AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿದ್ದಾಗಲೇ ಮರಣ ಪ್ರಮಾಣಪತ್ರ ಪಡೆದುಕೊಳ್ಳುವಂತೆ ನಗರ ಪಾಲಿಕೆಯಿಂದ ಬಂತು ಕರೆ! ವ್ಯಕ್ತಿ ತಬ್ಬಿಬ್ಬು

ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಠಾಣೆ ನಗರಸಭೆ ಪಾಲಿಕೆ ಎಚ್ಚೆತ್ತಿತು. ಸ್ವತಃ ಪಾಲಿಕೆಯ ಉಪ ಆಯುಕ್ತ ಸಂದೀಪ್ ಮಾಳ್ವಿ ಈ ಕುರಿತು ಗಮನಹರಿಸಿ ಮರಣಪತ್ರದ ದಾಖಲೆಗಳನ್ನು ಪರಿಶೀಲಿಸಿದರು. ಆನಂತರವೇ ತಿಳಿದಿದ್ದು, ಅದು ತಾಂತ್ರಿಕ ದೋಶವೆಂದು.

ಬದುಕಿದ್ದಾಗಲೇ ಮರಣ ಪ್ರಮಾಣಪತ್ರ ಪಡೆದುಕೊಳ್ಳುವಂತೆ ನಗರ ಪಾಲಿಕೆಯಿಂದ ಬಂತು ಕರೆ! ವ್ಯಕ್ತಿ ತಬ್ಬಿಬ್ಬು
ಚಂದ್ರಶೇಖರ ದೇಸಾಯಿ
Follow us
TV9 Web
| Updated By: guruganesh bhat

Updated on:Jul 04, 2021 | 7:26 PM

ಮಹಾರಾಷ್ಟ್ರದ ಠಾಣೆಯ ಚಂದ್ರಶೇಖರ್ ದೇಸಾಯಿ ಎಂಬ ವ್ಯಕ್ತಿಗೆ ಅಂದು ಸ್ಥಳಿಯ ಪಾಲಿಕೆಯಿಂದ ದೂರವಾಣಿ ಕರೆ ಬಂತು. ಸಹಜವಾಗಿ ಫೋನ್ ಕರೆ ಸ್ವೀಕರಿಸಿದ ಅವರಿಗೆ ಆಚೆಯಿಂದ ಹೇಳಿದ ಮಾತುಗಳನ್ನು ಕೇಳಿ ಏನು ಹೇಳಬೇಕೆಂದೇ ತಿಳಿಯಲಿಲ್ಲ. ‘ಚಂದ್ರಶೇಖರ್ ದೇಸಾಯಿ ಅವರ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ. ದಯವಿಟ್ಟು ತೆಗೆದುಕೊಂಡು ಹೋಗಿ’ ಎಮದು ಸ್ವತಃ ಚಂದ್ರಶೇಖರ ದೇಶಾಯಿ ಅವರಿಗೇ ಪಾಲಿಕೆ ಸಿಬ್ಬಂದಿ ಫೋನ್​ನಲ್ಲಿ ತಿಳಿಸಿದರು. ಆರಾಮಾಗಿ ಬದುಕಿದ್ದ ಅವರಿಗೆ ತಮ್ಮದೇ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯಿತು. ಈ ಅನೂಹ್ಯ ವಿದ್ಯಮಾನದ ಬಗ್ಗೆ ಸ್ಥಳೀಯ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು.

ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಠಾಣೆ ನಗರಸಭೆ ಪಾಲಿಕೆ ಎಚ್ಚೆತ್ತಿತು. ಸ್ವತಃ ಪಾಲಿಕೆಯ ಉಪ ಆಯುಕ್ತ ಸಂದೀಪ್ ಮಾಳ್ವಿ ಈ ಕುರಿತು ಗಮನಹರಿಸಿ ಮರಣಪತ್ರದ ದಾಖಲೆಗಳನ್ನು ಪರಿಶೀಲಿಸಿದರು. ಆನಂತರವೇ ತಿಳಿದಿದ್ದು, ಅದು ತಾಂತ್ರಿಕ ದೋಶವೆಂದು. ಈ ತಪ್ಪನ್ನು ಸರಿಪಡಿಸಲು ತಕ್ಷಣವೇ ತಮ್ಮ ತಂಡಕ್ಕೆ ಅವರು ಸೂಚಿಸಿದರು. ಆದರೆ ಅಷ್ಟು ಹೊತ್ತಿಗೆ ಟ್ವಿಟರ್​ನಲ್ಲಿ ಈ ಸುದ್ದಿ ಬಹಳವೇ ಚಿತ್ರ ವಿಚಿತ್ರದ ಟ್ವೀಟ್​ಗಳು ಹುಟ್ಟಲು ಕಾರಣವಾಗಿತ್ತು. ಅಂತಹ ಕೆಲವು ಟ್ವೀಟ್​ಗಳು ಇಲ್ಲಿವೆ.

ಈ ತಪ್ಪನ್ನು ಸರಿಪಡಿಸಲು ತಕ್ಷಣವೇ ತಮ್ಮ ತಂಡಕ್ಕೆ ಅವರು ಸೂಚಿಸಿದರು. ಆದರೆ ಅಷ್ಟು ಹೊತ್ತಿಗೆ ಟ್ವಿಟರ್​ನಲ್ಲಿ ಈ ಸುದ್ದಿ ಬಹಳವೇ ಚಿತ್ರ ವಿಚಿತ್ರದ ಟ್ವೀಟ್​ಗಳು ಹುಟ್ಟಲು ಕಾರಣವಾಗಿತ್ತು. ಅಂತಹ ಕೆಲವು ಟ್ವೀಟ್​ಗಳು ಇಲ್ಲಿವೆ.

ಇದನ್ನೂ ಓದಿ: 

Viral Video: ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟ ವೃದ್ಧ; ವಿಡಿಯೋ ವೈರಲ್!

ಲಾಕ್​ಡೌನ್​ ಮುಂದುವರಿಯುತ್ತಿದ್ದರೆ ಮಾನವರು ಹೇಗೆ ಕಾಣಿಸಬಹುದು? ವೈರಲ್​ ಆಯ್ತು ಯುವತಿಯ ಫೋಟೋ

(Thane man told to receives death certificate of him by municipal corporation)

Published On - 7:19 pm, Sun, 4 July 21