಾವು ಮುಂಗುಸಿಯ ಕಾದಾಟದ ದೃಶ್ಯಗಳನ್ನು ನೋಡಿರುತ್ತೀರಿ. ಬೆಕ್ಕೊಂದು (cats) ಹಾವಿನೊಂದಿಗೆ ಕಾದಾಟಕ್ಕೆ ಇಳಿದಿದೆ. ಮನೆ ಹತ್ತಿರ ಬಂದ ಹಾವಿನ ಜತೆಗೆ ಜಗಳಕ್ಕೆ ಇಳಿದಿದೆ. ಕೊನೆಗೆ ಈ ಬಿಗ್ ಫೈಟ್ ತಿರುವು ಪಡೆದುಕೊಂಡಿದೆ. ಈ ಕಾದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಾವು ಕಂಡೊಡನೆ ಅಟ್ಯಾಕ್ ಮಾಡಿದ ಬೆಕ್ಕು
ಅಂಥೋನಿ ಹ್ಯಾರ್ರಿಸ್ (Anthony Harris) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಬೆಕ್ಕು ಹಾವು ಕಾಳಗದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮನೆಯ ಅಂಗಳದಲ್ಲಿ ಹಾವೊಂದು ತೆವಳುತ್ತಾ ಬಂದಿದೆ. ಇದನ್ನು ನೋಡಿ ಬೆಕ್ಕು ಹಾವನ್ನು ಕೆಣಕಿದೆ. ಆದರೆ ಈ ಹಾವು ಬೆಕ್ಕಿಗೆ ಹೆದರಿ ಜೀವ ರಕ್ಷಣೆಗಾಗಿ ಕಾದಾಟಕ್ಕೆ ಇಳಿದಿದೆ. ಕೊನೆಗೆ ಈ ಬಿಗ್ ಫೈಟ್ ತಾರಕಕ್ಕೇರಿದ್ದು ಸುಸ್ತಾದ ಹಾವು ಮಾತ್ರ ಸುಮ್ಮನೆ ಹೊರಟಿದೆ. ಆದರೆ ಬೆಕ್ಕು ಮತ್ತೆ ತನ್ನ ಮುಂಭಾಗದ ಕಾಲಿನಿಂದ ಹಾವನ್ನು ಎಳೆಯುತ್ತಾ ಕೆಣಕಿದೆ. ಕೊನೆಗೆ ಹಾವು ಸುಮ್ಮನಾಗಿದ್ದು ಬೆಕ್ಕು ಅದರ ಪಕ್ಕದಲ್ಲೇ ಸುಮ್ಮನೆ ಕುಳಿತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಅಟ್ಯಾಕ್ ಮಾಡಲು ಬಂದ ಬೆಕ್ಕನ್ನೇ ಹೆದರಿಸಿ ಓಡಿಸಿದ ವಿಷಕಾರಿ ಹಾವು, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಈ ಹಾವಿಗಿಂತ ಬೆಕ್ಕು ಬಹಳ ವೇಗವಾಗಿ ಪ್ರತಿಕ್ರಿಯಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕೊನೆಗೆ ಬೆಕ್ಕು ಗೆದ್ದು ಬಿಡ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದರಲ್ಲಿ ಗೆದ್ದವರು ಯಾರು ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




