AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ದೆಹಲಿ ಮೆಟ್ರೋದೊಳಗೆ ಕಪಿಚೇಷ್ಟೆ

ದೆಹಲಿ ಮೆಟ್ರೋದಲ್ಲಿ ಯಾವಾಗಲೂ ಯಾರೋ ಡ್ಯಾನ್ಸ್​ ಮಾಡಿದ್ದು, ಇನ್ಯಾರೋ ವಿಚಿತ್ರ ಉಡುಗೆಗಳನ್ನು ತೊಟ್ಟು ಬಂದಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪ್ರಾಣಿಗಳ ಆಟಕ್ಕೂ ವೇದಿಕೆಯಾದಂತಾಗಿದೆ. ಕೋತಿಯೊಂದು ಮೆಟ್ರೋದೊಳಗೆ ಬಂದು ಚೇಷ್ಟೆ ಮಾಡಿದೆ. ಜನದಟ್ಟಣೆಯಿಂದ ಕೂಡಿದ್ದ ಮೆಟ್ರೋ ಕೋಚ್‌ ಒಳಗೆ ನುಗ್ಗಿದ ಕೋತಿ, ಮೊದಲು ಸೀಟುಗಳ ಮೇಲೆಲ್ಲಾ ಓಡಾಡಿದೆ. ಯುವತಿಯ ಬಳಿಕ ಕೋತಿ ಅಲ್ಲಿದ್ದ ಇತರ ಪ್ರಯಾಣಿಕರ ಮೇಲೂ ಹಾರಿ ಹೆದರಿಸಲು ಶುರು ಮಾಡಿದೆ. ಕೋತಿಯ ಆಟ ಕಂಡು ಬೋಗಿಯಲ್ಲಿದ್ದ ಜನರು ಪ್ರಾಣಭಯದಿಂದ ಕಿರುಚುತ್ತಾ ಇತ್ತ ಇತ್ತ ಓಡಿದ್ದಾರೆ.

Video: ದೆಹಲಿ ಮೆಟ್ರೋದೊಳಗೆ ಕಪಿಚೇಷ್ಟೆ
ಕೋತಿImage Credit source: Tv9 Telugu
ನಯನಾ ರಾಜೀವ್
|

Updated on: Jun 21, 2026 | 2:48 PM

Share

ನವದೆಹಲಿ, ಜೂನ್ 21: ದೆಹಲಿ ಮೆಟ್ರೋದಲ್ಲಿ ಯಾವಾಗಲೂ ಯಾರೋ ಡ್ಯಾನ್ಸ್​ ಮಾಡಿದ್ದು, ಇನ್ಯಾರೋ ವಿಚಿತ್ರ ಉಡುಗೆಗಳನ್ನು ತೊಟ್ಟು ಬಂದಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪ್ರಾಣಿಗಳ ಆಟಕ್ಕೂ ವೇದಿಕೆಯಾದಂತಾಗಿದೆ. ಕೋತಿ(Monkey)ಯೊಂದು ಮೆಟ್ರೋದೊಳಗೆ ಬಂದು ಚೇಷ್ಟೆ ಮಾಡಿದೆ.

ಮೆಟ್ರೋ ಬೋಗಿಯೊಳಗೆ ನಡೆದಿದ್ದೇನು? ಜನದಟ್ಟಣೆಯಿಂದ ಕೂಡಿದ್ದ ಮೆಟ್ರೋ ಕೋಚ್‌ ಒಳಗೆ ನುಗ್ಗಿದ ಕೋತಿ, ಮೊದಲು ಸೀಟುಗಳ ಮೇಲೆಲ್ಲಾ ಓಡಾಡಿದೆ. ಯುವತಿಯ ಬಳಿಕ ಕೋತಿ ಅಲ್ಲಿದ್ದ ಇತರ ಪ್ರಯಾಣಿಕರ ಮೇಲೂ ಹಾರಿ ಹೆದರಿಸಲು ಶುರು ಮಾಡಿದೆ. ಕೋತಿಯ ಆಟ ಕಂಡು ಬೋಗಿಯಲ್ಲಿದ್ದ ಜನರು ಪ್ರಾಣಭಯದಿಂದ ಕಿರುಚುತ್ತಾ ಇತ್ತ ಇತ್ತ ಓಡಿದ್ದಾರೆ.

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ: ಕೆಲವರು “ದೆಹಲಿ ಮೆಟ್ರೋದಲ್ಲಿ ಪ್ರತಿದಿನವೂ ಹೊಸ ಮನೋರಂಜನೆ ಸಿಗುತ್ತದೆ” ಎಂದು ತಮಾಷೆ ಮಾಡುತ್ತಿದ್ದಾರೆ.

ವಿಡಿಯೋ

ಇನ್ನು ಕೆಲವರು, ಇದು ನಗುವ ವಿಷಯವಲ್ಲ, ಅತ್ಯಂತ ಅಪಾಯಕಾರಿ. ಒಂದು ವೇಳೆ ಕೋತಿ ಯಾರಿಗಾದರೂ ಕಚ್ಚಿ, ಯಾವುದಾದರೂ ರೋಗ ಹರಡಿದ್ದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅತ್ಯಾಧುನಿಕ ಸ್ವಯಂಚಾಲಿತ ಬಾಗಿಲುಗಳು ಹಾಗೂ ಕಟ್ಟುನಿಟ್ಟಿನ ತಪಾಸಣೆ ಇರುವ ಮೆಟ್ರೋ ನಿಲ್ದಾಣದೊಳಗೆ, ಚಲಿಸುವ ರೈಲಿಗೆ ಕೋತಿ ಹೇಗೆ ಪ್ರವೇಶಿಸಿತು ಎಂಬುದು ದೊಡ್ಡ ನಿಗೂಢವಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ಅಧಿಕಾರಿಗಳು ಇಂತಹ ಕಾಡು ಪ್ರಾಣಿಗಳು ಒಳಗೆ ಬರದಂತೆ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರ ಒತ್ತಾಯ ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು