Viral: ಹೇ ನಾನಲ್ಲ ಮಾರ್ರೆ ನಿನ್ನ ಮಗು: ಯಕ್ಷಗಾನದ ಸ್ತ್ರಿ ಪಾತ್ರಧಾರಿ ಜತೆಗೆ ಮಗುವಿನ ಜಗಳ, ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು

ಕರಾವಳಿ ಗಂಡು ಕಲೆ ಯಕ್ಷಗಾನ, ಅದೆಷ್ಟೋ ಕಲಾವಿದರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ತಮ್ಮನ್ನು ಕಲೆಗೆ ಮೀಸಲಾಗಿಸಿರುವ ಕಲಾವಿದರು ರಂಗದಲ್ಲಿ ನೆರೆದಿರುವ ಪ್ರೇಕ್ಷಕರನ್ನು ನಗಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯಕ್ಷಗಾನ ನೋಡಲು ಬಂದಿದ್ದ ಮಗುವನ್ನು ಸ್ತ್ರೀ ವೇಷ ಪಾತ್ರಧಾರಿಯೊಬ್ಬರು ಕಾಲೆಳೆದಿದ್ದಾರೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರ ರು ಬಿದ್ದು ಬಿದ್ದು ನಕ್ಕಿದ್ದಾರೆ.

Viral: ಹೇ ನಾನಲ್ಲ ಮಾರ್ರೆ ನಿನ್ನ ಮಗು: ಯಕ್ಷಗಾನದ ಸ್ತ್ರಿ ಪಾತ್ರಧಾರಿ ಜತೆಗೆ ಮಗುವಿನ ಜಗಳ, ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: May 14, 2025 | 10:36 AM

ಹಲವು ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ಯಕ್ಷಗಾನ (yakshagana) ಕಲೆಯೂ ಕರಾವಳಿ ಜನರೊಂದಿಗೆ ಬೆಸೆದುಕೊಂಡಿದೆ. ಹೌದು, ಪೌರಾಣಿಕ ಪ್ರಸಂಗದ ಜೊತೆಗೆ ಅಲ್ಲಲ್ಲಿ ಯಕ್ಷಗಾನ ಕಲಾವಿದರು ನೆರೆದಿರುವ ಪ್ರೇಕ್ಷಕ ವರ್ಗವನ್ನು ನಗಿಸುವುದಿದೆ. ಕೆಲವೊಮ್ಮೆ ಯಕ್ಷಗಾನದ ನೋಡಲು ಬಂದ ಪ್ರೇಕ್ಷಕರ ಕಾಲೆಳೆಯುವ ಮೂಲಕ ಕಲಾವಿದರು (artist) ತಮಾಷೆಯಾಗಿ ಸಂಭಾಷಣೆ ನಡೆಸುವುದನ್ನು ನೋಡಬಹುದು. ಇದೀಗ ಇಂತಹದೊಂದು ವಿಡಿಯೋದಲ್ಲಿ ವೈರಲ್ ಆಗಿದ್ದು ಇದರಲ್ಲಿ ಯಕ್ಷಗಾನ ಕಲಾವಿದರೊಬ್ಬರು ಮಗುವಿನ ಜೊತೆಗೆ ನಡೆಸಿದ ಸಂಭಾಷಣೆಯೊಂದು ಎಲ್ಲರ ಗಮನ ಸೆಳೆದಿದೆ.

Yakshabhimani ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ರಂಗದಲ್ಲಿರುವ ಸ್ತ್ರಿ ವೇಷಧಾರಿಯೊಬ್ಬರು, ಯಕ್ಷಗಾನ ನೋಡಲು ಬಂದ ಮಗುವಿನೊಂದಿಗೆ ತಮಾಷೆಯಾಗಿ ಸಂಭಾಷಣೆ ನಡೆಸಿರುವುದನ್ನು ನೋಡಬಹುದು. ಸ್ತ್ರಿ ವೇಷಧಾರಿ ಮಗುವಿನೊಂದಿಗೆ ಅದು ಯಾರು ಎಂದು ಕೇಳಿದ್ದು, ಮಗು ಅದು ನನ್ನ ಅಪ್ಪ ಎಂದು ಹೇಳುವುದನ್ನು ನೀವಿಲ್ಲಿ ಕಾಣ ಬಹುದು. ಆ ಬಳಿಕ ನಿನ್ನ ಅಮ್ಮಎಲ್ಲಿ ಎಂದಾಗ ನನ್ನ ಅಮ್ಮ ಮನೆಯಲ್ಲಿದ್ದಾರೆ ಎಂದು ಹೇಳಿದೆ. ನಿನ್ನ ಅಪ್ಪ ಬೇರೆ ಮದುವೆಯಾಗಿದ್ದಾನಂತೆ ಎಂದು ಹೇಳಿದ್ದು, ಆ ವ್ಯಕ್ತಿಯನ್ನೇ ಯಕ್ಷಗಾನ ಕಲಾವಿದರು ಹೌದಾ ಎಂದು ಕೇಳಿದ್ದಾರೆ. ಈ ಸಂಭಾಷಣೆಯನ್ನು ಕೇಳುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರೆಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ. ತದನಂತರದಲ್ಲಿ ಎಲ್ಲಿ ನಿನ್ನ ಅಪ್ಪ, ಎರಡು ಮದ್ವೆಯಾಗಿದ್ದಾನೆ ಎನ್ನುತ್ತಿದ್ದಂತೆ ಎಂತ ಮರೆ ಎಂದು ಮಗುವು ಕೇಳಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಮಹಾಭಾರತ ಕಾಲದಲ್ಲಿ ಅಖಂಡ ಭಾರತ ಹೇಗಿತ್ತು ಗೊತ್ತಾ?
ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರು
ಚಾಟ್ ಜಿಪಿಟಿನಿಂದಲೇ ಗಂಡ ಕುಡಿದ ಕಾಫಿ ಕಪ್ ವಿಶ್ಲೇಷಣೆ ಮಾಡಿದ ಮಹಿಳೆ
ವೇದಿಕೆ ಮೇಲೆ ಬೆಂಗಳೂರು ಕಾಲೇಜಿನ ವಿದ್ಯಾರ್ಥಿಗಳಿಬ್ಬರ ಚಿಂದಿ ಡಾನ್ಸ್

ನೀನು ನನ್ನ ಮಗು, ನಿನ್ನ ಅಪ್ಪನನ್ನು ಬೇಕಾದ್ರೆ ಕೇಳು, ನಿನ್ನ ಹೊತ್ಕೊಂಡು ಹೋಗಿದ್ದು ನಿಮ್ಮಮ್ಮ ಎಂದು ಸ್ತ್ರಿ ವೇಷಧಾರಿ ಕೇಳುತ್ತಿದ್ದಂತೆ ಎಲ್ಲರೂ ಜೋರಾಗಿ ನಗುತ್ತಿದ್ದಾರೆ. ಆದರೆ ಈ ಮಗು ಮಾತ್ರ ನಾನಲ್ಲ ನಿನ್ನ ಮಗು, ನನ್ನಮ್ಮ ಇವ್ರು ಎಂದು ಜೋರಾಗಿ ಹೇಳುತ್ತಿದ್ದಂತೆ ರಂಗದಲ್ಲಿ ಸ್ತ್ರಿ ವೇಷಧಾರಿ ಸೇರಿದಂತೆ ನೆರೆದಿದ್ದ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇದನ್ನೂ ಓದಿ : ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರು

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆ ಪಡೆಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದೂ ಬಳಕೆದಾರರು ಈ ವಿಡಿಯೋಗೆ ಮೆಚ್ಚುಗೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರು, ‘ಈ ಸಂಭಾಷಣೆಯನ್ನು ನೋಡುವುದೇ ಬಹಳ ಚಂದವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ ಪುಟಾಣಿ ಮಗು’ ಎಂದಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ