Viral Video : ಕ್ಯಾನ್ಸರ್ ಎಂದಾಕ್ಷಣ ಒಂದು ಕ್ಷಣ ತಲ್ಲಣ ಉಂಟಾಗದೇ ಇರದು. ಇನ್ನು ರೋಗಿಗಳು ಜೀವನಪೂರ್ತಿ ಅದರೊಂದಿಗೆ ಹೋರಾಡಬೇಕೆಂದರೆ? ಅವರಿಗೆ ಚಿಕಿತ್ಸೆಯೊಂದಿಗೆ ಮನೋಸ್ಥೈರ್ಯ ಬಹಳ ಮುಖ್ಯ. ಅದು ತನ್ನಿಂತಾನೇ ಒದಗದು, ಜೊತೆಗಿರುವವರು ಅವರಿಗೆ ಭಾವನಾತ್ಮಕ ಆಸರೆ ಕೊಟ್ಟರೆ ಮಾತ್ರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಸಲೂನಿನಲ್ಲಿ ಕೆಲಸ ಮಾಡುವ ಈ ಮಗನ ತಾಯಿಗೆ ಕ್ಯಾನ್ಸರ್ ಆಗಿದೆ. ಕಿಮೋಥೆರಪಿಗೆ ಮೊದಲು ಮಗನೇ ಅಮ್ಮನ ತಲೆಯನ್ನು ಬೋಳಿಸಿದ್ದಾನೆ. ಮುಂದೇನಾಗುತ್ತದೆ ನೋಡಿ ವಿಡಿಯೋ.
ಸಲೂನಿನ ಸಿಬ್ಬಂದಿಯೂ ಈ ತಾಯಿಗೆ ಸಾಥ್ ಕೊಡುತ್ತದೆ. ಇದೆಲ್ಲವನ್ನು ನೋಡಿದ ಆಕೆಯ ಕಣ್ಣುಗಳು ಉಕ್ಕಲಾರಂಭಿಸುತ್ತದೆ. ಈತನಕ ಈ ವಿಡಿಯೋ ಅನ್ನು ಸುಮಾರು 50 ಮಿಲಿಯನ್ ಜನರು ನೋಡಿದ್ದಾರೆ. 38 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್ ಗ್ಲಾಸ್; ಇದನ್ನು ಟ್ರೆಂಡ್ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
ನಾನಂತೂ ಈ ವಿಡಿಯೋ ನೋಡಿ ಅಳುತ್ತಿದ್ದೇನೆ ಎಂದು ಹಲವಾರು ಜನರು ಹೇಳಿದ್ದಾರೆ. ನನ್ನ ತಾಯಿಗೂ ಕ್ಯಾನ್ಸರ್ ಆಗಿತ್ತು. ಆಗ ಅವಳಿಗೆ ಹೀಗೆ ನಾನೂ ಕೂಡ ಭಾವನಾತ್ಮಕ ಬೆಂಬಲ ಕೊಡಬಹುದಿತ್ತು. ಆಗಿದು ಹೊಳೆಯಲೇ ಇಲ್ಲ. ಬದಲಾಗಿ ಬಗೆಬಗೆಯ ವಿಗ್ಗಳನ್ನು ತಂದುಕೊಟ್ಟೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್
ಇದು ಅತ್ಯಂತ ಸುಂದರವಾದ ವಿಡಿಯೋ. ಎಲ್ಲರಿಗೂ ಇಂಥ ದಯಾಮನೋಭಾವ ಇರಬೇಕು ಎಂದಿದ್ಧಾರೆ ಮತ್ತೊಬ್ಬರು. ಜಗತ್ತು ಇನ್ನೂ ಕೆಟ್ಟು ಹೋಗಿಲ್ಲ. ಒಳ್ಳೆಯವರು ಈ ಭೂಮಿಯ ಮೇಲೆ ಇನ್ನೂ ಇದ್ದಾರೆ ಎಂದು ಮಗದೊಬ್ಬರು ಹೇಳಿದ್ದಾರೆ.
ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಅಭಯ ಇದೆಯಲ್ಲ. ಅದೇ ಜೀವದಾಯಿನಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ