AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಅಕ್ರಮ ಬಯಲು, ಹಣ ಪಡೆದು ಮಾಸ್ ಕಾಪಿಗೆ ಬಿಟ್ಟ ಇನ್ವಿಜಿಲೇಟರ್‌ಗಳ ವಿಡಿಯೋ ವೈರಲ್!

ಕೋಲಾರ: ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಅಕ್ರಮ ಬಯಲು, ಹಣ ಪಡೆದು ಮಾಸ್ ಕಾಪಿಗೆ ಬಿಟ್ಟ ಇನ್ವಿಜಿಲೇಟರ್‌ಗಳ ವಿಡಿಯೋ ವೈರಲ್!

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: May 26, 2026 | 10:53 AM

Share

ಕೋಲಾರದ ಟಮಕಾ ಬಳಿಯಿರುವ ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಕೇಂದ್ರದಲ್ಲಿ ಒಂದು ಪೇಪರ್‌ಗೆ 1,000 ದಿಂದ 1,500 ರೂ. ಹಣ ಪಡೆದು ಮೊಬೈಲ್ ಮತ್ತು ಬುಕ್ ಬಳಸಿ ಮಾಸ್ ಕಾಪಿ ಮಾಡಲು ಬಿಡುತ್ತಿದ್ದ ಇನ್ವಿಜಿಲೇಟರ್‌ಗಳ ಅಕ್ರಮದ ವಿಡಿಯೋ ವೈರಲ್ ಆಗಿದೆ.

ಕೋಲಾರ, ಮೇ 26: ಕೋಲಾರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಭಾರಿ ಪರೀಕ್ಷಾ ಅಕ್ರಮವೊಂದು ಬಯಲಿಗೆ ಬಂದಿದೆ. ಕೋಲಾರದ ಟಮಕಾ ಬಳಿಯಿರುವ ಮುಕ್ತ ವಿವಿಯ ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ ಬಿಎ, ಬಿಕಾಂ, ಬಿಸ್ಸಿ ಮತ್ತು ಬಿಬಿಎ ಸೇರಿದಂತೆ ಪ್ರಮುಖ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ನಕಲು ಮಾಡಲು ಮುಕ್ತ ಅವಕಾಶ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ.

ಖಾಸಗಿಯಾಗಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಇಲ್ಲಿನ ಪರೀಕ್ಷಾ ಮೇಲ್ವಿಚಾರಕರು (ಇನ್ವಿಜಿಲೇಟರ್‌ಗಳು) ಭಾರಿ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಮತ್ತು ಪುಸ್ತಕಗಳನ್ನು ಕೊಂಡೊಯ್ಯಲು ಒಂದು ಪೇಪರ್​​ಗೆ 1,000 ದಿಂದ 1,500 ರೂಪಾಯಿಗಳವರೆಗೆ ದರ ನಿಗದಿ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ಮಾಸ್ ಕಾಪಿ ಮಾಡಲು ಇನ್ವಿಜಿಲೇಟರ್‌ಗಳೇ ಖುದ್ದಾಗಿ ಸಹಕರಿಸುತ್ತಿದ್ದಾರೆ. ಸದ್ಯ ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳಿಂದ ಇನ್ವಿಜಿಲೇಟರ್‌ಗಳಾದ ವಿನೋದ್ ಸಿಂಗ್, ರಾಜೇಂದ್ರ, ಪುನಿತ್ ಮತ್ತು ನಂದಿನಿ ಎಂಬುವವರು ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿರುವುದು ಎನ್ನಲಾದ ವಿಡಿಯೋ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Rajendra Simha BL
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More