Viral Video: ಸ್ಟ್ರೆಚ್ ಮಾರ್ಕ್‌ಗಳಿಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ ಕಲಾಗಾರ್ತಿ

|

Updated on: Nov 12, 2023 | 12:24 PM

ಇಲ್ಲೊಬ್ಬರು ಅದ್ಭುತ ಕಲಾಗಾರ್ತಿ ತನ್ನ ಗರ್ಭಾಧಾರಣೆಯಿಂದಾದ ಸ್ಟ್ರೆಚ್ ಮಾರ್ಕ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸ್ಟ್ರೆಚ್ ಮಾರ್ಕ್‌ನಿಂದ ಮೂಡಿಬಂದ ಅದ್ಭುತ ಕಲೆಗಳ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದ್ದು, ಸಾಕಷ್ಟು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

Viral Video: ಸ್ಟ್ರೆಚ್ ಮಾರ್ಕ್‌ಗಳಿಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ ಕಲಾಗಾರ್ತಿ
Image Credit source: instagram
Follow us on

ತೂಕ ಕಳೆದುಕೊಂಡಾಗ ಅಥವಾ ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್‌ಗಳು ಕಂಡುಬರುವುದು ಸಾಮಾನ್ಯ. ಆದರೆ ತೂಕ ಕಳೆದುಕೊಂಡ ಖುಷಿಗಿಂತ ಸ್ಟ್ರೆಚ್ ಮಾರ್ಕ್‌ಗಳನ್ನು ಕಂಡು ಬೇಸರಗೊಳ್ಳುವವರೂ ಇದ್ದಾರೆ. ಯಾಕೆಂದರೆ ಈ ಮಾರ್ಕ್‌ಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡುವುದರ ಜೊತೆಗೆ ಮುಜುಗರಕ್ಕೀಡು ಮಾಡುತ್ತದೆ ಎಂಬುದೇ ದೊಡ್ಡ ಸಮಸ್ಯೆ. ಆದರೆ ಇಲ್ಲೊಬ್ಬರು ಅದ್ಭುತ ಕಲಾಗಾರ್ತಿ ತನ್ನ ಗರ್ಭಾಧಾರಣೆಯಿಂದಾದ ಸ್ಟ್ರೆಚ್ ಮಾರ್ಕ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಅದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸ್ಟ್ರೆಚ್ ಮಾರ್ಕ್‌ನಿಂದ ಮೂಡಿಬಂದ ಅದ್ಭುತ ಕಲೆಗಳ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದ್ದು, ಸಾಕಷ್ಟು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ವೀಡಿಯೊವನ್ನು ಸಾರಾ-ಎಲೈನ್ ಫ್ರಿಚ್ ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೆವೆಂಬರ್​​ 2ರಂದು ಪೋಸ್ಟ್​ ಮಾಡಿರುವ ಈ ವಿಡಿಯೋ ಇದೀಗಾಗಲೇ 349,933 ಲೈಕುಗಳನ್ನು ಪಡೆದುಕೊಂಡಿದೆ. ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್‌ಗಳನ್ನು ಕಂಡಾಗ ಮೊದಮೊದಲು ನೋವುಂಟಾಗಿದ್ದು ಹೌದು, ಆದರೆ ಕಾಲನಂತರದಲ್ಲಿ ಆ ಮಾರ್ಕ್‌ಗಳನ್ನೇ ಮಾದರಿಯಾಗಿಟ್ಟುಕೊಂಡು ಹೊಸ ಹೊಸ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದೆ ಹಾಗೂ ಸ್ಟ್ರೆಚ್ ಮಾರ್ಕ್‌ಗಳ ಜೀವನದ ಒಂದು ಭಾಗ ಒಪ್ಪಿಕೊಂಡೆ. ಯಾವುದೇ ಮುಜುಗರಪಡಬೇಕಾಗಿಲ್ಲ ಎಂದು ಸಾರಾ ತಮ್ಮ ಪೋಸ್ಟ್​​ ನಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ

ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. “ಇದು ಅದ್ಭುತವಾಗಿದೆ! ನಾನು ವರ್ಷಗಳಿಂದ ಸ್ಟ್ರೆಚ್ ಮಾರ್ಕ್‌ಗಳಿಂದಾಗಿ ಬಟ್ಟೆಗಳನ್ನು ಧರಿಸುವಾಗ ಮುಜುಗರಪಡುತ್ತಿದ್ದೇನೆ. ಆದರೆ ಈ ವಿಡಿಯೋ ಉತ್ತಮ ಭಾವನೆ ಮೂಡಿಸುತ್ತದೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. “ಸುಂದರವಾಗಿ ಮೂಡಿಬಂದಿದೆ, ಅದ್ಭುತ ಕಲೆ. ನೀವು ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದೀರಿ” ಎಂದು ,ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:24 pm, Sun, 12 November 23