
ನವದೆಹಲಿ, ಮೇ 22: ಭಾರತದಲ್ಲಿ ಬೇಸಿಗೆಯ ಧಗೆ ಜೋರಾಗಿದೆ. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಶಾಖದ ಮಟ್ಟವು ತುಂಬಾ ತೀವ್ರವಾಗಿದೆ. ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿಟ್ಟರೆ ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗುತ್ತದೆ. ನೀರು ಸಿಗದೆ ಎಷ್ಟೋ ಪಕ್ಷಿಗಳು ಸಾಯುತ್ತಿವೆ. ಮಹಾರಾಷ್ಟ್ರದಲ್ಲಿ ನೀರಿಗಾಗಿ ಸರ್ಕಾರಿ ಬಸ್ ಅನ್ನು ಮಂಗಗಳ (Monkey Video) ಗುಂಪೊಂದು ತಡೆಯುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ.
ಭಾರತದಲ್ಲಿನ ಹೆಚ್ಚಿನ ತಾಪಮಾನವು ಮನುಷ್ಯರನ್ನು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಪರಿಣಾಮ ಬೀರಿದೆ. ಕಾಡುಗಳಲ್ಲಿನ ಜಲಮೂಲಗಳು ಒಣಗುತ್ತಿರುವುದರಿಂದ, ಪ್ರತಿ ವರ್ಷ ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಮತ್ತು ನೀರನ್ನು ಹುಡುಕುತ್ತಾ ಜನರು ವಾಸಿಸುವ ಸ್ಥಳಗಳಿಗೆ ಬರುತ್ತವೆ. ಮಹಾರಾಷ್ಟ್ರದಲ್ಲಿ ಮಂಗಗಳ ಗುಂಪೊಂದು ನೀರಿಗಾಗಿ ಸರ್ಕಾರಿ ಬಸ್‌ನ ದಾರಿಯನ್ನು ತಡೆದ ಘಟನೆಗೆ ಸಂಬಂಧಿಸಿದ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೆಲವು ಮಂಗಗಳು ರಸ್ತೆಯಲ್ಲಿ ಕುಳಿತಿವೆ. ಸಾರ್ವಜನಿಕರು ಅವುಗಳಿಗೆ ಕುಡಿಯಲು ನೀರು ನೀಡುತ್ತಿದ್ದಾರೆ. ತುಂಬಾ ಬಾಯಾರಿಕೆಯಾಗಿರುವ ಮಂಗಗಳು ನೀರನ್ನು ಕಸಿದುಕೊಂಡು ಕುಡಿಯುತ್ತಿವೆ. ಇದೆಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ.
Extreme Heat in Maharashtra Leaves Monkeys Desperate for Drinking Water#Maharashtra #Heatwave #Monkey #Wildlife #ExtremeHeat pic.twitter.com/NyHaKGIz2D
— NewsMobile (@NewsMobileIndia) May 22, 2026
ನೀರಿಗಾಗಿ ಬಸ್ಸನ್ನು ತಡೆದ ಮಂಗಗಳು, ನೀರು ಕುಡಿದು ಬಾಯಾರಿಕೆ ತಣಿಸಿಕೊಂಡ ನಂತರವೇ ಬಸ್ಸಿಗೆ ದಾರಿ ಮಾಡಿಕೊಟ್ಟವು. ಈ ವಿಡಿಯೋ ಪ್ರಸ್ತುತ ಅಂತರ್ಜಾಲದಲ್ಲಿ ಚರ್ಚೆಯಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ