ಮಹಾರಾಷ್ಟ್ರದ ಪುಣೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿ ಬೈಕ್ನಲ್ಲಿ ಮನೆಗೆ ತೆರಳುತ್ತಿರುವಾಗ ಇದ್ದಕ್ಕಿದ್ದಂತೆ ಬೈಕ್ನಿಂದ ವಿಚಿತ್ರ ಶಬ್ದವೊಂದು ಕೇಳಿಸಲು ಪ್ರಾರಂಭಿಸಿದೆ. ತಕ್ಷಣವೇ ಬೈಕ್ ನಿಲ್ಲಿಸಿ ಹ್ಯಾಂಡಲ್ ತೆರೆದು ನೋಡುವಷ್ಟರಲ್ಲಿ ದೈತ್ಯಾಕಾರದ ನಾಗರ ಹಾವು ಅಡಗಿರುವುದು ಕಂಡು ಬಂದಿದೆ.
ಘಟನೆ ಪುಣೆಯ ಇಂದಾಪುರ ನಿಮಗಾಂವ್ ಕೆಟ್ಟಿ ಗ್ರಾಮದ ಬಳಿ ನಡೆದಿದೆ. ಮಂಗಳವಾರ ಎಂದಿನಂತೆ ಕೃಷಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಘಟನೆ ನಡೆದಿದೆ. ಬೈಕ್ ವೇಗವನ್ನು ಹೆಚ್ಚಿದ ತಕ್ಷಣ ವಿಚಿತ್ರವಾದ ಶಬ್ದ ಕೇಳಿಸಿದೆ. ಬಳಿಕ ಹ್ಯಾಂಡಲ್ ಕಡೆ ನೋಡಿದಾಕ್ಷಣ ಏನೋ ಅಂಟಿಕೊಂಡಂತೆ ಭಾಸವಾಗಿದೆ. ಬೈಕ್ ನಿಲ್ಲಿಸಿದ ತಕ್ಷಣ ನಾಗರ ಹಾವು ಅಡಿಗಿ ಕುಳಿತಿರುವುದು ಕಂಡು ಬಂದಿದೆ.
ಹಾವು ಬೈಕ್ ಹ್ಯಾಂಡಲ್ನ ಪೈಪ್ನಲ್ಲಿ ಸಿಲುಕಿಕೊಂಡಿರುವುದರಿಂದ ಹೊರಬರಲು ಕಷ್ಟವಾಗುತ್ತಿತ್ತು. ಹಾವನ್ನು ನೋಡಿ ಸವಾರ ಕಂಗಾಲಾಗಿದ್ದಾರೆ. ಆದರೂ ಸಹ ಧೈರ್ಯದಿಂದ ಗ್ಯಾರೇಜ್ವರೆಗೆ ಬೈಕ್ಅನ್ನು ತಳ್ಳಿಕೊಂಡು ಸಾಗಿದ್ದಾರೆ. ಹಾವು ಹಿಡಿಯುವವರನ್ನು ಕರೆಸಿ ಬೈಕ್ ಹೆಡ್ಲೈಟ್ ತೆರೆದು ಹಾವನ್ನು ಹೊರತೆಗೆಯಲಾಗಿದೆ. ಹ್ಯಾಂಡಲ್ ಕೊಳವೆಯಲ್ಲಿ ಸಿಲುಕಿದ್ದ ಹಾವನ್ನು ಹೊರತೆಗೆಯಲಾಗಿದೆ. ಹಾವು ಸುಮಾರು 5 ಅಡಿ ಉದ್ದವಾಗಿದೆ. ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಇದನ್ನೂ ಓದಿ:
5 ಅಡಿ ಉದ್ದದ ಹಾವು ಸೆರೆ ಹಿಡಿದ ಮಹಾರಾಷ್ಟ್ರದ ಬಿಜೆಪಿ ನಾಯಕ ಗಿರೀಶ್ ಮಹಾಜನ್; ಧೈರ್ಯಕ್ಕೆ ನೆಟ್ಟಿಗರ ಶ್ಲಾಘನೆ
ಕಾಳಿಂಗ ಸರ್ಪಗಳು ದುರ್ಬಲ ಹಾವುಗಳನ್ನೇ ತಮ್ಮ ಆಹಾರ ಮಾಡಿಕೊಂಡಿರುವುದು ನಿಮಗೆ ಗೊತ್ತಾ?
Published On - 1:29 pm, Tue, 10 August 21