ಕೊಪ್ಪಳ: ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಮುಸ್ಲಿಂ ಮುಖಂಡ ಲಾಡ್ ಸಾಬ್ ಕೊಳ್ಳಿ ಗಣವೇಷ ಧರಿಸಿ ಹೆಜ್ಜೆ ಹಾಕಿದ್ದು ಗಮನ ಸೆಳೆದಿದೆ. ತಾನು ಬಿಜೆಪಿಯಲ್ಲಿ ಇದ್ದು ಗಣವೇಷ ಹಾಕಲು ತನಗೆ ಯಾವುದೇ ಹಿಂಜರಿಕೆ ಇಲ್ಲ ಎಂದವರು ತಿಳಿಸಿದ್ದಾರೆ. ಆದರೆ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಅವರು ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಹೀಗೆ ನಡೆದುಕೊಂಡಿರುವುದಾಗಿ ಕೆಲವರು ಆರೋಪಿಸಿದ್ದಾರೆ.
ಕೊಪ್ಪಳ, ನವೆಂಬರ್ 03: ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾಗಿರುವ ಲಾಡ್ ಸಾಬ್ ಕೊಳ್ಳಿ ಅವರು ಗಣವೇಷವನ್ನು ಧರಿಸಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಕುಷ್ಟಗಿಯ ಪ್ರಮುಖ ವೃತ್ತದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಅವರ ಭಾಗವಹಿಸುವಿಕೆ ವಿಶೇಷವಾಗಿತ್ತು. ಲಾಡ್ ಸಾಬ್ ಕೊಳ್ಳಿ ಅವರ ಈ ನಡೆಯನ್ನು ರಾಜಕೀಯ ವಿರೋಧಿಗಳು ಟೀಕಿಸಿದ್ದು, ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಅವರು ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಹೀಗೆ ನಡೆದುಕೊಂಡಿರುವುದಾಗಿ ಆರೋಪಿಸಿದ್ದಾರೆ. ಆದರೆ ಇದಕ್ಕೆ ಉತ್ತರಿಸಿರುವ ಲಾಡ್ ಸಾಬ್ ಕೊಳ್ಳಿ, ತಾನು ಬಿಜೆಪಿಯಲ್ಲಿಯೇ ಇರುವ ಕಾರಣ ಗಣವೇಷ ಹಾಕಲು ತನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 03, 2026 12:47 PM
Follow Us

