Shocking News: ಹೆಂಡತಿಯನ್ನು ಕೊಂದು, ಆಕೆಯ ರುಂಡ ಹಿಡಿದು ರಸ್ತೆ ತುಂಬ ಓಡಾಡಿದ ಗಂಡ!

Viral Video: 17 ವರ್ಷದ ತನ್ನ ಹೆಂಡತಿ ಬೇರೆಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಶಿರಚ್ಛೇದ ಮಾಡಿದ ಅವಿರಾಲ್ ಎಂಬಾತ ಆಕೆಯ ತಲೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಡುತ್ತಿರುವ ವಿಡಿಯೋ ಇರಾನಿಯನ್ನರನ್ನು ಬೆಚ್ಚಿಬೀಳಿಸಿದೆ.

Shocking News: ಹೆಂಡತಿಯನ್ನು ಕೊಂದು, ಆಕೆಯ ರುಂಡ ಹಿಡಿದು ರಸ್ತೆ ತುಂಬ ಓಡಾಡಿದ ಗಂಡ!
ಹೆಂಡತಿಯ ತಲೆ ಕತ್ತರಿಸಿ ತಂದ ಗಂಡ
Edited By:

Updated on: Feb 09, 2022 | 3:18 PM

ಕೆಲವೊಂದು ಘಟನೆಗಳು ನಾವು ಊಹೆ ಮಾಡಿಕೊಳ್ಳಲೂ ಸಾಧ್ಯವಾಗದಷ್ಟು ಕ್ರೂರವಾಗಿರುತ್ತವೆ. ಕೆಲವೊಂದು ಅಪರಾಧಗಳು ವಿಕೃತಿಯಾಗಿ ಬದಲಾಗುತ್ತದೆ. ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್​ನಲ್ಲಿ (Iran) ವಿಕೃತಿಯ ಘಟನೆಯೊಂದು ನಡೆದಿದ್ದು, ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ (Extra Marital Affair) ಹೊಂದಿದ್ದಾಳೆ ಎಂಬ ಅನುಮಾನದಿಂದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಅತ್ಯಂತ ಘೋರವಾದ ರೀತಿಯಲ್ಲಿ ಕೊಂದಿದ್ದಾನೆ. 17 ವರ್ಷದ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಆಕೆಯ ತಲೆಯನ್ನು ಕತ್ತರಿಸಿ, ಆ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಬೀದಿಯಲ್ಲಿ ತಿರುಗಾಡಿ ವಿಕೃತಿ ಮೆರೆದಿದ್ದಾನೆ. ಇರಾನ್​ನ ನೈರುತ್ಯ ಭಾಗದ ಅಹ್ವಾಜ್ ಎಂಬ ನಗರದಲ್ಲಿ ಈ ಆಘಾತಕಾರಿ ಘಟನೆ (Shocking Incident) ನಡೆದಿದೆ.

ಮೋನಾ ಹೈದರಿ ಎಂಬ 17 ವರ್ಷ ಯುವತಿಯೇ ಕೊಲೆಯಾದಾಕೆ. ಆಕೆಯ ಗಂಡ ಮತ್ತು ಮಾವ ಸೇರಿ ಮೋನಾ ಹೈದರಿಯ ಒಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ವರದಿ ಮಾಡಿದೆ.

17 ವರ್ಷದ ತನ್ನ ಹೆಂಡತಿ ಬೇರೆಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಶಿರಚ್ಛೇದ ಮಾಡಿದ ಅವಿರಾಲ್ ಎಂಬಾತ ಆಕೆಯ ತಲೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಡುತ್ತಿರುವ ವಿಡಿಯೋ ಇರಾನಿಯನ್ನರನ್ನು ಬೆಚ್ಚಿಬೀಳಿಸಿದೆ. ಇರಾನಿನ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳು ಈ ಭೀಕರ ಹತ್ಯೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿವೆ. ಹೆಂಡತಿಯ ತಲೆ ಕತ್ತರಿಸಿ, ಅದನ್ನು ಕೈಯಲ್ಲಿ ಹಿಡಿದು ರಸ್ತೆ ತುಂಬ ಹೆಮ್ಮೆಯಿಂದ ಓಡಾಡುತ್ತಿರುವುದನ್ನು ನೋಡಿ ಇರಾನ್​ ಜನರು ಆಘಾತಕ್ಕೀಡಾಗಿದ್ದಾರೆ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಇರಾನಿನ ಮಾಧ್ಯಮಗಳ ಪ್ರಕಾರ, ಮೋನಾ ಹೈದರಿ ತನ್ನ 12ನೇ ವಯಸ್ಸಿನಲ್ಲೇ ಮದುವೆಯಾಗಿದ್ದಳು. ಆಕೆ ಸಾಯುವಾಗ ಕೇವಲ 17 ವರ್ಷವಾಗಿತ್ತು. ಅಷ್ಟರಲ್ಲೇ ಆಕೆ 3 ವರ್ಷದ ಮಗನನ್ನು ಪಡೆದಿದ್ದಳು.

ಇದೇ ರೀತಿ 2020ರ ಮೇ ತಿಂಗಳಲ್ಲಿ ಬೇರೆ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಒಬ್ಬ ವ್ಯಕ್ತಿ ತನ್ನ 14 ವರ್ಷದ ಮಗಳ ತಲೆ ಕತ್ತರಿಸಿ, ಗೌರವ ಹತ್ಯೆ ಮಾಡಿದ್ದ. ಆತನಿಗೆ ಬಳಿಕ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ: Shocking News: ಸೂಪರ್ ಹೀರೋ ಕಾಪಾಡುತ್ತಾನೆಂಬ ನಂಬಿಕೆಯಿಂದ ಟೆರೇಸ್​ನಿಂದ ಕೆಳಗೆ ಜಿಗಿದು ಸಾವನ್ನಪ್ಪಿದ ಬಾಲಕ

Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!

TV9 Web

TV9 Kannada

Read More
Loading...
Unable to load recommendations.
Follow Us