Viral: ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿ ಅನುಭವ ಹಂಚಿಕೊಂಡ ಟ್ರಾವೆಲರ್

ಕೆಲವರಿಗೆ ಊರು ಸುತ್ತುವುದು ಅಂದ್ರೆ ಅದೇನೋ ಕ್ರೇಜ್. ದೆಹಲಿಯಿಂದ ಮೊದಲ ಬಾರಿಗೆ ಚೆನ್ನೈಗೆ ಬಂದಿಳಿದ ಟ್ರಾವೆಲರ್ ಒಬ್ಬರು ಈ ನಗರವನ್ನು ಮೆಚ್ಚಿಕೊಂಡಿದ್ದಾರೆ. ದೆಹಲಿಗೆ ಹೋಲಿಸಿದ್ರೆ ಚೆನ್ನೈನ ಜನರ ಜೀವನದ ವೇಗಕ್ಕೂ, ನಗರವು ಜನಸಂದಣಿಯನ್ನು ನಿರ್ವಹಿಸುವ ವಿಧಾನಕ್ಕೂ ಹಲವು ವ್ಯತ್ಯಾಸಗಳಿವೆ. ಇಲ್ಲಿನ ಶಾಂತ ವಾತಾವರಣ ಹಾಗೂ ಸ್ವಚ್ಛತೆಯನ್ನು ಶ್ಲಾಘಿಸಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.

Viral: ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿ ಅನುಭವ ಹಂಚಿಕೊಂಡ ಟ್ರಾವೆಲರ್
ವೈರಲ್‌ ಪೋಸ್ಟ್‌
Image Credit source: Twitter

Updated on: Jun 25, 2026 | 5:28 PM

ಕೆಲವರಿಗೆ ಊರು, ದೇಶ ಸುತ್ತೋದು ಅಂದ್ರೆ ಅದೇನೋ ಖುಷಿ. ಹೀಗಾಗಿ ಸೋಲೋ ಟ್ರಿಪ್ ಎಂದು ಊರಿಂದ ಊರಿಗೆ ಸುತ್ತುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ದೆಹಲಿ (Delhi) ಮೂಲದ ಟ್ರಾವೆಲರ್ ಒಬ್ಬರು ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿದ್ದಾರೆ. ಇಲ್ಲಿನ ಜನರ ಜೀವನಶೈಲಿ ಹಾಗೂ ನಗರದ ಸ್ವಚ್ಛತೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಅವಿಜೀತ್ (Avijeet) ತಮ್ಮ ಎಕ್ಸ್ ಖಾತೆಯಲ್ಲಿಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗಷ್ಟೇ ಚೆನ್ನೈಗೆ ಬಂದಿಳಿದಿದ್ದೇನೆ. ಹಾಗೂ ಇಲ್ಲಿ ವಿಷಯಗಳು ದೆಹಲಿಗಿಂತ ಭಿನ್ನವಾಗಿವೆ ಎಂದು ನಾನು ಹೇಳಲೇಬೇಕು. ನನ್ನ ಜೀವನದ 27 ವರ್ಷಗಳ ಜರ್ನಿಯಲ್ಲಿ ನಾನು ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಬರುತ್ತಿದ್ದೇನೆ. ಇಲ್ಲಿನ ಪ್ರತಿಯೊಂದು ಅನುಭವವೂ ಒಳ್ಳೆಯದು, ಕೆಟ್ಟದುಗಳೊಂದಿಗೆ ನನಗೆ ಹೊಸದಾಗಿರುತ್ತದೆ. ನನ್ನ ಮೊದಲ ಅವಲೋಕನವೆಂದರೆ, ಅಸ್ತವ್ಯಸ್ತವಲ್ಲದ ಜನರು ಎಂದು ಬರೆದಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇಲ್ಲಿ ಹೆಚ್ಚು ಜನಸಂದಣಿ ಇದ್ದರೂ, ಎಲ್ಲರೂ ನಿರಾಳವಾಗಿದ್ದಾರೆ, ಒಬ್ಬರನ್ನೊಬ್ಬರು ಅಡ್ಡಲಾಗಿ ಹೋಗಲು ಪ್ರಯತ್ನಿಸದೆ ಒಂದೇ ಲೈನ್‌ನಲ್ಲಿ ನಿಧಾನವಾಗಿ ಹೋಗುತ್ತಾರೆ. ನಾನು ನಿನ್ನೆ ಬೆಳಿಗ್ಗೆ ಇದ್ದ ಭೋಪಾಲ್‌ಗಿಂತ ಈ ರೈಲ್ವೆ ನಿಲ್ದಾಣದ ಒಳಗೆ ಹಾಗೂ ಹೊರಗೆ ಸ್ವಚ್ಛವಾಗಿದೆ. ಇಲ್ಲಿನ ಆರಂಭಿಕ ಅನುಭವವು ತಾವು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ತಂಗಿ, ನಂಗೂ ತಂಗಿ ಇದ್ದಂತೆ; ಕ್ಯಾಬ್‌ ಹತ್ತಿದ ಯುವತಿಯ ಅಣ್ಣನಿಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟ ಕ್ಯಾಬ್‌ ಡ್ರೈವರ್

ಈ ಪೋಸ್ಟ್ ಒಂದು ಲಕ್ಷದ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ರುಚಿಕರ ಆಹಾರ, ಉತ್ತಮ ಮೂಲಸೌಕರ್ಯ. ಬೇರೆ ನಗರದ ಮೆಟ್ರೋ ಸೇವೆಗಳಿಗಿಂತ ಇಲ್ಲಿನ ಮೆಟ್ರೋ ವ್ಯವಸ್ಥೆಗಳಿಗಿಂತ ಹೆಚ್ಚು ಸಂಘಟಿತ ಹಾಗೂ ಶಿಸ್ತುಬದ್ಧವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಚೆನ್ನೈ ನಗರವು ಅಭಿವೃದ್ಧಿ ಹೊಂದಿದ್ದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತದ ನಿಜವಾದ ಅಭಿವೃದ್ಧಿ ಹೊಂದಿದ ಭಾಗಕ್ಕೆ ಸ್ವಾಗತ. ನೀವು ಉತ್ತಮ ವಾಸ್ತವ್ಯವನ್ನು ಹೊಂದಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ಚೆನ್ನೈನ ಪಾಕಪದ್ಧತಿಗಳನ್ನು ಸಹ ಪ್ರಯತ್ನಿಸಿ. ಖಂಡಿತ ಇಲ್ಲಿನ ರುಚಿಗಳನ್ನು ಇಷ್ಟಪಡುತ್ತೀರಿ ಎಂದು ನನಗೆ ಖಚಿತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us