AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೆಲಸದ ನಿಮಿತ್ತ ಹೊರಟು ನಿಂತ ಮೊಮ್ಮಗನನ್ನು ಮುಖ ಸವರಿ ಕಳುಹಿಸಿಕೊಟ್ಟ ಹಿರಿಜೀವ

ಅಜ್ಜ ಅಜ್ಜಿಯಂದಿರಿಗೆ ಮೊಮ್ಮಕ್ಕಳೇ ಪ್ರಪಂಚ. ಮನೆಗೆ ಬಂದ ಮೊಮ್ಮಕ್ಕಳು ಮತ್ತೆ ಕೆಲಸದ ನಿಮಿತ್ತ ಹೊರಟು ನಿಂತರೆ ಹಿರಿ ಜೀವಗಳ ಮುಖ ಸಣ್ಣಗೆಯಾಗುತ್ತದೆ. ಇದೀಗ ಮೊಮ್ಮಗನನ್ನು ಬೀಳ್ಕೊಡುವಾಗ ಅಜ್ಜನು ಕಣ್ಣೀರಿಟ್ಟಿದ್ದಾರೆ. ಮೊಮ್ಮಗನು ಮರಳಿ ಮನೆಗೆ ಬರುವ ದಿನಗಳನ್ನು ಲೆಕ್ಕ ಹಾಕುವ ಈ ಹಿರಿಜೀವದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ಒದ್ದೆಯಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕೆಲಸದ ನಿಮಿತ್ತ ಹೊರಟು ನಿಂತ ಮೊಮ್ಮಗನನ್ನು ಮುಖ ಸವರಿ ಕಳುಹಿಸಿಕೊಟ್ಟ ಹಿರಿಜೀವ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Oct 29, 2026 | 5:45 PM

Share

ಈಗಿನ ಕಾಲದ ಮಕ್ಕಳಿಗೆ ಅಜ್ಜ ಅಜ್ಜಿಯಂದಿರ (grandparents) ಪ್ರೀತಿ ಹೇಗಿರುತ್ತೆ ಎಂಬುದೇ ತಿಳಿದಿಲ್ಲ. ಆದರೆ ಅಜ್ಜನು ಮೊಮ್ಮಗನ ಮೇಲೆ ತೋರುವ ಪ್ರೀತಿ ಕಾಳಜಿಗೆ ಈ ದೃಶ್ಯವೇ ಸಾಕ್ಷಿ. ಕೆಲಸಕ್ಕೆಂದು ಹೊರಟು ನಿಂತ ಮೊಮ್ಮಗನನ್ನು ಭಾರವಾದ ಮನಸ್ಸಿನಿಂದ ಕಳುಹಿಸಿಕೊಡುತ್ತಾ ಕಣ್ಣೀರಿಟ್ಟಿದ್ದಾರೆ. ಆರೋಗ್ಯದ ಮೇಲೇ ಕಾಳಜಿ ವಹಿಸು, ಫೋನ್ ಮಾಡು ಎಂಬ ಕಾಳಜಿಯುತ ಸಂಭಾಷಣೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೊರಟು ನಿಂತ ಮೊಮ್ಮಗನನ್ನು ಕಂಡು ತಾತ ಭಾವುಕ

ಧನರಾಜ್ ಶರ್ಮಾ (Dhanraj Sharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಜ್ಜ ಹಾಗೂ ಮೊಮ್ಮಗನ ನಡುವಿನ ಸಂಭಾಷಣೆ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೆಲಸದ ನಿಮಿತ್ತ ಹೊರಟು ನಿಂತ ಮೊಮ್ಮಗನ ಜತೆಗೆ ಅಜ್ಜ ಮಾತಿಗಿಳಿದ್ದಾರೆ. ಶುಭಂ ಎಂಬ ಯುವಕ ತನ್ನ ಅಜ್ಜನಿಗೆ ವಿದಾಯ ಹೇಳುತ್ತಾ, ತಾನು ಭಾನುವಾರ ಬರುವುದಾಗಿ ಹೇಳುತ್ತಾನೆ.

ವೈರಲ್ ವಿಡಿಯೋ ಇಲ್ಲಿದೆ

ದಿನಗಳನ್ನು ಲೆಕ್ಕ ಹಾಕುತ್ತಾ ಹಿರಿಜೀವ ಭಾವುಕ

ಮೊಮ್ಮಗನ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ತಾತ ವಾರದ ದಿನಗಳನ್ನು ಎಣಿಸಲು ಪ್ರಾರಂಭಿಸುತ್ತಾರೆ. ಭಾನುವಾರದ ನಂತರ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತೆ ಭಾನುವಾರ ಬರುತ್ತದೆ ಎಂದು ಹೇಳಿರುವುದನ್ನು ಕಾಣಬಹುದು. ನೀನು ಬರಲು ನಾನು ಆರು ದಿನ ಕಾಯಬೇಕೆಂದು ಮುಖ ಸಣ್ಣಗೆ ಮಾಡಿದ್ದಾರೆ.

ಮೊಮ್ಮಗನ ಮೇಲಿನ ಪ್ರೀತಿ ಕಾಳಜಿಗೆ ಸಾಕ್ಷಿಯಾಯ್ತು ದೃಶ್ಯ

ನೀನಿಲ್ಲದೆ ನನ್ನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಎನ್ನುತ್ತಾ ಮುಖ ಸವರುತ್ತಾ ಫೋನ್ ಮಾಡುತ್ತಿರು ಎನ್ನುವುದನ್ನು ಇಲ್ಲಿ ಕಾಣಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸು, ಜ್ವರ ಬಂದಾಗ ತೆಗೆದುಕೊಳ್ಳಲು ಔಷಧಿಗಳನ್ನು ಜತೆಗೆ ಇಟ್ಟುಕೊಳ್ಳು ಎಂದು ಪ್ರೀತಿ ಕಾಳಜಿಯಿಂದ ಹೇಳುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ಏರ್‌ಹೋಸ್ಟೆಸ್ ಜತೆಗೆ ವೃದ್ಧ ವ್ಯಕ್ತಿಯ ಮುಗ್ಧ ಸಂಭಾಷಣೆ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಜ್ಜನ ಪ್ರೀತಿಗೆ ನೆಟ್ಟಿಗರು ಕಳೆದೇ ಹೋಗಿದ್ದಾರೆ. ಒಬ್ಬ ಬಳಕೆದಾರ, ನೀವು ಅದೃಷ್ಟವಂತರು. ನಿಮ್ಗೆ ಅಜ್ಜನ ಪ್ರೀತಿ ಸಿಕ್ಕಿದೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಜ್ಜ ಅಜ್ಜಿಯ ಪ್ರೀತಿ ಎಲ್ಲರಿಗೂ ಸಿಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ಬಾಲ್ಯದ ದಿನಗಳು ಕಣ್ಣ ಮುಂದೆ ಬಂತು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More