ಯುವತಿಯೊಬ್ಬಳ ಕುತ್ತಿಗೆಗೆ ಮತ್ತೊಬ್ಬಳು ಯುವತಿ ಬೆಲ್ಟ್ ಹಾಕಿ ನಾಯಿಯಂತೆ ಬೀದಿಯಲ್ಲಿ ಸುತ್ತಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಚಿತ್ರ ದೃಶ್ಯವನ್ನು ಕಂಡು ಸುಮ್ಮನಿದ್ದ ಸ್ಥಳೀಯರಿಗೆ ಹಾಗೂ ವಿಡಿಯೋ ತೆಗೆದವರ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಘಾತಕಾರಿ ವಿಡಿಯೋ ಮುಂಬೈನದ್ದು ಎಂದು ತಿಳಿದುಬಂದಿದೆ. ಕುತ್ತಿಗೆಗೆ ಬೆಲ್ಟ್ ಹಾಕಿಕೊಂಡಿರುವ ಯುವತಿ, ಕಪ್ಪು ಬಟ್ಟೆ ಧರಿಸಿ ಪ್ರಾಣಿಯಂತೆ ನಾಲ್ಕು ಕಾಲಿನಲ್ಲಿ ರಸ್ತೆಯಲ್ಲಿ ನಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೀಡಿಯೊವನ್ನು @mathrunner7 ಎಂಬ ಟ್ವಿಟರ್ ಖಾತೆಯಲ್ಲಿ ಫೆಬ್ರವರಿ 14ರಂದು ಹಂಚಿಕೊಳ್ಳಲಾಗಿದೆ. ‘ಮುಂಬೈಗೆ ಏನಾಯಿತು? ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಣೆಗಾಗಿ ಜನರು ಈ ಮಟ್ಟಕ್ಕೆ ಹೇಗೆ ಇಳಿಯುತ್ತಾರೆ?’ ಎಂದು ಪೋಸ್ಟ್ಗೆ ಕ್ಯಾಪ್ಷನ್ ಬರೆದಿದ್ದಾರೆ. ಜೊತೆಗೆ ಪೋಸ್ಟ್ ಅನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಕ್ಕೆ ಅವಕಾಶವಿದೆಯೇ ಎಂದು ಕೇಳಲಾಗಿದೆ.
What happened to Mumbai? How can people go to this low for views on social media?@MumbaiPolice @mieknathshinde is this kind of act allowed at public places? pic.twitter.com/uc7l5zGrU9
— Thummar Ankit 🇮🇳 (@mathrunner7) February 14, 2024
ಇದನ್ನೂ ಓದಿ: ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು
ಕೇವಲ 26 ಸೆಕೆಂಡ್‌ಗಳ ಈ ವಿಡಿಯೋಗೆ ಇದುವರೆಗೆ 16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊಗೆ ಬಳಕೆದಾರರು ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಬಳಕೆದಾರರೊಬ್ಬರು ಬರೆದು ನಮ್ಮ ಭಾರತ ಈಗ ಇದೇ ರೀತಿಯ ಕಾಯಿಲೆಗೆ ತುತ್ತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ