Viral News: 21 ಕಿ.ಮೀ ಓಡಿಕೊಂಡು ಹೋಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಶರಣ್ ಸುಬ್ಬ ಅವರು ಸೋನಾಡದಿಂದ ಸುಖಿಯಾಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ಗೆ ನಾಮಪತ್ರ ಸಲ್ಲಿಸಲು ಮುಂಜಾನೆ 4 ಗಂಟೆಗೆ ಓಟ ಆರಂಭಿಸಿ ಕೇವಲ ನಾಲ್ಕು ಗಂಟೆಗಳಲ್ಲಿ ಬಂದು ತಲುಪಿದ್ದಾರೆ.

Viral News: 21 ಕಿ.ಮೀ ಓಡಿಕೊಂಡು ಹೋಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ
21 ಕಿ.ಮೀ ಓಡಿಕೊಂಡು ಹೋಗಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿ
Image Credit source: Business Standard

Updated on: Jun 15, 2023 | 10:43 AM

ಮುಖ್ಯಾಂಶಗಳು

  • 21 ಕಿ.ಮೀ ಓಡಿಕೊಂಡು ಹೋಗಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿ
  • ಶರಣ್ ಸುಬ್ಬ ಅವರು ಸೋನಾಡದಿಂದ ಸುಖಿಯಾಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ಗೆ ನಾಮಪತ್ರ ಸಲ್ಲಿಸಲು ಮುಂಜಾನೆ 4 ಗಂಟೆಗೆ ಓಟ ಆರಂಭಿಸಿ ಕೇವಲ ನಾಲ್ಕು ಗಂಟೆಗಳಲ್ಲಿ ಬಂದು ತಲುಪಿದ್ದಾರೆ.
  • ಸಂಚಾರ ದಟ್ಟಣೆ ಮತ್ತು ಪರಿಸರದ ಪ್ರಭಾವ ಎರಡನ್ನೂ ಕಡಿಮೆ ಮಾಡಲು ಪರ್ಯಾಯ ಸಾರಿಗೆ ಸಾಧನವಾಗಿ ನಡಿಗೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ನಾನು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಬಂಗಾಳದ ಡಾರ್ಜಿಲಿಂಗ್ ಹಿಲ್ಸ್‌ನ ಶರಣ್ ಸುಬ್ಬ(36) ಸ್ವತಂತ್ರ ಅಭ್ಯರ್ಥಿಯು(Independent Candidate)  ರಾಜ್ಯದ ಮುಂಬರುವ ಪಂಚಾಯತ್ ಚುನಾವಣೆಗೆ ನಾಮನಿರ್ದೇಶನವನ್ನು ಸಲ್ಲಿಸಲು 21 ಕಿಲೋಮೀಟರ್ ಓಡಿಕೊಂಡು ಬಂದಿದ್ದಾರೆ. ಶರಣ್ ಸುಬ್ಬ ಅವರು ಸೋನಾಡದಿಂದ ಸುಖಿಯಾಪೋಖ್ರಿ ಬ್ಲಾಕ್ ಡೆವಲಪ್‌ಮೆಂಟ್ ಆಫೀಸ್‌ಗೆ ನಾಮಪತ್ರ ಸಲ್ಲಿಸಲು ಮುಂಜಾನೆ 4 ಗಂಟೆಗೆ ಓಟ ಆರಂಭಿಸಿ ಕೇವಲ ನಾಲ್ಕು ಗಂಟೆಗಳಲ್ಲಿ ಬಂದು ತಲುಪಿದ್ದಾರೆ.

ತಮ್ಮ ಹಿಂದಿನ ಪ್ರೇರಣೆಯನ್ನು ವಿವರಿಸಿದ ಶರಣ್, ಇತ್ತೀಚಿನ ದಿನಗಳಲ್ಲಿ ಕಡಿಮೆ ದೂರದವರೆಗೆ ಹೋಗಬೇಕಾದರೂ ಕೂಡ ವಾಹನಗಳ ಅವಲಂಬನೆ ಹೆಚ್ಚಾಗುತ್ತಿದ್ದು, ಇದು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಸಂಚಾರ ದಟ್ಟಣೆ ಮತ್ತು ಪರಿಸರದ ಪ್ರಭಾವ ಎರಡನ್ನೂ ಕಡಿಮೆ ಮಾಡಲು ಪರ್ಯಾಯ ಸಾರಿಗೆ ಸಾಧನವಾಗಿ ನಡಿಗೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ನಾನು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?

ಜುಲೈ 8 ರಂದು ಒಂದೇ ಹಂತದಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಪಂಚಾಯತ್ ಚುನಾವಣೆಗೆ ಪಶ್ಚಿಮ ಬಂಗಾಳ ಸಜ್ಜಾಗಿದೆ. ಈ ನಿರ್ಣಾಯಕ ಚುನಾವಣಾ ಘಟನೆಯು ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿಗಳು ಮತ್ತು ಜಿಲ್ಲಾ ಪರಿಷತ್ತಿನ ಮತದಾನವನ್ನು ಒಳಗೊಳ್ಳುತ್ತದೆ, ಇದು ಮುಂಬರುವ 2024 ಲೋಕಸಭೆ ಚುನಾವಣೆಗೆ ತುಂಬಾ ಮುಖ್ಯವಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:24 am, Thu, 15 June 23

Loading...
Unable to load recommendations.
Follow Us