Viral: ಆರ್ಡರ್ ಮಾಡಿದ್ದು ಸ್ಮಾರ್ಟ್‌ ಫೋನ್, ಆದ್ರೆ ಮನೆಗೆ ಬಂದ ಪಾರ್ಸೆಲ್ ನೋಡಿ ಯುವಕ ಫುಲ್ ಶಾಕ್

ಪ್ರತಿಯೊಂದನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವವರೇ ಹೆಚ್ಚು. ಇದೀಗ ಇಲ್ಲೊಬ್ಬ ಯುವಕನು ಆನ್ಲೈನ್ ನಲ್ಲಿ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದಾನೆ. ಆದರೆ ಈ ಆರ್ಡರ್ ಮಾಡಿದ್ದ 35,000 ರೂಪಾಯಿ ಬೆಲೆಯ ವಿವೋ ಮೊಬೈಲ್ ಬದಲಿಗೆ ಸೋಪ್‌ ಬಾಕ್ಸ್ ಕೈ ಸೇರಿದ್ದು, ಯುವಕನು ಬಾಕ್ಸ್ ತೆರೆಯುತ್ತಿದ್ದಂತೆ ಶಾಕ್ ಆಗಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಆರ್ಡರ್ ಮಾಡಿದ್ದು ಸ್ಮಾರ್ಟ್‌ ಫೋನ್, ಆದ್ರೆ ಮನೆಗೆ ಬಂದ ಪಾರ್ಸೆಲ್ ನೋಡಿ ಯುವಕ ಫುಲ್ ಶಾಕ್
ಎಕ್ಸ್‌ ಪೋಸ್ಟ್‌
Image Credit source: Twitter

Updated on: Jun 25, 2026 | 2:56 PM

ಮುಖ್ಯಾಂಶಗಳು

  • ದುಬಾರಿ ಬೆಲೆಯ ಸ್ಮಾರ್ಟ್‌ ಪೋನ್‌ ಆರ್ಡರ್‌ ಮಾಡಿದ್ದ ಯುವಕ
  • ಸ್ಮಾರ್ಟ್‌ ಪೋನ್‌ ಬದಲು ಯುವಕನ ಕೈ ಸೇರಿದ್ದು ಸೋಪ್‌ ಬಾರ್‌
  • ಇ-ಕಾಮರ್ಸ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ಸಲ್ಲಿಕೆ

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (Online shopping) ಕಾಮನ್ ಆಗಿದೆ. ಹೀಗಾಗಿ ಕುಳಿತಲ್ಲಿಂದಲೇ ಬೇಕಾದ ವಸ್ತುಗಳನ್ನು ಆನ್ಲೈನ್ ನಲ್ಲೇ ಆರ್ಡರ್ ಮಾಡುತ್ತಾರೆ. ಆನ್ಲೈನ್ ಶಾಪಿಂಗ್ ಮಾಡಲು ಹೋಗಿ ಲಕ್ಷ ರೂಪಾಯಿ ಕಳೆದು ಕೊಂಡವರು ಇದ್ದಾರೆ. ಇದೀಗ ಯುವಕನೊಬ್ಬ 35,000 ಬೆಲೆ ಬಾಳುವ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದು ಎಡವಟ್ಟು ಆಗಿದೆ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದು ಸ್ಮಾರ್ಟ್ ಫೋನ್ ಆಗಿದ್ರೂ, ಮನೆಗೆ ಬಂದಿದ್ದು ಸೋಪ್‌ ಬಾಕ್ಸ್. ಈ ಪೋಸ್ಟ್‌ ಸದ್ಯ ವೈರಲ್ ಆಗಿದ್ದು, ಇನ್ನೆಂದಿಗೂ ಆನ್‌ ಲೈನ್‌ ಶಾಪಿಂಗ್‌ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಐಶ್ವರ್ಯ (Aishwariya) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಆನ್‌ಲೈನ್‌ ವಂಚನೆಗೆ ಒಳಗಾದ ಘಟನೆ ಬಗ್ಗೆ ಉಲ್ಲೇಖಿಸಲಾಗಿದೆ. ಯುವಕನೊಬ್ಬ ಆನ್‌ಲೈನ್‌ನಲ್ಲಿ 35,000 ರೂಪಾಯಿ ಮೌಲ್ಯದ ವಿವೋ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದಾನೆ. ತಮ್ಮ ಹೊಸ ಸ್ಮಾರ್ಟ್‌ ಫೋನ್‌ಗಾಗಿ ಕಾಯುತ್ತಿದ್ದ. ಆದರ, ಮನೆ ಬಾಗಿಲಿಗೆ ಬಂದ ಆರ್ಡರ್‌ನ್ನು ಯುವಕ ಓಪನ್ ಮಾಡಿದ್ದು, ಸೋಪ್ ಬಾರ್ ಕಂಡು ಶಾಕ್ ಆಗಿದ್ದಾನೆ. ತಕ್ಷಣವೇ ಈ ಕುರಿತು ಇ-ಕಾಮರ್ಸ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಈ ಘಟನೆಯ ಬಗ್ಗೆ ಹೇಳಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ

ಈ ಪೋಸ್ಟ್ ನಾಲ್ಕು ಸಾವಿರಕ್ಕೂ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆನ್ಲೈನ್ ಶಾಪಿಂಗ್ ಸೇಫ್ ಅಲ್ಲ ಎಂದಿದ್ದಾರೆ. ಇನ್ನೊಬ್ಬರು, ಪಾರ್ಸೆಲ್ ಬಂದ ಕೂಡ್ಲೇ ಡೆಲಿವರಿ ಬಾಯ್ ಎದುರು ಓಪನ್ ಮಾಡಿದ್ರೆ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆನ್ಲೈನ್ ಶಾಪಿಂಗ್ ನಲ್ಲಿ ವಂಚನೆಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Thu, 25 June 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us