ದಪ್ಪವಾದ ಹಾಸಿಗೆಯ ಮೇಲೆ ಮಲಗುವುದು ಇಂದಿನ ದಿನಗಳಲ್ಲಿ ಫ್ಯಾಶನ್ ಆಗಿಬಿಟ್ಟಿದೆ. ಹೆಚ್ಚೆಂದರೆ ಲಕ್ಷ ಕೊಟ್ಟು ಹಾಸಿಗೆ ಖರೀದಿಸುತ್ತಾರೆ. ಆದರೆ ಎಂದಾದರೂ ಕೋಟಿ ಕೋಟಿ ಬೆಲೆ ಬಾಳುವ ಹಾಸಿಗೆ ಎಂದಾದರೂ ನೀವು ಕಂಡಿದ್ದೀರಾ. ಇಲ್ಲೊಂದು ಹಾಸಿಗೆಯ ಬೆಲೆ ಬರೋಬ್ಬರಿ 5 ಕೋಟಿ. ಮಲಗುವ ಹಾಸಿಗೆಗೆ ಕೋಟಿ ಕೋಟಿ ಖರ್ಚು ಮಾಡಬೇಕಾದರೆ ಅದರಲ್ಲಿ ಅಂತದ್ದೇನಿದೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ? ಬಹುಶಃ ಮಿಲಿಯನೇರ್ಗಳು ಸಹ ಈ ಹಾಸಿಗೆ ಖರೀದಿಸುವ ಮೊದಲು 10 ಬಾರಿ ಯೋಚಿಸುತ್ತಾರೆ. ಹ್ಯಾಸ್ಟೆನ್ಸ್ ಎಂಬ ಸ್ವೀಡಿಶ್ ಕಂಪನಿಯೊಂದು ಈ ಹಾಸಿಗೆಯನ್ನು ಮಾರಾಟ ಮಾಡುತ್ತಿದೆ. ಇದರ ವಿಶೇಷತೆ ಏನೆಂದರೆ ಇದನ್ನು ತಯಾರಿಸಲು ಕುದುರೆ ಬಾಲದ ಕೂದಲನ್ನು ಬಳಸಲಾಗಿದೆ.
ಡೈಲಿ ಮೇಲ್ ವರದಿಯ ಪ್ರಕಾರ, ಹಾಸಿಗೆಗಳನ್ನು ಮಾರಾಟ ಮಾಡುವ ಈ ಕಂಪನಿಯ ಹೆಸರು ಹ್ಯಾಸ್ಟೆನ್ಸ್ . ಈ ಕಂಪನಿಯು 1852 ರಿಂದ ಹಾಸಿಗೆಗಳನ್ನು ಮಾರಾಟ ಮಾಡುತ್ತಿದೆ ಮತ್ತು ವಿಶ್ವದ ಪ್ರಸಿದ್ಧ ಕಂಪನಿಗಳಲ್ಲಿ ಒಂದಾಗಿದೆ. ತಾನು ಮಾರುತ್ತಿರುವ ಹಾಸಿಗೆಯ ಮೇಲೆ ಮಲಗುವುದರಿಂದ ನೆಮ್ಮದಿಯ ನಿದ್ದೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬಗ್ಗೆ ತಿಳಿದರೆ ನೀವೂ ಆಶ್ಚರ್ಯ ಪಡುವ ರೀತಿಯಲ್ಲಿ ಕಂಪನಿಯು ಅದರ ವಿಶೇಷತೆಯನ್ನು ವಿವರಿಸಿದೆ.
ಈ ವಿಶಿಷ್ಟ ಹಾಸಿಗೆಯನ್ನು ತಯಾರಿಸಲು ಕುದುರೆ ಬಾಲದ ಕೂದಲನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಈ ಹಾಸಿಗೆಯನ್ನು ಖರೀದಿಸುವವರಿಗೆ ಕಂಪನಿಯು 25 ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ. ಸಾಮಾನ್ಯವಾಗಿ, ಹಾಸಿಗೆಗಳನ್ನು ಮಾರಾಟ ಮಾಡುವ ಕಂಪನಿಗಳು ಕೇವಲ 5 ಅಥವಾ 10 ವರ್ಷಗಳ ಖಾತರಿಯನ್ನು ನೀಡುತ್ತವೆ, ಆದರೆ ಹೆಸ್ಟೆನ್ಸ್ ತನ್ನ ವಿಶಿಷ್ಟ ಮತ್ತು ದುಬಾರಿ ಹಾಸಿಗೆಗಳ ಮೇಲೆ 25 ವರ್ಷಗಳ ಖಾತರಿಯನ್ನು ನೀಡುತ್ತಿದೆ. ಕಂಪನಿಯು ಈ ಹಾಸಿಗೆಯ ಬೆಲೆಯನ್ನು 5,42,600 ಪೌಂಡ್ಗಳಲ್ಲಿ ಅಂದರೆ 5 ಕೋಟಿ 52 ಲಕ್ಷಕ್ಕೂ ಹೆಚ್ಚು.
ಇದನ್ನೂ ಓದಿ: 2 ವರ್ಷದ ಈ ಮಗುವಿನ ಐಷಾರಾಮಿ ಜೀವನ ಹೇಗಿದೆ ನೋಡಿ
ವರದಿಗಳ ಪ್ರಕಾರ, ಕಂಪನಿಯು ಗ್ರಾಹಕರಿಗೆ ಹಾಸಿಗೆಯನ್ನು ಖರೀದಿಸುವ ಮೊದಲು ಅದನ್ನು ಪರೀಕ್ಷಿಸಬಹುದು ಎಂಬ ಸೌಲಭ್ಯವನ್ನು ಸಹ ಒದಗಿಸಿದೆ. ಕಂಪನಿಯು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಮಳಿಗೆಯನ್ನು ಹೊಂದಿದೆ, ಅಲ್ಲಿ ಜನರು ಬಯಸಿದಲ್ಲಿ ಹಾಸಿಗೆಯ ಪ್ರಯೋಗವನ್ನು ತೆಗೆದುಕೊಳ್ಳಬಹುದು. ಅಂದಹಾಗೆ, ಯಾರಾದರೂ ಅದನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಆದರೆ ಇನ್ನೂ ಅದರ ಮೇಲೆ ಮಲಗಲು ಬಯಸಿದರೆ, ಕಂಪನಿಯು ಈ ಸೌಲಭ್ಯವನ್ನು ಸಹ ಒದಗಿಸಿದೆ, ಆದರೆ ಇದಕ್ಕಾಗಿ ಒಂದು ರಾತ್ರಿಗಾಗಿ ನೀವು ಸುಮಾರು 8 ಲಕ್ಷ 74 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: