ಚಲಿಸುತ್ತಿದ್ದ ಬಸ್ನಿಂದ ಬಿದ್ದು ವೃದ್ಧೆ ಸಾವು; ಆಘಾತಕಾರಿ ವಿಡಿಯೋ ಇಲ್ಲಿದೆ
ಬಸ್ನೊಳಗೆ ಕುಳಿತು ಪ್ರಯಾಣಿಸುತ್ತಿದ್ದ 66 ವರ್ಷದ ಮಹಿಳೆ ತನ್ನ ಸ್ಟಾಪ್ ಬಂದಿತೆಂದು ಎದ್ದು ನಿಲ್ಲುವಷ್ಟರಲ್ಲಿ ಚಾಲಕ ಬ್ರೇಕ್ ಒತ್ತಿದ್ದಾನೆ. ಆಗ ಆ ಮಹಿಳೆ ಬ್ಯಾಲೆನ್ಸ್ ತಪ್ಪಿ ಬಸ್ನ ಮೆಟ್ಟಿಲುಗಳ ಮೇಲೆ ಬಿದ್ದು ಹೊರಗೆ ಬಿದ್ದಿದ್ದಾರೆ. ಚಲಿಸುವ ಬಸ್ನಿಂದ ಬಿದ್ದ ಕಾರಣದಿಂದ ಆ ಮಹಿಳೆಗೆ ತೀವ್ರವಾಗಿ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಆಕೆ ಮೃತಪಟ್ಟಿದ್ದಾರೆ. ಮಾರ್ಚ್ 29ರಂದು ಕೋವೈಪುದೂರಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 66 ವರ್ಷದ ಜಿ. ಕಾಮಚ್ಚಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಯಮತ್ತೂರು, ಏಪ್ರಿಲ್ 14: ರಸ್ತೆಯಲ್ಲಿ ಹೋಗುವಾಗ ವಾಹನಗಳು ಡಿಕ್ಕಿಯಾಗಿ ಹೊಡೆದು ಅಪಘಾತವಾಗುವುದು (Bus Accident) ಸಾಮಾನ್ಯ. ಆದರೆ, ಬಸ್ನೊಳಗಿದ್ದರೂ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬಸ್ನೊಳಗೆ ಕುಳಿತು ಪ್ರಯಾಣಿಸುತ್ತಿದ್ದ 66 ವರ್ಷದ ಮಹಿಳೆ ತನ್ನ ಸ್ಟಾಪ್ ಬಂದಿತೆಂದು ಎದ್ದು ನಿಲ್ಲುವಷ್ಟರಲ್ಲಿ ಚಾಲಕ ಬ್ರೇಕ್ ಒತ್ತಿದ್ದಾನೆ. ಆಗ ಆ ಮಹಿಳೆ ಬ್ಯಾಲೆನ್ಸ್ ತಪ್ಪಿ ಬಸ್ನ ಮೆಟ್ಟಿಲುಗಳ ಮೇಲೆ ಬಿದ್ದು ಹೊರಗೆ ಬಿದ್ದಿದ್ದಾರೆ. ಚಲಿಸುವ ಬಸ್ನಿಂದ ಬಿದ್ದ ಕಾರಣದಿಂದ ಆ ಮಹಿಳೆಗೆ ತೀವ್ರವಾಗಿ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಆಕೆ ಮೃತಪಟ್ಟಿದ್ದಾರೆ. ಮಾರ್ಚ್ 29ರಂದು ಕೋವೈಪುದೂರಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 66 ವರ್ಷದ ಜಿ. ಕಾಮಚ್ಚಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಈ ಘಟನೆ ಬಸ್ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು

