ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​

Rahul Dravid Viral Video: ರಾಹುಲ್​ ದ್ರಾವಿಡ್​ ಇಷ್ಟೆಲ್ಲಾ ಸಿಟ್ಟಾಗಲು ಕಾರಣವೇನು? ಏಕೆ ಅವರು ಈ ರೀತಿ ಮಾಡಿದರು ಎಂದು ನೀವು ಕೇಳಬಹುದು. ಅದಕ್ಕೂ ಉತ್ತರವಿದೆ.

ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​
ವೈರಲ್​ ಆದ ವಿಡಿಯೋ

Updated on: Apr 09, 2021 | 6:10 PM

ರಾಹುಲ್​ ದ್ರಾವಿಡ್​ ಎಂದಾಕ್ಷಣ ನೆನಪಿಗೆ ಬರೋದು ಅವರ ಶಾಂತ ಸ್ವಭಾವದ ಮುಖ ಹಾಗೂ ಸೌಮ್ಯ ಮಾತುಗಳು. ಮೈದಾನದಲ್ಲಾಗಲೀ, ಮೈದಾನದ ಹೊರಗಾಗಲೀ ರಾಹುಲ್​ ದ್ರಾವಿಡ್​ ಸಿಟ್ಟಾಗಿದ್ದು ತುಂಬಾನೇ ಕಡಿಮೆ. ಆದರೆ, ದ್ರಾವಿಡ್​ ಈಗ ಬೆಂಗಳೂರು ಟ್ರಾಫಿಕ್​ ಬಗ್ಗೆ ತುಂಬಾನೇ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಟ್ರಾಫಿಕ್​ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಅರೆ, ರಾಹುಲ್​ ದ್ರಾವಿಡ್​ ಇಷ್ಟೆಲ್ಲಾ ಸಿಟ್ಟಾಗಲು ಕಾರಣವೇನು? ಏಕೆ ಅವರು ಈ ರೀತಿ ಮಾಡಿದರು ಎಂದು ನೀವು ಕೇಳಬಹುದು. ಅದಕ್ಕೂ ಉತ್ತರವಿದೆ. ಇದು ಜಾಹೀರಾತಿಗಾಗಿ ಮಾಡಿದ ವಿಡಿಯೋ. ಜಾಹೀರಾತಿನ ಕ್ರಿಯೇಟಿವಿಟಿ ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ.

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್​ಗಳು ಪ್ರಸಾರವಾದರೆ ಚಾನೆಲ್​ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ಹೊಸ ವಿಧವಾದ ಆ್ಯಡ್​ನೊಂದಿಗೆ ಕ್ರೆಡ್​ ಬಂದಿದೆ.

ಜಾಹೀರಾತಿನ ವಿಡಿಯೋವನ್ನು ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈಗ ಹಂಚಿಕೊಂಡಿದ್ದಾರೆ. ಜಾಹೀರಾತಿನಲ್ಲಿ ದ್ರಾವಿಡ್​ ಟ್ರಾಫಿಕ್​ನಲ್ಲಿ ಸಿಲುಕಿರುತ್ತಾರೆ. ಅಷ್ಟೇ ಅಲ್ಲ, ಒತ್ತಡಕ್ಕೆ ಒಳಗಾಗಿ ಅಕ್ಕ ಪಕ್ಕದಲ್ಲಿ ನಿಂತಿರುವ ಕಾರು ಚಾಲಕರ ಮೇಲೆ ಸಿಟ್ಟಿಗೆ ಒಳಗಾಗಿದ್ದಾರೆ. ಎದುರು ನಿಂತಿರುವ ಕಾರು ಗಾಜನ್ನು ಬ್ಯಾಟ್​​ನಿಂದ ಒಡೆದು ಹಾಕಿದ್ದಾರೆ.
ರಾಹುಲ್​ ಅವರ ಈ ರೀತಿಯ ಮುಖವನ್ನು ನಾನು ಎಂದಿಗೂ ನೋಡಿಲ್ಲ ಎಂದು ವಿರಾಟ್​ ಕೊಹ್ಲಿ ಕ್ಯಾಪ್ಶನ್​ ನೀಡಿದ್ದಾರೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: Virat Kohli IPL 2021 RCB Team Player: ಆರ್​ಸಿಬಿ ರನ್ ಮಷಿನ್ ವಿರಾಟ್​ ಕೊಹ್ಲಿ ಈ ಬಾರಿಯಾದರೂ ತಂಡವನ್ನು ಚಾಂಪಿಯನ್ ಮಾಡ್ತಾರಾ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us