AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ಸು ಓಡಿಸುತ್ತಿರುವಾಗಲೇ ಪ್ರಜ್ಞೆ ತಪ್ಪಿದ ಚಾಲಕಿ: ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಶಾಲಾ ಬಸ್ ಚಲಿಸುತ್ತಿರುವಾಗಲೇ ಚಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಾಗ, ಸಂಭವಿಸಬಹುದಾದ ಭೀಕರ ದುರಂತವನ್ನು ಮಧ್ಯಮ ಶಾಲಾ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಅದ್ಭುತ ಧೈರ್ಯದ ಮೂಲಕ ತಪ್ಪಿಸಿದೆ. ಬುಧವಾರ ಬೆಳಿಗ್ಗೆ ಸುಮಾರು 12 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಆಸ್ತಮಾ ಅಟ್ಯಾಕ್ ಆಗಿತ್ತು. ಹ್ಯಾನ್ಕಾಕ್ ಕೌಂಟಿ ಸ್ಕೂಲ್ ಡಿಸ್ಟ್ರಿಕ್ಟ್ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ಚಾಲಕಿ ಸ್ಟೀರಿಂಗ್ ಮೇಲೆಯೇ ಕುಸಿದು ಬೀಳುವ ದೃಶ್ಯಗಳು ಸೆರೆಯಾಗಿವೆ.

ಬಸ್ಸು ಓಡಿಸುತ್ತಿರುವಾಗಲೇ ಪ್ರಜ್ಞೆ ತಪ್ಪಿದ ಚಾಲಕಿ: ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್Image Credit source: Free Press Journal
ನಯನಾ ರಾಜೀವ್
|

Updated on: Apr 30, 2026 | 3:31 PM

Share

ಶಾಲಾ ಬಸ್ ಚಲಾಯಿಸುತ್ತಿರುವಾಗ ಚಾಲಕಿಗೆ ಏಕಾಏಕಿ ಆಸ್ತಮಾ ಅಟ್ಯಾಗಿ ಆಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.  ಬುಧವಾರ ಬೆಳಗ್ಗೆ ಸುಮಾರು 12 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಆಸ್ತಮಾ ಅಟ್ಯಾಕ್ ಆಗಿತ್ತು. ಹ್ಯಾನ್ಕಾಕ್ ಕೌಂಟಿ ಸ್ಕೂಲ್ ಡಿಸ್ಟ್ರಿಕ್ಟ್ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ಚಾಲಕಿ ಸ್ಟೀರಿಂಗ್ ಮೇಲೆಯೇ ಕುಸಿದು ಬೀಳುವ ದೃಶ್ಯಗಳು ಸೆರೆಯಾಗಿವೆ.

ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಲು ಪ್ರಾರಂಭಿಸಿತು. ಬಸ್ಸಿನ ಮುಂಭಾಗದಲ್ಲಿದ್ದ ವಿದ್ಯಾರ್ಥಿಯೊಬ್ಬರು ತಕ್ಷಣವೇ ಪರಿಸ್ಥಿತಿಯನ್ನು ಅರಿತು ಸ್ಟೀರಿಂಗ್ ವೀಲ್ ಹಿಡಿದು ಬಸ್ ನಿಯಂತ್ರಣಕ್ಕೆ ತಂದರು. ಚಾಲಕಿ ಕ್ಷಣಕಾಲ ಎಚ್ಚರಗೊಂಡರಾದರೂ ಮತ್ತೆ ಪ್ರಜ್ಞೆ ತಪ್ಪಿ ಹಿಂದಕ್ಕೆ ಬಿದ್ದರು. ಜಾಕ್ಸನ್ ಕ್ಯಾಸ್ನೇವ್ ಎಂಬ ಹುಡುಗ ಚಾಲಕನ ಸೀಟಿನತ್ತ ಧಾವಿಸಿ ಬ್ರೇಕ್ ಒತ್ತಿ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾನೆ.

ಮತ್ತೊಬ್ಬ ವಿದ್ಯಾರ್ಥಿ ಚಾಲಕಿಗೆ ತುರ್ತು ಔಷಧಿಯನ್ನು ನೀಡಿದರೆ, ಉಳಿದವರು ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯ ಕೋರಿದರು. ಹ್ಯಾನ್‌ಕಾಕ್ ಮಿಡಲ್ ಸ್ಕೂಲ್ ಪ್ರಾಂಶುಪಾಲರಾದ ಮೆಲಿಸ್ಸಾ ಸಾಸಿಯರ್ ಅವರು ವಿದ್ಯಾರ್ಥಿಗಳ ಈ ಸಾಹಸವನ್ನು ಶ್ಲಾಘಿಸಿದ್ದಾರೆ. ಶಾಲೆಯ ಪೆಪ್ ರ್ಯಾಲಿಯಲ್ಲಿ ಮೆಕೆಂಜಿ ಫಿಂಚ್, ಜಾಕ್ಸನ್ ಕ್ಯಾಸ್ನೇವ್, ಡೇರಿಯಸ್ ಕ್ಲಾರ್ಕ್, ಕೇಲೀ ಕ್ಲಾರ್ಕ್ ಮತ್ತು ಡೆಸ್ಟಿನಿ ಕಾರ್ನೆಲಿಯಸ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅವರ ಧೈರ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮತ್ತಷ್ಟು ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ವೈದ್ಯಕೀಯ ಚಿಕಿತ್ಸೆಯ ನಂತರ ಚೇತರಿಸಿಕೊಂಡಿರುವ ಲಿಯಾ ಟೇಲರ್, ಆ ವಿದ್ಯಾರ್ಥಿಗಳೇ ನನ್ನ ಜೀವ ಉಳಿಸಿದರು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಆಸ್ತಮಾ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ತ್ವರಿತ ನಿರ್ಧಾರ ಮತ್ತು ಶಾಂತವಾಗಿರುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಒತ್ತಡದ ಪರಿಸ್ಥಿತಿಯಲ್ಲೂ ಶಾಂತವಾಗಿ ತಂಡವಾಗಿ ಕೆಲಸ ಮಾಡಿದ ಈ ವಿದ್ಯಾರ್ಥಿಗಳು ಕೇವಲ ತಮ್ಮ ಜೀವವನ್ನಷ್ಟೇ ಅಲ್ಲದೆ, ತಮ್ಮ ಚಾಲಕಿಯ ಜೀವವನ್ನೂ ಉಳಿಸಿ ನಿಜವಾದ ಹೀರೋಗಳು ಎನಿಸಿಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us