AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಿಮ್ಮ ತಂಗಿ, ನಂಗೂ ತಂಗಿ ಇದ್ದಂತೆ; ಕ್ಯಾಬ್‌ ಹತ್ತಿದ ಯುವತಿಯ ಅಣ್ಣನಿಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟ ಕ್ಯಾಬ್‌ ಡ್ರೈವರ್

ಹೆಣ್ಣು ಮಕ್ಕಳಿಗೆ ಸುರಕ್ಷತೆ ಅನ್ನೋದೇ ಇಲ್ಲ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಒಂಟಿಯಾಗಿ ಹೆಣ್ಮಕ್ಕಳು ಆಟೋ, ಕ್ಯಾಬ್‌ನಲ್ಲಿ ಓಡಾಡುವುದು ಸೇಫ್ ಅಲ್ಲ. ಆದರೆ ಇಂತಹ ಡ್ರೈವರ್ ಒಬ್ಬರು ಸಿಕ್ಕರೆ ಯಾವ ಭಯನೂ ಇರಲ್ಲ. ಹೌದು, ತಡರಾತ್ರಿ ತಂಗಿಯನ್ನು ಕ್ಯಾಬ್ ಗೆ ಹತ್ತಿಸಿದ ಅಣ್ಣನಿಗೆ ಕ್ಯಾಬ್ ಡ್ರೈವರ್ ಹೇಳಿದ ಮಾತು ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಿಮ್ಮ ತಂಗಿ, ನಂಗೂ ತಂಗಿ ಇದ್ದಂತೆ; ಕ್ಯಾಬ್‌ ಹತ್ತಿದ ಯುವತಿಯ ಅಣ್ಣನಿಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟ ಕ್ಯಾಬ್‌ ಡ್ರೈವರ್
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on: Jun 24, 2026 | 6:01 PM

Share

ದೆಹಲಿ, ಜೂನ್ 24: ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕಣ್ಣು ಮುಚ್ಚಿ ಯಾರನ್ನು ನಂಬುವ ಆಗಿಲ್ಲ. ಸುರಕ್ಷತೆ ಅನ್ನೋದೇ ಇಲ್ಲ. ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಹೆಣ್ಣು ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಕ್ಯಾಬ್, ಆಟೋ, ಬಸ್ಸಿನಲ್ಲಿ ಕಳುಹಿಸಲು ಹಿಂದೇಟು ಹಾಕುತ್ತಾರೆ. ಇದೀಗ ದೆಹಲಿಯಲ್ಲಿ (Delhi) ಕ್ಯಾಬ್ ಡ್ರೈವರ್‌ರೊಬ್ಬರು ಕಾಳಜಿಯುತ ಮಾತಿನಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ತಂಗಿಯನ್ನು ತನ್ನ ಕ್ಯಾಬ್ ಹತ್ತಿಸಿದ ಅಣ್ಣನಿಗೆ ನಿಮ್ಮ ತಂಗಿ ನನ್ನ ಕ್ಯಾಬ್ ನಲ್ಲಿ ಸೇಫ್ ಆಗಿರ್ತಾಳೆ ಎಂದು ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಕ್ಯಾಬ್ ಡ್ರೈವರ್ ಒಳ್ಳೆತನವನ್ನು ಮೆಚ್ಚಿಕೊಂಡಿದ್ದಾರೆ.

ಲಕ್ಷಯ್ ಮೆಹತ (Lakshay Mehata) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವತಿಯೊಬ್ಬಳು ದೆಹಲಿಯಿಂದ ಗುರಗಾಂವ್‌ಗೆ ರಾತ್ರಿ ಕ್ಯಾಬ್ ಬುಕ್ ಮಾಡಿದ್ದಳು. ಸಹೋದರಿಯನ್ನು ಕ್ಯಾಬ್ ಹತ್ತಿಸಿದ ಅಣ್ಣನು ಅಪ್‌ಡೇಟ್ ಮಾಡುವಂತೆ ಸೂಚಿಸಿದ್ದಾನೆ. ಅಣ್ಣ ತಂಗಿಯ ಸಂಭಾಷಣೆಯನ್ನು ಕಂಡ ಕ್ಯಾಬ್ ಡ್ರೈವರ್ ಆ ವ್ಯಕ್ತಿಗೆ ಧೈರ್ಯ ತುಂಬಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಯುವತಿಯ ಅಣ್ಣನ ಬಳಿ ಕ್ಯಾಬ್ ಚಾಲಕ, ನನ್ನ ವಾಹನದ ಸಂಖ್ಯೆ ಹಾಗೂ ವಿಳಾಸದ ಫೋಟೊ ತೆಗೆಯಿರಿ. ಅದನ್ನು ಕಾರಿನ ಹೊರಗೆ ಬರೆಯಲಾಗಿದೆ. ಅವಳು ನನ್ನ ಸಹೋದರಿ ಇದ್ದಂತೆ ಎಂದು ಭರವಸೆ ನೀಡಿದ್ದು, ಇದನ್ನು ಕೇಳಿದ ಯುವತಿ ಅಣ್ಣ ಧನ್ಯವಾದಗಳು ಎಂದು ಪ್ರತಿಕ್ರಿಯೆ ನೀಡಿರುವುದನ್ನು ಕಾಣಬಹುದು.

ಇದನ್ನೂ ಓದಿ: Video: ದೆಹಲಿ ಮೆಟ್ರೋದೊಳಗೆ ಕಪಿಚೇಷ್ಟೆ

ಈ ಪೋಸ್ಟ್ 2.3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕ್ಯಾಬ್ ಚಾಲಕನ ಒಳ್ಳೆತನಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ, ಇಂತಹ ಡ್ರೈವರ್ ಸಿಕ್ಕರೆ ಹೆಣ್ಣು ಮಕ್ಕಳು ಓಡಾಡಲು ಧೈರ್ಯವಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯ ಯುವಕರು ಈ ರೀತಿ ಕಾಳಜಿ ತೋರಿದ ಹೆಣ್ಣು ಮಕ್ಕಳು ಎಂದಿಗೂ ಸೇಫ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಟ್ಟ ಮನಸ್ಥಿತಿಗಳ ನಡುವೆ ಒಳ್ಳೆಯ ಮನಸ್ಥಿತಿಯ ವ್ಯಕ್ತಿಗಳು ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ