Viral Photo: ಅಬ್ಬಾ.. ಇಷ್ಟು ಪುಟ್ಟ ಕಪ್ಪೆ ಅಷ್ಟು ದೊಡ್ಡ ಹಾವು ನುಂಗಿತೇ?
ಬೃಹತ್ ಗಾತ್ರದ ಹಾವೊಂದು ಕಪ್ಪೆಯ ಹೊಟ್ಟೆಯಿಂದ ಮಲದ ರೂಪದಲ್ಲಿ ಹೊರಬಂದಿರುವ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.ಇಷ್ಟು ಪುಟ್ಟ ಕಪ್ಪೆ ಅಷ್ಟೊಂದು ದೊಡ್ಡ ಹಾವನ್ನು ನುಂಗಿತೇ?

ಬೃಹತ್ ಗಾತ್ರದ ಹಾವೊಂದು ಕಪ್ಪೆಯ ಹೊಟ್ಟೆಯಿಂದ ಮಲದ ರೂಪದಲ್ಲಿ ಹೊರಬಂದಿರುವ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.ಇಷ್ಟು ಪುಟ್ಟ ಕಪ್ಪೆ ಅಷ್ಟೊಂದು ದೊಡ್ಡ ಹಾವನ್ನು ನುಂಗಿತೇ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡಿದೆ. ಒಂದೊಮ್ಮೆ ಕಪ್ಪೆಯು ಆ ಹಾವು ನುಂಗಿದ್ದರೆ ಅಷ್ಟು ದೊಡ್ಡ ಹಾವನ್ನು ಹೇಗೆ ನುಂಗಿತು ಎಂಬುದು, ಮತ್ತೊಂದು ಕಪ್ಪೆಯ ಗುದದ್ವಾರದಲ್ಲಿ ಆ ದೊಡ್ಡ ಹಾವು ಹೇಗೆ ಬರಲು ಸಾಧ್ಯ ಎಂಬುದು.
ಸನ್ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಹೆಸರಿನ ಖಾತೆಯಿಂದ ಫೇಸ್ಬುಕ್ನಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇಂಥಹದೊಂದು ಚಿತ್ರ ಅಚ್ಚರಿ ಮೂಡಿಸಿದೆ. ಹಾವು ಈಸ್ಟರ್ನ್ ಬ್ರೌನ್ ಸ್ನೇಕ್ ಜಾತಿಗೆ ಸೇರಿದ್ದು ಎಂದು ತಜ್ಞರು ನಂಬಿದ್ದಾರೆ, ಕಪ್ಪೆ ಹಾವನ್ನು ನುಂಗಿದೆ ಆದರೆ ಅರಗಿಸಿಕೊಳ್ಳಲಾಗಿಲ್ಲ ಇದರ ಪರಿಣಾಮ ಇಡೀ ಹಾವು ಗುದದ್ವಾರದಿಂದ ಹೊರಬಂದಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:Albino Fawn: ಅಪರೂಪದ ಬಿಳಿ ಬಣ್ಣದ ಜಿಂಕೆ ಪತ್ತೆ, ವೈರಲ್ ಪೋಟೋ ಇಲ್ಲಿದೆ ನೋಡಿ
ಕಪ್ಪೆ ತನ್ನ ಹಿಂಗಾಲುಗಳಿಂದ ನೂಕಿ ಹಾವನ್ನು ಹೊರಹಾಕಲು ಪ್ರಯತ್ನಿಸುವುದನ್ನು ಕಂಡು ಫೋಟೊ ಕ್ಲಿಕ್ಕಿಸಿದ್ದರು. ಕಪ್ಪೆ ಹಾವನ್ನು ಬೇರ್ಪಡಿಸಿದ ಬಳಿಕ ಹಾವು ಮೃತಪಟ್ಟಿರುವುದನ್ನು ಉರಗತಜ್ಞರು ಖಚಿತಪಡಿಸಿದ್ದಾರೆ. ಹಾವನ್ನು ಹೊರ ತೆಗೆದ ಬಳಿಕ ಕಪ್ಪೆ ತನಗೇನೂ ಆಗಿಲ್ಲ ಎಂಬ ರೀತಿ ಓಡಿ ಹೋಯಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ