Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಮರಳಿನ ರಾಶಿಯಲ್ಲಿ ಅಡಗಿ ಕುಳಿತಿರುವ ಹಾವನ್ನು ಕಂಡು ಹಿಡಿಯುವಿರಾ

ಒಗಟಿನ ಆಟಗಳೇ ಹಾಗೆ, ಮೆದುಳಿಗೆ ಕೆಲಸ ನೀಡುವುದರೊಂದಿಗೆ ಟೈಮ್ ಪಾಸ್ ಆಗುತ್ತದೆ. ಹೀಗಾಗಿ ಸುಮ್ಮನೆ ಕುಳಿತಿರುವಾಗ ಹೆಚ್ಚಿನವರು ಇಲ್ಯೂಷನ್ ಸೇರಿದಂತೆ ಒಗಟಿನ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ಇಂತಹ ಮೋಜಿನ ಆಟಗಳನ್ನು ಆಡುವುದರಲ್ಲಿರುವ ಮಜಾನೇ ಬೇರೆ. ಇದೀಗ ಇಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಮರಳಿನ ರಾಶಿಯಲ್ಲಿ ಅವಿತು ಕುಳಿತಿರುವ ಹಾವನ್ನು ಐದು ಸೆಕೆಂಡುಗಳಲ್ಲಿ ಕಂಡು ಹಿಡಿಯಲು ಸಾಧ್ಯವೇ ಎಂದು ನೋಡಿ.

Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಮರಳಿನ ರಾಶಿಯಲ್ಲಿ ಅಡಗಿ ಕುಳಿತಿರುವ ಹಾವನ್ನು ಕಂಡು ಹಿಡಿಯುವಿರಾ
Snake In Sand
Image Credit source: Pixel
Edited By:

Updated on: Apr 21, 2026 | 12:04 PM

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಈ ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ನೀವು ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಇದೀಗ ನಿಮಗೊಂದು ಚಾಲೆಂಜ್ ಇದೆ. ಈ ಮರಳಿನಲ್ಲಿ ಅಡಗಿ ಕುಳಿತಿರುವ ಹಾವನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ನಿಮ್ಮ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಮೊದಲು ಇಲ್ಯೂಷನ್ ಚಿತ್ರವನ್ನು ನೋಡುವಾಗ ಅಂತಹದ್ದೇನು ಹೊಸದು ಕಾಣಿಸಲ್ಲ. ಆದರೆ ಈ ಚಿತ್ರದಲ್ಲಿರುವ ಗುಪ್ತ ವಸ್ತುಗಳನ್ನು ಕಂಡು ಹಿಡಿಯುವುದೇ ದೊಡ್ಡ ಸವಾಲು. ಈ ಮರಳಿನಲ್ಲಿ ಸರೀಸೃಪವೊಂದು ಅಡಗಿ ಕುಳಿತಿದ್ದು, ಐದು ಸೆಕೆಂಡುಗಳೊಳಗೆ ಈ ಹಾವನ್ನು ಪತ್ತೆ ಹಚ್ಚುವ ಸವಾಲು ಇಲ್ಲಿದೆ. ಕಣ್ಣು ಬಿಟ್ಟು ಈ ಚಿತ್ರ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ: ನೀವು ಗಣಿತದಲ್ಲಿ ಪಂಟರಾಗಿದ್ರೆ ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ

ಹಾವನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಈ ಆಪ್ಟಿಕಲ್‌ ಇಲ್ಯೂಷನ್ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮರಳು ಕಾಣಿಸುತ್ತದೆ. ಆದರೆ ಈ ಮರಳಿನಲ್ಲಿ ಹಾವೊಂದು ಕಣ್ಣಿಗೆ ಬೀಳದಂತೆ ಅವಿತು ಕುಳಿತಿದೆ. ನೀವು ಈ ಹಾವನ್ನು ಕಂಡು ಹಿಡಿಯಲು ಕಷ್ಟ ಪಡುತ್ತಿದ್ದರೆ ನಾವು ಹೇಳುವ ಸಲಹೆ ಅನುಸರಿಸಿ. ಚಿತ್ರಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಹಾವನ್ನು ಪತ್ತೆ ಹಚ್ಚಲು ನೋಡಿ.

 

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:03 pm, Mon, 16 March 26

Follow Us